ಲೈಂಗಿಕ ಕಿರುಕುಳದಿಂದ ಮನನೊಂದ ನಟಿ ಶ್ರುತಿರಾಜ್ ಆತ್ಮಹತ್ಯೆ ಯತ್ನ

ಬೆಂಗಳೂರು: ಹಲವು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಶ್ರುತಿ ರಾಜ್ ಅವರು ಶ್ರೀನಿವಾಸ್ ಎಂಬವನು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಮನನೊಂದು ಕುಟುಂಬ ಸಮೇತ ಪೊಲೀಸರ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಶ್ರುತಿರಾಜ್ ಭಜರಂಗಿ ಚಿತ್ರದಲ್ಲಿ ಶಿವಣ್ಣನ ತಂಗಿಯ ಪಾತ್ರದಲ್ಲಿ ಅಭನಯಿಸಿದ್ದರು.

ಶ್ರೀನಿವಾಸ್ ಮಾಧ್ಯಮಗಳಲ್ಲಿ ತನ್ನನ್ನು ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಶ್ರೀನಿವಾಸ ಶ್ರುತಿರಾಜ್‌ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ  ಶ್ರುತಿರಾಜ್ ಸಿನಿಮಾಗಳಲ್ಲಿ ಅಭಿನಯಿಸಿದಾಳೆಂಬ ಕಾರಣದ ಮೇಲೆ ಶ್ರೀನಿವಾಸ್ ಕುಟುಂಬದ ಒತ್ತಡದಿಂದ ಶ್ರುತಿರಾಜ್‌ಳಿಂದ ಬೇರೆಯಾದ.

ಶ್ರುತಿರಾಜ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡತೊಡಗಿದ. ಶ್ರೀನಿವಾಸ್ ಗೌಡ  ಯೂಟ್ಯೂಬ್‌ಗಳಲ್ಲಿ ನನ್ನ ಫೋಟೋ ಹಾಕಿ ತೇಜೋವಧೆ ಮಾಡುತ್ತಾನೆ. ನೀನು ಕೀಳು ಜಾತಿಯವಳು ಎಂದು ಅವಹೇಳನ ಮಾಡುತ್ತಾನೆ. ನಿನ್ನನ್ನು ಪ್ರೀತಿಸಿದ್ದೇ ಗ್ರೇಟ್ ಎಂದು ಹೇಳುತ್ತಾನೆ ಎಂದು ಶ್ರುತಿರಾಜ್ ಟಿವಿ ಮಾಧ್ಯಮಕ್ಕೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಶ್ರೀನಿವಾಸ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery