ಮ್ಯಾಗಿ ಮಾತ್ರವಲ್ಲ, ಎಲ್ಲಾ ರೆಡಿಮೇಡ್ ಆಹಾರದಿಂದ ದೇಹಕ್ಕೆ ಹಾನಿ

ನವದೆಹಲಿ: ಮ್ಯಾಗಿ ನೂಡಲ್ಸ್‌‌ನಲ್ಲಿ ವಿಷಕಾರಿ ಸೀಸದ ಅಂಶವಿದ್ದು, ಅದರ ಮಾರಾಟವನ್ನು ಅನೇಕ ರಾಜ್ಯಗಳು ನಿಷೇಧಿಸಿರುವ ನಡುವೆ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಂಗಾಂಗ ಹಾನಿಉಂಟುಮಾಡಬಹುದಾದ ಆಹಾರ ಉತ್ಪನ್ನ ಮ್ಯಾಗಿ ಮಾತ್ರವಲ್ಲ. ಎಲ್ಲಾ ರೆಡಿ ಮೇಡ್ ಅಥವಾ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಲಾದ ಆಹಾರಗಳು ಬಣ್ಣದ ಕಾರಕಗಳು, ಕ್ರತಕ ಸಿಹಿಕಾರಿ ಮತ್ತು ಸಂರಕ್ಷಕಗಳಿಂದ ಕೂಡಿದ್ದು, ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
 
ಜನರಿಗೆ ಸಿದ್ಧಪಡಿಸಿದ ಆಹಾರ ಪದಾರ್ಥ ಸೇವನೆ ನಿಲ್ಲಿಸುವಂತೆ ಸಲಹೆ ಮಾಡುವುದು ಅಥವಾ ಆಹಾರ ಪದಾರ್ಥಗಳ ಮೇಲೆ ನಿಷೇಧ ವಿಧಿಸುವುದು ಅಪ್ರಾಯೋಗಿಕವಾಗುತ್ತದೆ ಎಂದು ಗುರಗಾಂವ್ ಫೋರ್ಟಿಸ್ ಸಂಸ್ಥೆಯ ವೈದ್ಯ ಅಮಿತಾಬ್ ಪಾರ್ತಿ ಹೇಳಿದ್ದಾರೆ.
 
 ಅದಕ್ಕೆ ಬದಲಾಗಿ ಸರ್ಕಾರ ನಿಯಮಿತ ತಪಾಸಣೆ ಮಾಡಿ ರಾಸಾಯನಿಕಗಳ ಬಳಕೆ ಅಂಗೀಕಾರ್ಹ ಮಿತಿಯಲ್ಲಿರುವ ವ್ಯವಸ್ಥೆಯನ್ನು ತರಬೇಕು ಮತ್ತು ಇದಕ್ಕೆ ತಪ್ಪಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 

ಅನೇಕ ಕಂಪನಿಗಳು ಹೆಚ್ಚುವರಿ ಬಣ್ಣಗಳನ್ನು ಬಳಸಿ ಉತ್ಪನ್ನವನ್ನು ಆಕರ್ಷಿಸುವಂತೆ ಮಾಡುತ್ತಾರೆ. ಇದರಿಂದ ಗ್ರಾಹಕರು ಅಧಿಕ ಆಮ್ಲೀಯತೆ, ಥೈರಾಯಿಡ್ ಹುಣ್ಣುಗಳು, ಹೊಟ್ಟೆ ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಾರೆ. ಪ್ಲಾಸ್ಟಿಕ್ ಆಧಾರದ ಪ್ಯಾಕೇಜಿಂಗ್ ವಸ್ತುಗಳ ತಯಾರಿಕೆಗೆ ಬಳಸುವ ಪದಾರ್ಥಗಳು ಪೊಟ್ಟಣದಲ್ಲಿರುವ ಆಹಾರಪದಾರ್ಥಕ್ಕೆ ವಿಷವನ್ನು ಹರಡಬಲ್ಲದು.
 
ಸಿದ್ಧ ಆಹಾರದಲ್ಲಿ  ಬಳಸುವ ಹೆಚ್ಚುವರಿ ಉಪ್ಪು ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದ್ದು, ಶೇ .57 ಹೃದಯಾಘಾತಗಳು ಮತ್ತುೋ ಶೇ. 40 ಸ್ಟ್ರೋಕ್ ಪ್ರಕರಣಗಳಿಗೆ ಕಾರಣವಾಗಿದೆ ಎಂದು ವಿಶ್ವಆರೋಗ್ಯ ಸಂಸ್ಥೆ ಹೇಳಿದೆ. 
 
ದಿನನಿತ್ಯದ ಆಧಾರದ ಪ್ರತಿ ವ್ಯಕ್ತಿಗೆ 5 ಗ್ರಾಂ.ಗಿಂತ ಕಡಿಮೆ ಪ್ರಮಾಣದ ಉಪ್ಪು ನರ ಮತ್ತು ಸ್ನಾಯು ಕಾರ್ಯನಿರ್ವಹಣೆಗೆ ಅಗತ್ಯವಾಗಿದೆ. ಆದರೆ ಭಾರತದಲ್ಲಿ ಜನರು 8ರಿಂದ 9 ಗ್ರಾಂ ಉಪ್ಪನ್ನು ಸೇವಿಸುತ್ತಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದರು. 
ಪೊಟ್ಟಣದ ಆಹಾರಗಳು ಕ್ಯಾನ್ಸರ್ ಘಟನೆಗಳ ಪ್ರಮಾಣ ಹೆಚ್ಚಲು ಆಂಶಿಕವಾಗಿ ಕಾರಣವಾಗಿದೆ ಎಂದು ಡಯಾಬಿಟಿಸ್ ಪ್ರತಿಷ್ಠಾನದ ಹಿರಿಯ ಸಂಶೋಧನಾ ಅಧಿಕಾರಿ ಸ್ವಾತಿ ಭಾರದ್ವಾಜ್ ಹೇಳಿದ್ದಾರೆ.

ಸಂರಕ್ಷಣೆ ಮತ್ತು ಸುವಾಸನೆಗೆ ಸೇರಿಸುವ ಅನೇಕ ರಾಸಾಯನಿಕಗಳು ಕ್ಯಾನ್ಸರ್ ಜನಕವಾಗಿವೆ. ಮ್ಯಾಗಿ ನೂಡಲ್ ಮಾದರಿಗಳಲ್ಲಿ ಕಂಡುಬಂದ ಸೀಸ ಮತ್ತು ‌ಎಂಎಸ್‌ಜಿ ನರಗಳಿಗೆ ವಿಷಕಾರಿಯಾಗಿದ್ದು ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ ಕುಂಠಿತಗೊಳಿಸುತ್ತದೆ ಎಂದು ಬಾರದ್ವಾಜ್ ಹೇಳಿದ್ದಾರೆ. 


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery