ಮೇಲಸೇತುವೆ ಕಾಲ್ತುಳಿತಕ್ಕೆ ಬಲಿಯಾದ ನತದೃಷ್ಟ ಮಹಿಳೆಯರು

  ಮುಂಬೈ: ಕೆಲವೇ ತಿಂಗಳ ಹಿಂದೆ ಹಿಲೋನಿ ದೆದಿಯಾ ಸಿಎ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆಕ್ಸಿಸ್ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದಳು. ನಿಲೇಶ್ ದೆದಿಯಾರ ಏಕೈಕ ಪುತ್ರಿಯಾದ ಅವಳು ಎಲ್ಫಿನ್‌ಸ್ಟೋನ್ ನಿಲ್ದಾಣದಲ್ಲಿ ಪ್ರತಿದಿನದಂತೆ  ಬೆಳಿಗ್ಗೆ 10. 30ಕ್ಕೆ ಇಳಿದಳು. ಆದರೆ ಅದೇ ದಿನ ಅವಳ ಕೊನೆಯ ದಿನವಾಗುತ್ತದೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ.
 ಮುಂಬೈನ ಎಲ್ಫಿನ್‌ಸ್ಟೋನ್ ರೋಡ್ ರೈಲ್ವೆಯಲ್ಲಿ  ಆ ದುರ್ದಿನದಂದು ಕಿಕ್ಕಿರಿದು ತುಂಬಿದ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಕ್ಕಿ ಸತ್ತ 22 ಜನರ ಪೈಕಿ 25 ವರ್ಷದ ಯುವತಿ ಕೂಡ ಒಬ್ಬಳಾಗಿದ್ದಳು. ಹಿಲೋನಿ ಬಂಧು ಬಳಗ ಅವಳಿಗಾಗಿ ಹುಡುಕಿದಾಗ ಸಿಕ್ಕಿದ್ದು ಅವಳ ಪರ್ಸ್ ಮತ್ತು ಮೊಬೈಲ್. ಗಾಬರಿಯಿಂದ ಹಸಿರು ಸೀರೆಯುಟ್ಟು ನಸುನಗುತ್ತಿದ್ದ ಹಿಲೋನಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಆ ಸ್ಥಳದಲ್ಲೆಲ್ಲಾ ಹುಡುಕಿದರು.


 ಬಂಧುಗಳು ತಮ್ಮ ಆಪ್ತರಿಗಾಗಿ , ಪ್ರೀತಿಪಾತ್ರರಿಗಾಗಿ ಒಂದು ಕಡೆ ಹುಡುಕುತ್ತಿದ್ದರೆ ಇನ್ನೊಂದು ಕಡೆ ಆಭರಣ ಚೋರರು ಕಠಿಣಹೃದಯಿಗಳಾಗಿ ಮೃತದೇಹಗಳಿಂದ ಆಭರಣ ತೆಗೆಯುವುದರಲ್ಲಿ ನಿರತರಾಗಿದ್ದರು. ಕೊನೆಗೂ ಹಿಲೋನಿ ಕುಟುಂಬ ಅವಳ ನಜ್ಜುಗುಜ್ಜಾದ ಮುಖದ ತುಂಬ ಗಾಯದ ಗುರುತುಗಳಿರುವ ಹಿಲೋನಿ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ನೋಡಿದಾಗ ದುಃಖ ತಡೆಯಲಾಗದೇ ಬಿಕ್ಕಿ ಬಿಕ್ಕಿ ಅತ್ತರು

. ಹಿಲೋನಿ ರೀತಿಯಲ್ಲಿ ಇನ್ನೂ ಅನೇಕ ಮಂದಿಯ ಜೀವ ಹಠಾತ್ತಾಗಿ ಕೊನೆಗೊಂಡಿತ್ತು. ನಿಕಟ ಸ್ನೇಹಿತೆಯರಾದ ಸುಮಲತಾ ಶೆಟ್ಟಿ ಮತ್ತು ಸುಜಾತಾ ಆಳ್ವ ಕಬಡ್ಡಿ ತಂಡದಲ್ಲಿ ಆಡುತ್ತಿದ್ದರು. ಅವರು ತಮ್ಮ ಪ್ರೀತಿಪಾತ್ರರಿಗೆ ಜೀವಮಾನದ ನೋವನ್ನು ಬಿಟ್ಟು ಹೋದರು.
ಇಬ್ಬರು ಮೃತ ಮಹಿಳೆಯರು ಕುರ್ಲಾ ಬಂಡೂಪ್ ಸ್ಥಳೀಯ ವಿಭಾಗೀಯ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು ಮತ್ತು ನೆಹರುನಗರ ನಿವಾಸಿಗಳಾಗಿದ್ದರು. ಸ್ಪರ್ಧೆಗಳಲ್ಲಿ ಮತ್ತು ಸಮಾಜ ಸೇವೆಗಳಲ್ಲಿ ಒಟ್ಟಿಗೆ ಭಾಗವಹಿಸುತ್ತಿದ್ದರು. ದಸರಾ ಪೂಜೆಗೆ ಹೂವುಗಳ ಖರೀದಿಗೆ ತೆರಳಿದ್ದಾಗ ದುರಂತಕ್ಕೆ ಬಲಿಯಾದರು.


ಸುಮಲತಾ ಶೆಟ್ಟಿ ಕಡಂದಲೆ ಹೊಯ್ಗಿಮನೆ ಕೃಷ್ಣಶೆಟ್ಟಿ ಅವರ ಪುತ್ರಿ. ಪ್ರತಿಭಾಶಾಲಿ ಕ್ರೀಡಾಪಟುವಾಗಿದ್ದ ಅವರು ಥ್ರೋಬಾಲ್ ಮತ್ತು ಟಗ್ ಆಫ್ ವಾರ್‌ನಲ್ಲಿ ಆಟಗಾರರಾಗಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು. ಸುಜಾತಾ ಶೆಟ್ಟಿ ದಕ್ಷಿಣ ಕನ್ನಡದ ವಾಮಂಜೂರು ನಿವಾಸಿ. ಅವರು ಉತ್ತಮ ನಾಟಕ ಕಲಾವಿದೆಯಾಗಿದ್ದರು.
 ಈ ಮಧ್ಯೆ ಕೆಇಎಂ ಆಸ್ಪತ್ರೆ ವಿರುದ್ಧ ಶಿವಸೇನೆ ಗರಂ ಆಗಿದ್ದು, ದುರಂತದಲ್ಲಿ ಮೃತಪಟ್ಟವರ ಹಣೆಯ ಮೇಲೆ ಸಂಖ್ಯೆಯನ್ನು ಬರೆದು ಅಂಟಿಸಿದ್ದಲ್ಲದೇ ಚಿತ್ರಗಳನ್ನು ಬಿಡುಗಡೆ ಮಾಡಿದ ಕ್ರಮದ ವಿರುದ್ಧ ಟೀಕೆ ಮಾಡಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery