ಈಜುಕೊಳಗಳ ಸೋಂಕಿನಿಂದ ಮಕ್ಕಳನ್ನು ತಪ್ಪಿಸುವುದು ಹೇಗೆ?
ಮೈಸುಡುವ ಬಿಸಿಲಿನಲ್ಲಿ ಸಮೀಪದ ಈಜುಕೊಳಕ್ಕೆ ಇಳಿದು ಮೈತಂಪಾಗಿಸಲು ವಯಸ್ಕರು ಮತ್ತು ಮಕ್ಕಳು ಬಯಸುತ್ತಾರೆ. ಆದರೆ  ಒಂದೇ ಕಾಲದಲ್ಲಿ ಅನೇಕ ಜನರು ಈಜುಕೊಳದ ನೀರನ್ನು ಹಂಚಿಕೊಳ್ಳುವುದರಿಂದ ಈಜುಕೊಳಗಳು ಸೋಂಕುಗಳು ಮತ್ತು ರೋಗಗಳ ತಾಣವಾಗುವ ಸಾಧ್ಯತೆಯಿದೆ. ಪೂರ್ಣವಾಗಿ ಅಭಿವ್ರದ್ಧಿಯಾಗದ ರೋಗನಿರೋಧಕ ವ್ಯವಸ್ಥೆ ಹೊಂದಿರುವುದರಿಂದ ಮಕ್ಕಳು ಈಜು ಕೊಳಗಳಲ್ಲಿ ಸುಲಭವಾಗಿ ಸೋಂಕುಗಳಿಗೆ ಒಳಗಾಗುತ್ತವೆ. 

ಈಜು ಕೊಳಗಳನ್ನು ಸೂಕ್ತವಾಗಿ ಸ್ವಚ್ಛಮಾಡದಿದ್ದರೆ, ಅನೇಕ ಸೋಂಕುಗಳಿಗೆ ತಾಣವಾಗುತ್ತದೆ. ಮಕ್ಕಳು ಈಜುಕೊಳದಲ್ಲಿರುವಾಗ ಸಾಮಾನ್ಯವಾಗಿ ಕಿವಿಗಳು, ಮೂಗುಗಳು ಮತ್ತು ಗಂಟಲಿನ ಸೋಂಕುಗಳಿಗೆ ಒಳಗಾಗುವ ಸಂಭವವಿರುತ್ತದೆ ಎಂದು ಇಂತಹ ಪ್ರಕರಣಗಳನ್ನು ನಿಭಾಯಿಸುತ್ತಿರುವ ಮೀರತ್ ಮೂಲದ ಹಿರಿಯ ಮಕ್ಕಳ ತಜ್ಞ ನೀರಜ್ ಕಾಂಬೋಜ್ ಹೇಳಿದ್ದಾರೆ.
 
ಈಜುಕೊಳಕ್ಕೆ ಹೋಗುವ ಅನೇಕ ಮಕ್ಕಳು ಕಿವಿ ನೋವಿನ ಬಗ್ಗೆ ದೂರುತ್ತಾರೆ. ಇದರ ಜೊತೆಗೆ ಗಂಟಲು ಮತ್ತು ಮೂಗಿನ ಸೋಂಕಿನ ಪ್ರಕರಣಗಳು ಕೂಡ ಸಂಭವಿಸುತ್ತವೆ. ಮಕ್ಕಳು ಕಣ್ಣಿನ ಉರಿಯೂತ ಮತ್ತು ಚರ್ಮ ರೋಗಗಳಿಗೆ ಕೂಡ ಗುರಿಯಾಗುವ ಸಂಭವವಿರುತ್ತದೆ ಎಂದು ಕಾಂಬೋಜ್ ಹೇಳಿದ್ದಾರೆ. ಆದರೆ ಕೆಲವು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ, ಅದನ್ನು ತಪ್ಪಿಸಬಹುದು ಎಂದಿದ್ದಾರೆ.
 
ಪೋಷಕರು ಈಜುಕೊಳಕ್ಕೆ ಅವರೇ ಭೇಟಿ ನೀಡಿ ಮಕ್ಕಳಿಗೆ ಅವಕಾಶ ನೀಡುವ ಮುಂಚೆ ನೈರ್ಮಲ್ಯ ಮತ್ತು ಸುರಕ್ಷತೆ ಮಟ್ಟಗಳನ್ನು ಪರಿಶೀಲಿಸಬೇಕು. ಅಲ್ಲದೇ ಮಕ್ಕಳಿಗೆ ಶೀತ, ಕೆಮ್ಮಿದ್ದಾಗ ಮಕ್ಕಳು ಈಜುಕೊಳಕ್ಕೆ ತೆರಳುವುದು ಬೇಡ ಎಂದು ಕಾಂಬೋಜ್ ಸಲಹೆ ಮಾಡಿದ್ದಾರೆ.

ಈಜು ಕೊಳಗಳಲ್ಲಿ ಸೋಂಕುಗಳನ್ನು ತಪ್ಪಿಸಲು ಸಮರ್ಪಕ ಸ್ವಚ್ಛತೆ ಮತ್ತು ನಿರ್ವಹಣೆಗೆ ಒಳಪಡಿಸಬೇಕು. ಈಜುಕೊಳಕ್ಕೆ ಪ್ರವೇಶಿಸುವ ಮುಂಚೆ ಮತ್ತು ಈಜುಕೊಳದಿಂದ ನಿರ್ಗಮಿಸಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಹೊಂದಿರಬೇಕು ಎಂದು ವೈಎಂಸಿಎ ಈಜುಸೌಲಭ್ಯಗಳ ವ್ಯವಸ್ಥಾಪಕ ಮನೋಜ್ ಮುದ್ಗಲ್ ಹೇಳಿದ್ದಾರೆ. 
 
ಈಜುಕೊಳಕ್ಕೆ ಪ್ರವೇಶಿಸುವುದಕ್ಕೆ  ಮುಂಚೆ ತಾವು ಜನರ ದೈಹಿಕ ತಪಾಸಣೆ ಮಾಡುವುದಾಗಿ ಮುದ್ಗಲ್ ಹೇಳಿದ್ದಾರೆ. ಜನರಿಗೆ ಸಾಮಾನ್ಯವಾಗಿ ಪಾದಗಳಲ್ಲಿ ಮತ್ತು ಬೆರಳು ಸಂದಿಗಳಲ್ಲಿ ಸೋಂಕುಗಳಿರುತ್ತವೆ. ಆದ್ದರಿಂದ  ಈಜುಕೊಳ ಉಪಯೋಗಿಸುವ ಮುನ್ನ ನಾವು ಅವರ ಪಾದಗಳನ್ನು ಪೊಟಾಸಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆಯುವುದಕ್ಕೆ ಸಿದ್ಧವಾಗಿಟ್ಟಿರುತ್ತೇವೆ ಎಂದು ಮುದ್ಗಲ್ ಹೇಳಿದ್ದಾರೆ. 


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery