20 ವರ್ಷದ ಸಾಲಕ್ಕೆ ಪ್ರಥಮ ಮನೆಯ ವೆಚ್ಚ 2.4 ಲಕ್ಷ ರೂ. ಕಡಿತ

 ನವದೆಹಲಿ:ನೀವು ವಾರ್ಷಿಕ 18 ಲಕ್ಷ ರೂ. ಗಳಿಸುತ್ತಿದ್ದರೆ, ನಿಮ್ಮ ಪ್ರಥಮ ಮನೆ ಖರೀದಿಯ ವೆಚ್ಚವು 2.4 ಲಕ್ಷ ರೂ.ಗಳಷ್ಟು ಕಡಿಮೆಯಾಗುತ್ತದೆ. ಸರ್ಕಾರ ನಿಮ್ಮ ಗೃಹಸಾಲದ ಬಡ್ಡಿಯ ಒಂದು ಭಾಗಕ್ಕೆ ಸಬ್ಸಿಡಿ ನೀಡುವುದರಿಂದ ಇದು ಸಾಧ್ಯವಾಗುತ್ತದೆ.ಪ್ರಸಕ್ತ ವಾರ್ಷಿಕ 6 ಲಕ್ಷ ರೂ. ಗಳಿಕೆದಾರರಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿತ್ತು.

ಸರ್ಕಾರ ಸ್ಥಿರಾಸ್ತಿ ಮಾರುಕಟ್ಟೆಯನ್ನು ಉತ್ತೇಜಿಸುವ ಮೂಲಕ 2022ರೊಳಗೆ ಸರ್ವರಿಗೂ ಗೃಹಸೌಲಭ್ಯ ಸಿಗುವಂತಾಗಲು ಎರಡು ಹೊಸ ಸಬ್ಸಿಡಿ ಹಂತಗಳನ್ನು ಪ್ರಕಟಿಸಿದೆ. ಈ ಸಬ್ಸಿಡಿ ಹಂತಗಳು ಪ್ರಸಕ್ತ 15 ವರ್ಷಗಳ ಕಾಲಮಿತಿಗೆ ಬದಲಾಗಿ 20 ವರ್ಷಗಳ ಕಾಲಾವಧಿಯ ಸಾಲಗಳಿಗೆ ಸಿಗುತ್ತದೆ.

ಕಳೆದ ಡಿ.31, 2016ರಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಎರಡು ಸಬ್ಸಿಡಿ ಯೋಜನೆಗಳನ್ನು ಪ್ರಕಟಿಸಿತು. ಗೃಹಖರೀದಿದಾರರು ಅವರ ಆದಾಯ ಮಿತಿಯನ್ನು ಅವಲಂಬಿಸಿ ಭಿನ್ನ ದರಗಳಲ್ಲಿ ಸಬ್ಸಿಡಿ ಪಡೆಯುತ್ತಾರೆ. 6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಜನರು ಅವರ ಸಾಲದ ಮೊತ್ತ ಎಷ್ಟೇ ಇರಲಿ, 6 ಲಕ್ಷ ರೂ. ಅಸಲಿನ ಭಾಗಕ್ಕೆ ಶೇ. 6.5 ಶೇಕಡಾವಾರು ಪಾಯಿಂಟ್ ಸಬ್ಸಿಡಿ ಪಡೆಯಲಿದ್ದಾರೆ.

ಶೇ.9ರ ಬಡ್ಡಿದರದಲ್ಲಿ ಸಾಲ ಪಡೆದರೆ, 6 ಲಕ್ಷಕ್ಕೆ ಶೇ.2.5 ಬಡ್ಡಿದರ ಮತ್ತು ಉಳಿದ ಮೊತ್ತಕ್ಕೆ ಶೇ. 9ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.
ಮುಂದಿನ ಆವರಣದಲ್ಲಿ ಜನರು ವಾರ್ಷಿಕ 12 ಲಕ್ಷ ರೂ. ಗಳಿಕೆ ಮಾಡುತ್ತಿದ್ದರೆ, 9 ಲಕ್ಷ ಅಸಲಿನ ಭಾಗಕ್ಕೆ ಶೇ. 4 ಶೇಕಡಾವಾರು ಅಂಶಗಳ ಬಡ್ಡಿ ಸಬ್ಸಿಡಿ ಸಿಗುತ್ತದೆ. ವಾರ್ಷಿಕ 18 ಲಕ್ಷ ಆದಾಯದ ಅತ್ಯಧಿಕ ಆದಾಯ ವಿಭಾಗದಲ್ಲಿ 12 ಲಕ್ಷ ರೂ. ಅಸಲಿನ ಭಾಗಹಕ್ಕೆ ಶೇ. 3 ಶೇಕಡಾವಾರು ಪಾಯಿಂಟ್ ಸಬ್ಸಿಡಿ ಸಿಗುತ್ತದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery