`ಮಳೆ ನಿಲ್ಲುವವರೆಗೆ` ನಿರ್ಮಾಣಕ್ಕೆ ಮೋಹನ್ ಸಜ್ಜು

 ನಟ-ಲೇಖಕ-ನಿರ್ದೇಶಕ ಮೋಹನ್  ಹೊಸ ಚಿತ್ರ 'ಮಳೆ ನಿಲ್ಲುವವರೆಗೆ' ನಿರ್ಮಾಪಕರಾಗಲು ಹೊರಟಿದ್ದಾರೆ. ಮೋಹನ್ ಹೊಸ ಪ್ರೊಡಕ್ಷನ್ ಹೌಸ್ ಮೋಹನ್ ಟಾಕೀಸ್ ಆರಂಭಿಸಿದ್ದು, ಇದರ ಅಡಿಯಲ್ಲಿ 'ಮಳೆ ನಿಲ್ಲುವವರೆಗೆ'ಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರು ಸ್ವತಃ ಚಿತ್ರದ ಹೀರೋ ಮತ್ತು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಮಾರ್ಚ್ 12ರಂದು ಈ ಚಿತ್ರವನ್ನು ಲಾಂಚ್ ಮಾಡಲಾಗುತ್ತದೆ. 

 ಮಳೆ ನಿಲ್ಲುವರೆಗೆ ಥ್ರಿಲ್ಲರ್ ಮತ್ತು ಹಾರರ್ ಚಿತ್ರವಾಗಿದ್ದು, ಫೇರ್ ಗೇಮ್ ನಾಟಕದಿಂದ ಸ್ಫೂರ್ತಿ ಹೊಂದಿದೆ. ಮೋಹನ್ ಸ್ವತಃ ನಾಟಕವನ್ನು ನಿರ್ದೇಶಿಸಿ ನಟಿಸಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಮೋಹನ್ ಈಗ ನಾಟಕವನ್ನು ಬೆಳ್ಳಿತೆರೆಯ ಮೇಲೆ ತರುವುದಕ್ಕೆ ಕಾರ್ಯೋನ್ಮುಖರಾಗಿದ್ದಾರೆ. ಈ ಚಿತ್ರವು ಸವಾಲಿನದಾಗಿದ್ದು, ಐವರು ವೃದ್ಧರ ಜೀವನದ ಸುತ್ತ ಚಿತ್ರವು ಸುತ್ತುತ್ತದೆ. ಇಡೀ ಚಿತ್ರವನ್ನು ಮಳೆಯಲ್ಲಿ ಚಿತ್ರೀಕರಿಸಿರುವುದು ಚಿತ್ರದ ಇನ್ನೊಂದು ಹೈಲೈಟ್. ಮಾರ್ಚ್ 12ರಂದು ಮಳೆಯ ಮಧ್ಯದಲ್ಲೇ ಮೋಹನ್ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಈ ಚಿತ್ರದಲ್ಲಿ ಹೊಸ ನಾಯಕಿ ಕವಿತಾ ಬೊಹ್ರಾರನ್ನು ಮೋಹನ್ ಪರಿಚಯಿಸುತ್ತಿದ್ದು, ಚಿತ್ರನಟರಾದ ದತ್ತಣ್ಣ, ಶರತ್ ಲೋಹಿತಾಶ್ವ, ದಿಲೀಪ್, ಸುರೇಶ್, ಕರಿಸುಬ್ಬು ಸಹ ತಮ್ಮ ಅಭಿನಯ ನೀಡಲಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery