43 ಸಚಿವರು: ಯೋಗಿ ಆದಿತ್ಯನಾಥರ ಮೆಗಾ ಸಂಪುಟದ ಪ್ರಮಾಣ

ಲಕ್ನೊ: ಗೋರಖ್‌ಪುರದಿಂದ ಐದು ಬಾರಿ ಸಂಸತ್ ಸದಸ್ಯರಾಗಿದ್ದ ಮತ್ತು ಗೋರಖನಾಥ ಮಂದಿರದ ಮುಖ್ಯ ಅರ್ಚಕರಾಗಿದ್ದ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಇಬ್ಬರು ಉಪ ಮುಖ್ಯಮಂತ್ರಿಗಳ ಸಮೇತ  43 ಸಚಿವರ ಬೃಹತ್ ಕ್ಯಾಬಿನೆಟ್ ಇಂದು ಪ್ರಮಾಣವಚನ ಸ್ವೀಕರಿಸಿತು.

ಸ್ಮೃತಿ ಉಪವನ ಸಂಕೀರ್ಣದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾಹ್, ಕೇಂದ್ರ ಸಚಿವರು, ಇತರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯರಾದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಹಾಜರಿದ್ದರು.

ಲಕ್ನೊದ 96 ಎಕರೆ ಸ್ಮೃತಿ ಭವನದಲ್ಲಿ 100 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಿದ ವೇದಿಕೆಯನ್ನು ನಿರ್ಮಿಸಲಾಗಿತ್ತು. ಸುಮಾರು ಒಂದು ಲಕ್ಷ ಜನರು ಸಮಾರಂಭದಲ್ಲಿ ಹಾಜರಿದ್ದರು.

ಪ್ರಮಾಣ ಸ್ವೀಕರಿಸಿದ ಸಚಿವರ ಪೈಕಿ ಸ್ವಾಮಿ ಪ್ರಸಾದ್ ಮೌರ್ಯ, ಸತೀಶ್ ಮಹಾನಾ, ರಾಜೇಶ್ ಅಗರವಾಲ್ ಮತ್ತು ರೀಟಾ ಬಹುಗುಣ ಜೋಷಿ ಸೇರಿದ್ದಾರೆ. ಮಾಜಿ ಕ್ರಿಕೆಟರ್ ಮೊಹಸಿನ್ ರಾಜಾ ಅವರು 43 ಸಚಿವರ ಸಂಪುಟದಲ್ಲಿ ಮುಸ್ಲಿಂ ಮುಖವಾಗಿದ್ದಾರೆಂದು ಮೂಲಗಳು ಹೇಳಿವೆ.

  ಪ್ರಧಾನಿ ಮೋದಿಯ ಅಭಿವೃದ್ಧಿ ಕಾರ್ಯಸೂಚಿಯ ಕಡೆ ಗಮನಹರಿಸುವುದು ಮತ್ತು ಉತ್ತಮ ಆಡಳಿತ ಖಾತರಿ ಮಾಡುವುದರತ್ತ ತಮ್ಮ ಗಮನ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery