ಹುಲಿಗೆ ಆಹಾರವಾದ ಕಾವಲುಗಾರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಾವಲುಗಾರನೊಬ್ಬನನ್ನು ಶನಿವಾರ ಸಂಜೆ ಬಿಳಿಯ ಹುಲಿಯೊಂದು ಆಹುತಿ ತೆಗೆದುಕೊಂಡು ದಾರುಣ ಘಟನೆ ಸಂಭವಿಸಿದೆ. 40 ವರ್ಷ ವಯಸ್ಸಿನ ಆಂಜಿ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ ವಾಸವಿದ್ದು, ಒಂದು ವಾರದ ಹಿಂದೆ ತಾತ್ಕಾಲಿಕ ಆಧಾರದ ಮೇಲೆ ನೇಮಕವಾಗಿದ್ದ.

ಆಂಜಿಯನ್ನು ಹುಲಿಗಳಿಗೆ ಆಹಾರ ಹಾಕುವುದಕ್ಕಾಗಿ ನೇಮಿಸಲಾಗಿದ್ದು, ಹಿರಿಯ ಕಾವಲುಗಾರನ ಸಹಾಯಕನಾಗಿದ್ದ. ಶನಿವಾರ ಸಂಜೆ, ಆಂಜಿ ಹುಲಿಗಳಿಗೆ ಆಹಾರ ನೀಡುವುದಕ್ಕೆ ಹುಲಿಯ ಬೋನಿನೊಳಗೆ ತೆರಳಿದ. ಹುಲಿಯ ಬೋನಿಗೆ 3 ಗೇಟ್‌ಗಳಿದ್ದು, ಒಂದು ಸಫಾರಿ ಪ್ರದೇಶಕ್ಕೆ ತೆರೆದುಕೊಳ್ಳುತ್ತದೆ.

ಈ ಗೇಟನ್ನು ಮುಂಜಾನೆ ತೆರೆದಿದ್ದು ಬೋನಿನಿಂದ ಹೊರಗೆ ತೆರಳಿ ಸಂಜೆ ಹುಲಿಗಳು ವಾಪಸು ಬಂದ ಬಳಿಕ ಮುಚ್ಚಲಾಗುತ್ತಿತ್ತು. ಹುಲಿಯ ಬೋನಿನೊಳಗೆ ತೆರಳಿದ ಆಂಜಿ ಸಫಾರಿ ಪ್ರದೇಶಕ್ಕೆ ತೆರೆದುಕೊಳ್ಳುವ ಗೇಟ್ ಮುಚ್ಚುವುದಕ್ಕೆ ವಿಳಂಬ ಮಾಡಿದ್ದ. ಅಷ್ಟರಲ್ಲಿ ಸಫಾರಿಯಲ್ಲಿದ್ದ ಹುಲಿಯೊಂದು ಬೋನಿನೊಕ್ಕೆ ನುಗ್ಗಿ ಅವನ ಮೇಲೆ ಎರಗಿ ಸಫಾರಿ ಪ್ರದೇಶಕ್ಕೆ ಎಳೆದೊಯ್ದಿತ್ತು. ಅವನ ಕಿರುಚಾಟವನ್ನು ಕೇಳಿದ ಇನ್ನೊಬ್ಬ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆಂಜಿ ತೀವ್ರ ಗಾಯದಿಂದ ಮೃತಪಟ್ಟಿದ್ದ.Comments
cOaZOyLxpFrMnLt
Holy Toldoe, so glad I clicked on this site first!
Posted by Nibby

Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery