ರಿಯೊದಲ್ಲಿ ಬೆಳ್ಳಿಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸಿಂಧು
 ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ, ಸಿಂಧು ಅವರು ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ನಂಬರ್ ಒನ್ ಕರೊಲಿನಾ ಮಾರಿನ್ ಅವರಿಗೆ ಸೋತರೂ ಬೆಳ್ಳಿಪದಕ ಜಯಿಸುವ ಮೂಲಕ ಭಾರತದ ಲಕ್ಷಾಂತರ ಕ್ರೀಡಾಭಿಮಾನಿಗಳ ಹ್ರದಯ ಗೆದ್ದಿದ್ದಾರೆ. 21 ವರ್ಷದ ಸಿಂಧು ಅವರು ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದ ಬಳಿಕ ಭಾರತಕ್ಕೆ 2ನೇ ಪದಕ ಗೆಲ್ಲಿಸಿಕೊಟ್ಟಿದ್ದಾರೆ.
 
ಸಿಂಧು ಫೈನಲ್ಸ್‌ನಲ್ಲಿ ಮೊದಲ ಸೆಟ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿ 21-19ರಿಂದ ಗೆದ್ದುಕೊಂಡರು. ಮಾರಿನ್ ಎರಡನೇ ಸೆಟ್ಟನ್ನು 21-12ರಿಂದ ಮತ್ತು ಮೂರನೇ ಸೆಟ್ಟನ್ನು 21-15ರಿಂದ ಗೆದ್ದುಕೊಂಡು ಚಿನ್ನದ ಪದಕ ಗೆದ್ದರು.
 
 ಸಿಂಧು ಅವರು ಕರ್ಣಮ್ ಮಲ್ಲೇಶ್ವರಿ, ಮೇರಿ ಕೋಮ್, ಸೈನಾ ನೆಹ್ವಾಲ್ ಮತ್ತು ಸಾಕ್ಷಿ ಮಲಿಕ್ ಬಳಿಕ ಪದಕ ಗೆದ್ದ ಐದನೇ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಭಾರತದಾದ್ಯಂತ ಲಕ್ಷಾಂತರ ಅಭಿಮಾನಿಗಳು ಟಿವಿ ಎ ದುರು ಕುಳಿತು ಸಿಂಧುಗೆ ಒಲಿಂಪಿಕ್ ಪದಕ ಗೆದ್ದಿರುವುದಕ್ಕೆ ಹರ್ಷಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನಾ ಸಂದೇಶಗಳು ಹರಿದುಬಂದಿವೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery