ಭಾರತದ ಎದಿರೇಟು: ಆಸೀಸ್ ವಿರುದ್ಧ ಜಯ, ಸ್ಕೋರು ಸಮಸಮ

ಬೆಂಗಳೂರು: ರವಿಚಂದ್ರನ್ ಅಶ್ವಿನ್ ಅಮೋಘ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 112 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಭಾರತ 75 ರನ್‌ಗಳಿಂದ ಜಯಗಳಿಸಿ ಸ್ಕೋರನ್ನು 1-1ರಿಂದ ಸಮಮಾಡಿಕೊಂಡಿದೆ. ಭಾರತದ ಬೌಲರುಗಳು ಬೌಲಿಂಗ್ ಪಿಚ್ಚನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದರಿಂದ ಆಸೀಸ್ ಬ್ಯಾಟಿಂಗ್ ಲೈನ್ ಅಪ್ ಒತ್ತಡದಿಂದ ಧೂಳೀಪಟವಾಯಿತು.

ಅಶ್ವಿನ್ 41 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್ ಎರಡು ನಿರ್ಣಾಯಕ ವಿಕೆಟ್ ಗಳಿಸಿದರು. ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಗಳಿಸಿದರು.ಭಾರತ  ನಿನ್ನೆಯ ಮೊತ್ತವಾದ 213ಕ್ಕೆ 4 ವಿಕೆಟ್ ಕಳೆದುಕೊಂಡು ದಿನದಾಟ ಆರಂಭಿಸಿದಾಗ ಆಸೀಸ್‌ಗೆ ಚೇಸ್ ಮಾಡಲು ದೊಡ್ಡ ಗುರಿಯನ್ನು ಮುಟ್ಟುವುದೆಂದು ಭಾವಿಸಲಾಗಿತ್ತು.

 

ಆದಾಗ್ಯೂ, ಹ್ಯಾಜಲ್ ವುಡ್ ಮತ್ತು ಸ್ಟಾರ್ಕ್ ಸ್ವಲ್ಪ ಅಂತರದಲ್ಲೇ ಔಟಾಗಿದ್ದರಿಂದ ಇನ್ನೊಂದು ಬ್ಯಾಟಿಂಗ್ ಕುಸಿತಕ್ಕೆ ಭಾರತ ಒಳಗಾಯಿತು.
ಆತಿಥೇಯ ತಂಡ ಕೇವಲ 36 ರನ್‌ಗಳಾಗುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 274 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಚೇತೇಶ್ವರ್ ಪೂಜಾರ್ 92 ರನ್‌‍ಗಳೊಂದಿಗೆ ಟಾಪ್ ಸ್ಕೋರರ್ ಎನಿಸಿದರು ಮತ್ತು ಅಜಿಂಕ್ಯಾ ರಹಾನೆ ನಿರ್ಣಾಯಕ 52 ರನ್ ಗಳಿಸಿದರು. ಹ್ಯಾಜಲ್ ವುಡ್ ಪ್ರವಾಸಿ ತಂಡದ ಪರ 6 ವಿಕೆಟ್ ಕಬಳಿಸಿದರು. ಪ್ರಥಮ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಕಳಪಎ ಬ್ಯಾಟಿಂಗ್‌ನಿಂದ ಹೀನಾಯ ಸೋಲು ಅನುಭವಿಸಿದ ಭಾರತ ಎರಡನೇ ಟೆಸ್ಟ್‌ನಲ್ಲಿ ಅಮೋಘ ಬೌಲಿಂಗ್‌ನಿಂದ ಗೆದ್ದು ಪ್ರತ್ಯುತ್ತರ ನೀಡಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery