ರಾತ್ರಿ ವೇಳೆ ಸ್ಮಶಾನಕ್ಕೆ ಹೋಗಬಾರದೇಕೆ?

ನಿಮ್ಮ ಅಜ್ಜ ಅಜ್ಜಿಯರು ಅಥವಾ ಹಿರಿಯರು ರಾತ್ರಿ ವೇಳೆಯಲ್ಲಿ ಸ್ಮಶಾನಕ್ಕೆ ಹೋಗಬಾರದೆಂದು ಹಿತವಚನ ನೀಡುವುದನ್ನು ಕೇಳಿರಬಹುದು. ಇದನ್ನು ಸುಮ್ಮನೇ ನಮ್ಮನ್ನು ಹೆದರಿಸಲು ಹೇಳುತ್ತಿರಬಹುದೇ ಅಥವಾ ಅದಕ್ಕೆ ಕಾರಣವಿರಬಹುದೇ ಎಂದು ನೀವು ಯೋಚಿಸಿರಬಹುದು.

ಆದರೆ ರಾತ್ರಿ ವೇಳೆಯಲ್ಲಿ ಸ್ಮಶಾನಕ್ಕೆ ಹೋಗಬಾರದೆಂಬುದಕ್ಕೆ ವೈಜ್ಞಾನಿಕ ಮತ್ತು ಮಾನಸಿಕ ಕಾರಣವಿದೆ.  ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಮಗೆ ತಿಳಿದಿರುವ ಜಗತ್ತು ಮಾನವನಿಗೆ ತಿಳಿದಿರದ ಅನೇಕ ಆಯಾಮಗಳಿಂದ ಕೂಡಿದೆ. ಬೌದ್ಧ ಗ್ರಂಥಗಳಲ್ಲಿ ಪ್ರೇತಗಳ ಅಸ್ತಿತ್ವವನ್ನು ಕೊಡಲಾಗಿದೆ.

ವಿಜ್ಞಾನದಲ್ಲಿ ಈ ವಿವಿಧ ಆಯಾಮಗಳ ಬಗ್ಗೆ ಉತ್ತರ ಸಿಕ್ಕಿಲ್ಲವಾದರೂ ಅನುಭವ ನಮಗೆ ಬೇರೆಯದನ್ನೇ ಹೇಳುತ್ತದೆ.
 ಹಿಂದೂ ಧರ್ಮದಲ್ಲಿ ಭಗವಾನ್ ಶಿವ ಮತ್ತು ಅವನ ಪತ್ನಿ ಕಾಳಿದೇವತೆ ಸ್ಮಶಾನದ ಅಧಿಪತಿಗಳೆಂದು ಪರಿಗಣಿಸಲಾಗಿದೆ. ಭಗವಾನ್ ಶಿವ ಮೈತುಂಬ ಬೂದಿ ಹಚ್ಚಿಕೊಂಡು ಧ್ಯಾನ ಮಾಡಿದರೆ ಕಾಳಿ ದೇವತೆ ದುಷ್ಟ ಪ್ರೇತಗಳನ್ನು ಓಡಿಸುತ್ತಾಳೆ.

ಮನಃಶಾಸ್ತ್ರವು ನಾವು ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕತ್ತಲು ಕೆಲವು ಅಪರಿಚಿತ ವಸ್ತುಗಳ ಜತೆ ಸಂಬಂಧ ಹೊಂದಿರುತ್ತದೆ. ಈ ಕಾಲದಲ್ಲಿ ದುಷ್ಟ ಶಕ್ತಿಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತದೆಂದು ಹೇಳಲಾಗುತ್ತದೆ.

ರಾತ್ರಿ ವೇಳೆ ದುಷ್ಟಶಕ್ತಿಗಳು ಸಕ್ರಿಯವಾಗಿದ್ದು ದುರ್ಬಲ ಮನಸ್ಸಿನ ವ್ಯಕ್ತಿಯ ಮೇಲೆ ಮೇಲುಗೈ ಸಾಧಿಸುತ್ತದೆ.

ಈ ಪರಿಕಲ್ಪನೆಗಳು ಕಡಿಮೆ ಇಚ್ಛಾಶಕ್ತಿಯನ್ನು ಹೊಂದಿರುವ ದುರ್ಬಲ ಮನಸ್ಥಿತಿಯ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿಯೊಬ್ಬ ಮಾನಸಿಕವಾಗಿ ದುರ್ಬಲ ಅಥವಾ ಖಿನ್ನತೆಯಿಂದ ಕೂಡಿದ್ದರೆ ಸಾವಿಗೆ ಸಂಬಂಧಿಸಿದ ಸ್ಮಶಾನ ಮುಂತಾದ ಜಾಗಗಳಲ್ಲಿ ಅವನ ನಕಾರಾತ್ಮಕ ಚಿಂತನೆಗಳು ಹೆಚ್ಚುತ್ತವೆ.


ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಮನುಷ್ಯನ ಮೇಲೆ ಅನೇಕ ರೀತಿಯಲ್ಲಿ ಪ್ರಭಾವ ಬೀರುತ್ತದೆ. ದುರ್ಬಲ ಮನಸ್ಥಿತಿಯ, ಭಯಗ್ರಸ್ಥ ವ್ಯಕ್ತಿಯ ಮೇಲೆ ನಕಾರಾತ್ಮಕ ಯೋಚನೆಗಳು ಹೆಚ್ಚು ಪ್ರಭಾವ ಬೀರುತ್ತವೆ. ಆದ್ದರಿಂದ ಸ್ಮಶಾನಕ್ಕೆ ರಾತ್ರಿವೇಳೆ ಹೋಗುವುದನ್ನು ನಿಷೇಧಿಸಲಾಗುತ್ತದೆ.
 Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery