ತೆರೆದ ಕೊಳವೆಬಾವಿಗೆ ಬಿದ್ದ ಬಾಲಕಿ ಜೀವನ್ಮರಣ ಹೋರಾಟ

ಬೆಳಗಾವಿ: ಬೆಳಗಾವಿಯ ಅಥಣಿಯ ಝುಂಜರವಾಡ ಗ್ರಾಮದಲ್ಲಿ 6 ವರ್ಷದ ಬಾಲಕಿ ಕಾವೇರಿ ತೆರೆದ ಕೊಳವೆ ಬಾವಿಗೆ ಬಿದ್ದು ಸಾವು, ಬದುಕಿನ ಹೋರಾಟ ನಡೆಸಿದ್ದಾಳೆ. ಈ  ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

27 ಅಡಿ ಆಳದಲ್ಲಿ ಬಾಲಕಿಯ ಕೈ ಕ್ಯಾಮರಾದ ಚಿತ್ರದಲ್ಲಿ ಕಂಡುಬಂದಿದೆ. ಕಾವೇರಿ ಬದುಕುಳಿಯಲು ರಕ್ಷಣಾ ಸಿಬ್ಬಂದಿ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಹುಕ್ ಮೂಲಕ ಈ ಬಾಲಕಿಯನ್ನು ಮೇಲೆತ್ತುವ ಪ್ರಯತ್ನ ಎರಡು ಬಾರಿ ವಿಫಲವಾದರೂ ಮೂರನೇ ಬಾರಿ ಕಾವೇರಿಯನ್ನು ಹೊರತೆಗೆಯುವ ಸಾಧ್ಯತೆ ಇದೆ. ಕಾವೇರಿ ಬದುಕಿ ಬಾ ಎಂಬ ಕೂಗು ಮುಗಿಲುಮುಟ್ಟಿದ್ದು, ಅವಳ ತಾಯಿಯ ಗೋಳು ಹೇಳತೀರದಾಗಿದೆ.

ತೆರೆದ ಕೊಳವೆಬಾವಿಗೆ ಕಾವೇರಿ ಬಿದ್ದಕೂಡಲೇ ಆಕೆ ಮೇಲೆ ಬರಲು ಸಹಾಯಕವಾಗಲಿ ಎಂದು ಸವಿತಾ ಹಗ್ಗವನ್ನು ಕೊಳವೆಬಾವಿಯ ಕೆಳಕ್ಕೆ ಬಿಟ್ಟಿದ್ದರು. ಆದರೆ ಸವಿತಾ ಹಗ್ಗ ಕಾವೇರಿ ಮೇಲೆ ಬಿದ್ದಿದ್ದು, ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಕೊಳವೆ ಬಾವಿಗೆ ಬಿದ್ದು ಮಕ್ಕಳು ಸಾಯುತ್ತಿರುವ ಘಟನೆ ಮರುಕಳಿಸುತ್ತಲೇ ಇದ್ದು, ತೋಟದ ಮಾಲೀಕರ ಅಜಾಗರೂಕತೆಯ ಫಲವಾಗಿ ಅಮಾಯಕ ಮಕ್ಕಳು ಬಲಿಯಾಗುತ್ತಿವೆ.

ಸರ್ಕಾರ ತೆರೆದ ಕೊಳವೆ ಬಾವಿಗಳನ್ನು ಅದೇ ಸ್ಥಿತಿಯಲ್ಲಿ ಬಿಡುವುದರ ವಿರುದ್ಧ ಕಠಿಣ ಕ್ರಮಗಳ ಎಚ್ಚರಿಕೆ ನೀಡಿದ್ದರೂ ಮತ್ತೆ ಈ ಪ್ರಕರಣಗಳು ಮರುಕಳಿಸುತ್ತಿರುವೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery