ರಸಂ ರುಚಿ ಕೆಟ್ಟಿದೆಯೆಂದು ಪಲಾಯನ ಮಾಡಿದ ವರ

ಎಲೈ ವಿಕ್ರಮಾದಿತ್ಯ, ಮತ್ತೆ ಮತ್ತೆ ನಿನ್ನ ಪ್ರಯತ್ನವನ್ನು ಕಂಡು ನಾನು ಮೆಚ್ಚಿದ್ದೇನೆ. ಆದರೂ ಒಂದು ಕಥೆ ಹೇಳುತ್ತೇನೆ, ಸಾವಧಾನದಿಂದ ಕೇಳುವಂತವನಾಗು, ರಸಂನ ರುಚಿ ಕೆಟ್ಟಿದೆ ಎಂಬ ಒಂದೇ ಕಾರಣಕ್ಕೆ ವರನೊಬ್ಬ ವಧುವಿಗೆ ತಾಳಿ ಕಟ್ಟಲು ವರ ನಿರಾಕರಿಸಿದ.  ಶನಿವಾರ ರಾತ್ರಿ ಆರತಕ್ಷತೆಯೂ ನಡೆದಿತ್ತು. ವರನ ಮಲತಾಯಿ ರಸಂ ರುಚಿ ಚೆನ್ನಾಗಿಲ್ಲವೆಂದು ಆಕ್ಷೇಪವೆತ್ತಿದರು. ವರ ಕೂಡ ಅದಕ್ಕೆ ಗೋಣು ಅಲ್ಲಾಡಿಸಿದರು.

ರಾತ್ರಿ ಇಡೀ ಮಾತಿನ ಚಕಮಕಿ ನಡೆದು ವರಮಹಾಶಯ ತನ್ನ ಕುಟುಂಬದೊಂದಿಗೆ ಕಲ್ಯಾಣ ಮಂಟಪದಿಂದ ಹೊರ ನಡೆದೇಬಿಟ್ಟಿದ್ದ. ಕೊನೆಗೆ ವಧುವಿನ ಕಡೆಯವರೊಬ್ಬರ ದಯೆತೋರಿ ವಧುವಿಗೆ ತಾಳಿಕಟ್ಟಿದರು. ಎಲೈ  ವಿಕ್ರಮಾದಿತ್ಯ, ವರನು ತನ್ನ ವಧುವನ್ನು ಮೊದಲೇ ನೋಡಿ ಒಪ್ಪಿಕೊಂಡಿದ್ದ, ವಧುವನ್ನು ನೋಡಿದ ಮೇಲೆ ಮದುವೆ ನಿಶ್ಚಯವೂ ಆಯಿತು. ಆದರೂ ವರ ವಧುವನ್ನು ನಿರಾಕರಿಸಲು ರಸಂ ರುಚಿ ಕೆಟ್ಟಿದೆಯೆನ್ನುವುದು ನಿಜವಾದ ಕಾರಣವೇ?

ವರ ವಧುವನ್ನು ನೋಡಿ ಮನಸಾರೆ ಮೆಚ್ಚಿಕೊಂಡ ಮೇಲೆ ಕಲ್ಯಾಣಮಂಟಪದಲ್ಲಿ ವಧುವನ್ನು ನಿಕಾಕರಿಸಿದ್ದೇಕೆ? ವಧು ಮದುವೆಯಾಗದೇ ಹೊರನಡೆದ ಮೇಲೆ ಅವನ ವಿರುದ್ಧ ದೂರು ಕೊಡಲು ಕಾನೂನಿನಲ್ಲಿ  ಅವಕಾಶವಿಲ್ಲವೇ? ಎಲ್ಲೈ ವಿಕ್ರಮ, ಇವೆಲ್ಲಾ ಪ್ರಶ್ನೆಗಳಿಗೆ ಚಾಚೂತಪ್ಪದೆ ಉತ್ತರಿಸದಿದ್ದರೆ ನಿನ್ನ ತಲೆ ಸಿಡಿದು ನೂರು ಹೋಳಾದೀತು ಎಚ್ಚರಿಕೆ.
ಎಲೈ ಬೇತಾಳ, ನಮ್ಮ ವಿವಾಹ ವ್ಯವಸ್ಥೆಯ ಇತ್ತೀಚಿನ ಸ್ಥಿತಿಗತಿಯ ಬಗ್ಗೆ ನಿನಗೆ ಪರಿಚಯವಿಲ್ಲವೆಂದು ಕಾಣುತ್ತದೆ. ಭಾರತೀಯ ಜಾತಿ ವ್ಯವಸ್ಥೆಯಲ್ಲಿ ವರದಕ್ಷಿಣೆ  ಭೂತವು ಹೆಣ್ಣಿನ ತಂದೆ, ತಾಯಿಗಳನ್ನು ಇನ್ನಿಲ್ಲದಂತೆ ಕಾಡುತ್ತದೆ. ಹುಡುಗಿಯ ಮನೆಯವರು ನೀಡಿದ ವರದಕ್ಷಿಣೆ ವರನ ಮಲತಾಯಿಗೆ, ವರನಿಗೆ ತ್ರಪ್ತಿ ತರಲಿಲ್ಲವೆಂದು ಕಾಣುತ್ತದೆ.

ಆದರೆ ಮದುವೆ ಮಂಟಪದಲ್ಲಿ ವರದಕ್ಷಿಣೆ ತಕರಾರು ತೆಗೆದರೆ ಧರ್ಮದೇಟು ಬೀಳುವ ಭಯದಿಂದ ಕುಣಿಯುವ ನರ್ತಕಿ ನೆಲ ಡೊಂಕೆಂದು ಹೇಳಿದ ಹಾಗೆ, ಕಳ್ಳನಿಗೊಂದು ಸುಳ್ಳು ನೆವ ಎನ್ನುವ ಹಾಗೆ ರಸಂ ರುಚಿಯ ಮೇಲೆ ತಪ್ಪು ಹೊರಿಸಿ ಅಲ್ಲಿಂದ ಪಲಾಯನಕಿತ್ತರು. ಎಲೈ ಬೇತಾಳ ಇಂದಿನ ಕಾನೂನಿನಲ್ಲಿ ವರದಕ್ಷಿಣೆ ಪದ್ಧತಿಗೆ ನಿಷೇಧವಿದ್ದರೂ ಕೊಟ್ಟಿದ್ದೂ, ಈಸ್ಕೊಂಡಿದ್ದೂ ಗೊತ್ತಾಗದೇ ಮದುವೆ ಸುಸೂತ್ರವಾಗಿ ನಡೆಯುತ್ತದೆ.

ಆದರೆ ವರದಕ್ಷಿಣೆಯಲ್ಲಿ ಲೋಪದೋಷಗಳಾದರೆ ಮಾತ್ರ ಮದುವೆಮಂಟಪದಿಂದ ವರ ಪಲಾಯನ ಮುಂತಾದ ಯಡವಟ್ಟು ಜರುಗುತ್ತದೆ. ಇನ್ನು ವರನ ವಿರುದ್ಧ ದೂರು ಕೊಡಲು ಅವಕಾಶವಿದ್ದರೂ ಹುಡುಗಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೆಣ್ಣಿನ ಕಡೆಯವರು ದೂರು ನೀಡುವುದಿಲ್ಲ. ವಿಕ್ರಮಾದಿತ್ಯನ ಉತ್ತರದಿಂದ ಸಮಾಧಾನಗೊಂಡ ಬೇತಾಳ ರೊಯ್ಯನೆ ಅವನ ಹೆಗಲಿನಿಂದ ಮೇಲಕ್ಕೆ ಹಾರಿ ಮರಕ್ಕೆ ನೇತುಹಾಕಿಕೊಳ್ಳುತ್ತದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery