ವಾರಕ್ಕೆ 55 ಗಂಟೆಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೆ ಸ್ಟ್ರೋಕ್ ಅಪಾಯ ಹೆಚ್ಚು

ನೀವು ಆಫೀಸಿನಲ್ಲಿ ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತೀರಾ, ಹಾಗಾದರೆ ನಿಮ್ಮ ಆರೋಗ್ಯ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೆ ನೀವು ಸ್ಟ್ರೋಕ್ ಆಘಾತ ಅನುಭವಿಸುವುದಕ್ಕೆ ಸಮೀಪವಿರುತ್ತೀರಿ ಎಂದು ಸಂಶೋಧಕರು ಹೇಳಿದ್ದಾರೆ.

ಸುಮಾರು 6 ಲಕ್ಷ ಜನರನ್ನು ಒಳಗೊಂಡ ಅಧ್ಯಯನದಲ್ಲಿ ಹೆಚ್ಚು ಅವಧಿ ಕೆಲಸ ಮಾಡುವ ಜನರಿಗೆ ವಾರಕ್ಕೆ 35ರಿಂದ 40 ಗಂಟೆ ಕೆಲಸ ಮಾಡುವ ಜನರಿಗಿಂತ ಶೇ. 33ರಷ್ಟು ಪಾರ್ಶ್ವವಾಯುವಿನ ಅಪಾಯವಿರುತ್ತದೆ ಮತ್ತು ಶೇ. 13ರಷ್ಟು ಹೃದಯಬೇನೆಯ ಅಪಾಯವಿರುತ್ತದೆ. ಲ್ಯಾನ್ಸೆಟ್‌ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದ್ದು, ವಾರಕ್ಕೆ 40ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಜನರಲ್ಲಿ ಪ್ರತೀ ಗಂಟೆಗೂ ಅಪಾಯ ಹೆಚ್ಚಾಗುತ್ತದೆ. 48 ಗಂಟೆ ಕೆಲಸ ಮಾಡುವ ಜನರಲ್ಲಿ ಶೇ. 10ರಷ್ಟು ರಿಸ್ಕ್ ಇರುತ್ತದೆ ಮತ್ತು 54 ಗಂಟೆ ಕೆಲಸ ಮಾಡುವ ಜನರಲ್ಲಿ ಶೇ. 27 ರಿಸ್ಕ್ ಇರುತ್ತದೆ.

ಅಧ್ಯಯನವು ಸುದೀರ್ಘ ಅವಧಿಯದ್ದಾಗಿದ್ದು, ದೀರ್ಘಾವಧಿ ಕೆಲಸ ಮತ್ತು ಹೃದಯಆರೋಗ್ಯದ ನಡುವೆ ಸಂಬಂಧವನ್ನು ಅಧ್ಯಯನ ಮಾಡಿದರು. ಧೂಮಪಾನ ಮೊದಲಾದ ಅಂಶಗಳನ್ನು ನಿಯಂತ್ರಣದಲ್ಲಿಟ್ಟರೂ ಅಪಾಯ ಹೆಚ್ಚುವುದಕ್ಕೆ ಕಾರಣವೇನು ಎಂದು ಸಂಶೋಧಕರು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

  ಮಾನಸಿಕ ಒತ್ತಡ, ಕಳಪೆ ಆಹಾರಕ್ರಮ, ವ್ಯಾಯಾಮದ ಕೊರತೆಯಿಂದ ಸ್ಟ್ರೋಕ್ ಅಪಾಯ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರುವ ಜನರು ದೀರ್ಘಾವಧಿಯ ಕೆಲಸ ಕೈಬಿಡಬೇಕು ಎಂದು ಸಂಶೋಧಕರು ಹೇಳಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery