ಪ್ರತಿಯೊಂದು ಸೆಟ್‌ನಿಂದ 31 ರೂ. ಲಾಭ: ಮೋಹಿತ್ ಗೋಯಲ್

ನವದೆಹಲಿ :ಮೋಹಿತ್ ಗೋಯಲ್ 251 ರೂ. ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ಬುಕಿಂಗ್ ಆರಂಭಿಸಿದಾಗಿನಿಂದ ವ್ಯಾಪಕ ಸಂದೇಹಕ್ಕೆ  ಒಳಗಾಗಿದ್ದಾರೆ. ಅಷ್ಟೊಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ಹೇಗೆ ಕೊಡುತ್ತಾರೆ ಎನ್ನುವ ಅನುಮಾನ ಕಾಡುತ್ತಿದೆ. ನೊಯ್ಡಾದಲ್ಲಿರುವ ಅವರ ಎರಡು ಮಹಡಿಗಳ ಕಚೇರಿಗೆ ಪೊಲೀಸರು ಮತ್ತು ಆದಾಯತೆರಿಗೆ ಅಧಿಕಾರಿಗಳು ಭೇಟಿ ಮಾಡಿದ್ದಾರೆ.

ತಾವು ಹೇಳಿದ ಅಚ್ಚರಿಯ ದರದಲ್ಲಿ ಫೋನ್ ಡೆಲಿವರಿ ಮಾಡುವುದಲ್ಲದೇ ಪ್ರತಿಯೊಂದು ಹ್ಯಾಂಡ್‌ಸೆಟ್‌ಗೆ 31 ರೂ. ಲಾಭ ಗಳಿಸುವುದಾಗಿ ಮೋಹಿತ್ ಹೇಳಿದ್ದಾರೆ.ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ  ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳ ಭೇಟಿ ಕುರಿತು   ಪ್ರಶ್ನಿಸಿದ ಅಮಿತ್ , ನಾನೇನು ತಪ್ಪುಮಾಡಿದ್ದೇನೆ ಎಂದು ಕೇಳಿದ್ದಾರೆ.

ತಮ್ಮ ವಿರುದ್ಧ ಯಾವುದೇ ಆದಾಯ ತೆರಿಗೆ ತಪ್ಪಿಸಿದ ಪ್ರಕರಣವಿಲ್ಲ. ಎಫ್‌ಐಆರ್ ಕೂಡ ದಾಖಲಾಗಿಲ್ಲ. ಆದರೂ ಭಾಗೋರಾ(ಹಣದೊಂದಿಗೆ ಓಡಿಹೋಗುವ) ಎಂದು ಕರೆದಿದ್ದೇಕೆ. ನಾನು ಇತರ ಸ್ಟಾರ್ಟ್ ಅಪ್ ರೀತಿಯಲ್ಲಿ  ಕ್ರಮಬದ್ಧ ವ್ಯವಹಾರ ಮಾಡಲು ಹೊರಟಿದ್ದೇನೆ. ಈಗಾಗಲೇ ಬಿಸಿನೆಸ್ ಪ್ಲಾನ್ ಸಿದ್ದವಾಗಿದೆ ಎಂದು ಹೇಳಿದರು.

ಫೆ.18ರಂದು  ಅರ್ಜಿ ಸ್ವೀಕರಿಸಿದಾಗಿನಿಂದ 7 ಕೋಟಿ ಬುಕಿಂಗ್ ರಿಜಿಸ್ಟ್ರೇಷನ್ ಸ್ವೀಕರಿಸಿದ್ದೇವೆ. ನಾವು ಮೊದಲ ಬ್ಯಾಚ್‌ನಲ್ಲಿ 25 ಲಕ್ಷ ಯೂನಿಟ್ ಬುಕಿಂಗ್ ಸ್ವೀಕರಿಸುತ್ತೇವೆ. ಉಳಿದ 25 ಲಕ್ಷವನ್ನು ಆಫ್ ಲೈನ್ ಬುಕಿಂಗ್ ಮೂಲಕ ನೀಡುತ್ತೇವೆ. ಜೂ. 30ರೊಳಗೆ ಹ್ಯಾಂಡ್ ಸೆಟ್ ಡೆಲಿವರಿ ಮಾಡುವುದಾಗಿ ಅವರು ತಿಳಿಸಿದರು.  ಪೇಮೆಂಟ್ ಗೇಟ್‌ವೇ ಮೂಲಕ ಸ್ವೀಕರಿಸಿದ ಎಲ್ಲಾ ಹಣವನ್ನು ಎಸ್ಕ್ರೋ ಖಾತೆಯಲ್ಲಿ ಇರಿಸಿ ಉಪಕರಣ ಡೆಲಿವರಿ ಮಾಡಿದ ಬಳಿಕವೇ ಆ ಹಣವನ್ನು ಮುಟ್ಟುತ್ತೇವೆ ಎಂದು ಮೋಹಿತ್ ಹೇಳಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery