ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದು

ಚೆನ್ನೈ: ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕಾವೇರಿ ವಿವಾದದ ವಿಚಾರವಾಗಿ 9 ವರ್ಷಗಳ ಹಿಂದೆ ತಾವು ನೀಡಿದ್ದ ಹೇಳಿಕೆಗೆ ವಿಷಾದ ಸೂಚಿಸಿದ ಬಳಿಕ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನು ರದ್ದು ಮಾಡಿದ್ದಾರೆ.

ದರ್ಶನ್ ಅಭಿನಯದ ಚಕ್ರವರ್ತಿ ಹಾಗೂ ಶ್ರೀನಿವಾಸ ಕಲ್ಯಾಣ ಹಾಗೂ ಶುದ್ಧಿ ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಮುಂಗಡ ಕಾಯ್ದಿರಿಸಿದ ಟಿಕೆಟ್'ಗಳನ್ನು ಸಹ ರದ್ದುಗೊಳಿಸಲಾಗಿದೆ.

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನು ರದ್ದು ಮಾಡುವ ಮೂಲಕ ದ್ವೇಷದ ಕ್ರಮ ಅನುಸರಿಸಿದರೆ ನಾವು ಕೂಡ ತಮಿಳು ಚಿತ್ರಗಳ ಪ್ರದರ್ಶನವನ್ನು ಇಲ್ಲಿ ರದ್ದುಗೊಳಿಸುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ಸಾರಾ. ಗೋವಿಂದು ಎಚ್ಚರಿಸಿದ್ದಾರೆ. ಈ ನಡುವೆ ಸತ್ಯರಾಜ್ ತಮ್ಮ ಹೇಳಿಕೆಗೆ ವಿಷಾದ ಸೂಚಿಸುವ ಜತೆಗೆ ತಮಿಳರಿಗೆ ಅಭಯವನ್ನು ನೀಡಿ ಕಾವೇರಿ ವಿಚಾರವಾಗಿ ನಮ್ಮ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ನಿಮ್ಮ ಜತೆಗಿದ್ದೇನೆ ಎಂದು ಕೊಂಕು ಮಾತನ್ನು ಕೂಡ ಆಡಿ ಕನ್ನಡಿಗರನ್ನು ಕೆಣಕಿದ್ದಾರೆ.

9 ವರ್ಷದ ಹಿಂದೆ ಅವರು ವಾಟಾಳ್ ನಾಗರಾಜ್ ಒಳಗೊಂಡಂತೆ ಕನ್ನಡ ಹೋರಾಟಗಾರರನ್ನು ಲೇವಡಿ ಮಾಡಿ ಮಾತನಾಡಿದ್ದರು.ಆದರೆ ಈ ವಿಚಾರವಾಗಿ ಯಾವುದೇ ಕ್ಷಮೆ ಕೇಳದೇ ಬರೀ ವಿಷಾದ ಸೂಚಿಸಿದ್ದಲ್ಲದೇ ತಮಿಳರಿಗೆ ಕಾವೇರಿ ವಿಚಾರದಲ್ಲಿ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದು ಕನ್ನಡಿಗರನ್ನು ಮತ್ತೆ ಕೆಣಕಿದಂತಾಗಿದೆ.



Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery