19 ವರ್ಷದಲ್ಲಿಯೇ ಮಿಲಿಯಾಧಿಪತಿಯಾದ ಭಾರತೀಯ ಸಂಜಾತ ಯುವಕ

ಲಂಡನ್: ಅಕ್ಷಯ್ ರುಪಾಲೇಲಿಯಾ ಭಾರತೀಯ ಸಂಜಾತ ಯುವಕನಾಗಿದ್ದು ಕೇವಲ 19 ವರ್ಷ ವಯಸ್ಸು. 19 ವರ್ಷ ವಯಸ್ಸಿನ ಅನೇಕ ಬಾಲಕರು ತಮ್ಮ ವೃತ್ತಿಜೀವನದ ಬಗ್ಗೆ ಚಿಂತಿಸುತ್ತಾ ಅಸೈನ್‌ಮೆಂಟ್ ಮುಗಿಸುವುದರಲ್ಲಿ ಬಿಜಿಯಾಗಿದ್ದರೆ ಈ ಬಾಲಕ ತಾನು ಏನಾದರೂ ಸಾಧನೆ ಮಾಡಬೇಕೆಂದು ಸಂಕಲ್ಪಿಸಿದ. ಅದರ ಫಲವಾಗಿಯೇ ಈಗ ಬ್ರಿಟನ್‌ನ ಅತೀ ಕಿರಿಯ ಮಿಲಿಯಾಧಿಪತಿಗಳ ಪೈಕಿ ಒಬ್ಬನಾಗಿದ್ದಾನೆ.

ವನ ನಿವ್ವಳ ಆಸ್ತಿ ಈಗ 103, 28, 95,875 ರೂ. ಮುಟ್ಟಿದೆ. ಅವನು ಮಾಡುವ ವೃತ್ತಿ ಬ್ರಿಟನ್
ನಲ್ಲಿ ಮನೆಗಳನ್ನು ಮಾರಾಟ ಮಾಡುವುದು.


ಅವನ ಆನ್‌ಲೈನ್ ಎಸ್ಟೇಟ್ ಏಜನ್ಸಿ ಡೂರ್‌ಸ್ಟೆಪ್ಸ್ ಯುಕೆಯಲ್ಲಿ 18ನೇ ಅತೀ ದೊಡ್ಡ ಸ್ಥಿರಾಸ್ತಿ ಸಂಸ್ಥೆಯಾಗಿ ಬೆಳೆದಿದೆ. ಈಗ ಕಂಪನಿಯ ಮೌಲ್ಯ 12 ದಶಲಕ್ಷ ಪೌಂಡ್‌ಗಳು. ತನ್ನ ಬಂಧುಗಳಿಂದ 7000 ಪೌಂಡ್ ಸಾಲ ಪಡೆದಿದ್ದ ಅವನು ಈಗ 12 ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾನೆ. ತನ್ನ ವ್ಯಾಪಾರ ಷುರುಮಾಡಿದಾಗಿನಿಂದ 100 ದಶಲಕ್ಷ ಪೌಂಡ್ ಮೌಲ್ಯದ ಆಸ್ತಿಗಳನ್ನು ಮಾರಿದ್ದಾಗಿ ಅವನು ಹೇಳಿದ್ದಾನೆ. 

 ಇದಕ್ಕಾಗಿ ಅವನು ವೆಬ್‌ಸೈಟ್ ಒಂದನ್ನು ನಡೆಸುತ್ತಿದ್ದಾಗ ಕೆಲವು ದಿನಗಳ ನಂತರ ಸಸೆಕ್ಸ್ ವ್ಯಕ್ತಿಯೊಬ್ಬಾತ ಮನೆ ಮತ್ತು ಸ್ವಲ್ಪ ಭೂಮಿಯನ್ನು ಮಾರಾಟ ಮಾಡಿಕೊಡುವಂತೆ ಕೇಳಿದರು. ಅವನು ಚಾಲನಾ ಪರೀಕ್ಷೆಯಲ್ಲಿ ಪಾಸಾಗಿರಲಿಲ್ಲ ಮತ್ತು ಅವನ ಬಳಿ ಕಾರು ಕೂಡ ಇರಲಿಲ್ಲವಾದ್ದರಿಂದ  ಸಸೆಕ್ಸ್‌ನಲ್ಲಿರುವ ಮನೆಯ ಚಿತ್ರವನ್ನು ತೆಗೆಯಲು  ತನ್ನ ಸೋದರಿಯ ಸ್ನೇಹಿತನಿಗೆ 40 ಪೌಂಡ್ ನೀಡಿ ಕಾರಿನಲ್ಲಿ ತೆರಳಿದ್ದ. ಆ ಸಂದರರ್ಭದಲ್ಲಿ ಅವನ
 ಆ ಸಂದರ್ಭದಲ್ಲಿಯೇ ಅವನ ಬಿಸಿನೆಸ್ ಮಾದರಿ ರೂಪುಗೊಂಡಿತು. ಫ್ಯಾನ್ಸಿ ಸೂಟ್‌ಗಳನ್ನು ಧರಿಸಿ ಪುರುಷರು ಮತ್ತು ಮಹಿಳೆಯರು ಮನೆಯ ದಳ್ಳಾಳಿಗಳಾಗಿ ಕೆಲಸ ಮಾಡಿದರೆ ಅವನು ತಾಯಂದಿರ ಜಾಲದ ಮೂಲಕ ಮನೆಯ ಮಾರಾಟ ನಡೆಸುತ್ತಿದ್ದ. ಈ ತಾಯಂದಿರು ಮಾರಾಟಕ್ಕಿರುವ ಮನೆಗಳನ್ನು ಗ್ರಾಹಕರಿಗೆ ತೋರಿಸುವ ಕೆಲಸ ನಿರ್ವಹಿಸುತ್ತಿದ್ದರು. ಅವನ ಕಂಪೆನಿ ಡೂರ್ ಸ್ಟೆಪ್ಸ್ ಕೇವಲ 99 ಪೌಂಡ್ ಮಾತ್ರ ಶುಲ್ಕ ವಿಧಿಸುತ್ತಿತ್ತು. ಆದರೆ ದೊಡ್ಡ ಕಂಪನಿಗಳು 800ರಿಂದ 1000 ಪೌಂಡ್ ಶುಲ್ಕ ಪಡೆಯುತ್ತಿದ್ದವು. ಕಿವುಡ ಪೋಷಕರಿಗೆ ಜನಿಸಿದ್ದ ಅಕ್ಷಯ್ ಅವನ ವ್ಯವಹಾರ ಚೆನ್ನಾಗಿ ಕುದುರುತ್ತಿದ್ದಂತೆ ತಂದೆ, ತಾಯಿಗಳಿಗೆ ಕಾರೊಂದನ್ನು ಖರೀದಿಸಿ ಕೊಡುವ ಮೂಲಕ ಭಾರತೀಯ ಮೌಲ್ಯಗಳಿಗೆ ತಾನು ಹತ್ತಿರದಲ್ಲಿದ್ದೇನೆಂದು ತೋರಿಸಿದ್ದ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery