ಗೋವಾದ ಅಧಿಕಾರ ವಹಿಸಿಕೊಂಡ ಮನೋಹರ್ ಪರಿಕ್ಕರ್, ಗುರುವಾರ ವಿಶ್ವಾಸ ಮತ

ಪಣಜಿ: ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಅಷ್ಟಕ್ಕೇ ಸುಮ್ಮನಾಗಿಲ್ಲ. ತನ್ನ ಕಬಂಧಬಾಹುಗಳನ್ನು ಗೋವಾ ಮತ್ತು ಮಣಿಪುರದಲ್ಲಿ ಕೂಡ ಚಾಚಲು ಹೊರಟಿದೆ. ಗೋವಾದಲ್ಲಿ ಮನೋಹರ್ ಪರಿಕ್ಕರ್ ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆದರೆ ಬಹುಮತ ಸಾಬೀತಿಗೆ ಗುರುವಾರ ಅವರು ವಿಶ್ವಾಸ ಮತ ಯಾಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ 17 ಸೀಟುಗಳನ್ನು ಗೆದ್ದು, ಬಿಜೆಪಿ 13 ಸೀಟುಗಳಲ್ಲಿ ಜಯಗಳಿಸಿದ್ದರೂ ಸಣ್ಣ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಆನೆಬಲ ಸಿಕ್ಕಿದೆ. ರಾಜಕೀಯ ಪ್ರಹಸನದ ಇತ್ತೀಚಿನ ಬೆಳವಣಿಗೆಗಳು ಕೆಳಗಿವೆ.


ಬಿಜೆಪಿಗೆ ರಾಜ್ಯಪಾಲ ಸಿನ್ಹಾ ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದು ಕಾನೂನುಬಾಹಿರ ಮತ್ತು ಅಪ್ಪಟ ಅಸಂವಿಧಾನಿಕ ಕ್ರಮ ಎಂದು ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್ ತಿಳಿಸಿತು. ಏಕೆಂದರೆ ಹೆಚ್ಚು ಸೀಟುಗಳನ್ನು ಗೆದ್ದ ಪಕ್ಷಕ್ಕೆ ಸರ್ಕಾರ ರಚನೆಗೆ ಮೊದಲು ಆಹ್ವಾನ ನೀಡಬೇಕು ಎಂದು ವಾದಿಸಿತ್ತು.

ನಿಮ್ಮ ಬಳಿಕ ಸಾಕಷ್ಟು ಸಂಖ್ಯಾಬಲವಿದ್ದರೆ, ರಾಜ್ಯಪಾಲದ ಮನೆಯ ಎದುರು ಧರಣಿ ಮಾಡಬೇಕಿತ್ತು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಕಾಂಗ್ರೆಸ್‌ಗೆ ಅಗತ್ಯ ಬೆಂಬಲವಿದೆ ಎಂಬ ಬಗ್ಗೆ ನ್ಯಾಯಾಧೀಶರಿಗೆ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಪುರಾವೆಯಿರಲಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತು.

   ಕೋರ್ಟ್‌ಗೆ ಇಂದು ವಿರಾಮವಿದ್ದರೂ ರಾಜಕೀಯ ತುರ್ತಿನ ಕಾರಣದಿಂದಾಗಿ ಮುಖ್ಯ ನ್ಯಾಯಮೂರ್ತಿ ಖೇಹರ್ ಮತ್ತಿತರ ನ್ಯಾಯಾಧೀಶರು ಅರ್ಜಿಯನ್ನು ಆಲಿಸಿದರು.

  ಶನಿವಾರ ಘೋಷಿಸಲಾದ ಚುನಾವಣೆ ಫಲಿತಾಂಶದಲ್ಲಿ , ಕಾಂಗ್ರೆಸ್ 17 ಸೀಟುಗಳನ್ನು ಬಿಜೆಪಿ 13 ಸೀಟುಗಳನ್ನು ಗೆದ್ದಿದೆ. ಎರಡೂ ಸರ್ಕಾರ ರಚನೆಗೆ ಅಗತ್ಯವಾದ 21 ಸೀಟುಗಳಿಗೆ ಕೊರತೆ ಅನುಭವಿಸಿದ್ದವು.


  ಬಿಜೆಪಿ ಪ್ರಾದೇಶಿಕ ಪಕ್ಷಗಳಾದ ಎಂಜಿಪಿ ಮತ್ತು ಗೋವಾ ಫಾರ್ವರ್ಡ್ ಮೊದಲಾದ ಪಕ್ಷಗಳ ಬೆಂಬಲವನ್ನು ಪಡೆಯಲು ತಕ್ಷಣದಲ್ಲೇ ಕಾರ್ಯಪ್ರವೃತ್ತವಾಯಿತು. ಆದರೆ ಹೊಸ ಮಿತ್ರಪಕ್ಷಗಳು ಒಂದು ಷರತ್ತನ್ನು ವಿಧಿಸಿದ್ದವು. ಬಿಜೆಪಿಯ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಬೇಕೆಂಬುದು ಅವರ ಷರತ್ತಾಗಿತ್ತು.
  Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery