ಸಾವಿನೊಂದಿಗೆ ಸೆಣೆಸಾಡುತ್ತಿರುವ ಬಾಲಕನಿಗೆ 16 ಮೆದುಳು ಶಸ್ತ್ರಚಿಕಿತ್ಸೆಗಳು

ನಾಂದೇಡ್: ಇವನು 15 ವರ್ಷ ವಯಸ್ಸಿನ ಬಾಲಕ. 2015ರಿಂದೀಚೆಗೆ ಸಾವಿನೊಂದಿಗೆ ಇವನ ಸೆಣೆಸಾಟ. 16 ಮೆದುಳು ಶಸ್ತ್ರಚಿಕಿತ್ಸೆಗಳು ಮತ್ತು ಫಿಸಿಯೋತೆರಪಿ ಸೆಷನ್‌ಗಳಲ್ಲಿ ಎಣಿಸಲಾಗದಷ್ಟು ಗಂಟೆಗಳನ್ನು ಕಳೆದಿದ್ದರೂ ಬಾಲಕನ ಜೀವನೋತ್ಸಾಹ ಬತ್ತಿಹೋಗಿಲ್ಲ.

ಮತ್ತೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಬಾಲಕನ ಮನಸ್ಸಿನಲ್ಲಿದೆ. ಶಾಲೆಯಿಂದ ಹಿಂತಿರುಗುವಾಗ ದಿವ್ಯಾಂಶ್ ಅಪಘಾತವೊಂದಕ್ಕೆ ಸಿಲುಕಿ ತಲೆಗೆ ಭೀಕರ ಪೆಟ್ಟು ಬಿದ್ದು, ಕೋಮಾ ಸ್ಥಿತಿಗೆ ಜಾರಿದ. ಈ ಘಟನೆಯ ಬಳಿಕ ಜೀವನವು ಕುಟುಂಬಕ್ಕೆ ನರಕಸದೃಶವಾಯಿತು.

ಕುಟುಂಬವು ಅವನ ಚಿಕಿತ್ಸೆಗೆ ಈಗಾಗಲೇ 50 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಇನ್ನಷ್ಟು ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸುವ ಶಕ್ತಿ ಕುಟುಂಬಕ್ಕಿಲ್ಲ. ಬಾಲಕನ ಮೆದುಳನ್ನು ಸೋಂಕುಗಳಿಂದ ರಕ್ಷಿಸಲು ಬಾಲಕನಿಗೆ ತಲೆಬುರುಡೆ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಿದ್ದು ಅದಕ್ಕೆ 18 ಲಕ್ಷ ರೂ.ಗಳು ಖರ್ಚಾಗುತ್ತದೆ. ತಮ್ಮ ಪ್ರೀತಿಯ ಪುತ್ರನ ಜೀವವುಳಿಸುವುದಕ್ಕಾಗಿ ಕುಟುಂಬ ಎಲ್ಲವನ್ನೂ ಕಳೆದುಕೊಂಡಿದೆ.


ಸೆಪ್ಟೆಂಬರ್ 21ರ ಆ ದುರ್ದಿನದಂದು ದಿವ್ಯಾಂಶ್ ಶಾಲೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ. ದಿವ್ಯಾಂಶ್ ಪೊದ್ದಾರ್ ಇಂಟರ್ ನ್ಯಾಷನಲ್ ಸ್ಕೂಲ್ 9ನೇ ತರಗತಿ ವಿದ್ಯಾರ್ಥಿ.  ದುರದೃಷ್ಟವಶಾತ್  ಅವನು ಪ್ರಯಾಣಿಸುತ್ತಿದ್ದ ವ್ಯಾನ್ ರಸ್ತೆಯ ಆಚೆಯ ಬದಿಯಲ್ಲಿ ನಿಲ್ಲಿಸಿತು. ದಿವ್ಯಾಂಶ್ ರಸ್ತೆ ದಾಟಲು ಯತ್ನಿಸಿದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವನನ್ನು ಮೇಲೆ ಒಗೆದು ಕೆಳಕ್ಕೆ ಬೀಳುವಾಗ ತಲೆ ರಸ್ತೆಗೆ ಬಡಿದು ಪ್ರಜ್ಞೆ ತಪ್ಪಿದ್ದ. ನಾಂದೇಡ್ ಯಶೋದಾ ಆಸ್ಪತ್ರೆಗ ಕೂಡಲೇ ಸೇರಿಸಲಾಯಿತಾದರೂ ದಿವ್ಯಾಂಶ್ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಸಾವು, ಬದುಕಿನ ನಡುವೆ ಅವನ ಹೋರಾಟ ಸಾಗಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery