ಬೆಂಗಳೂರು ನಗರ ಜಿಲ್ಲೆಯಲ್ಲಿ 8.40 ಲಕ್ಷ ಮತದಾರರು

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಇದೇ ಫೆಬ್ರವರಿ 13 ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 840449 ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 878 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 312 ಸೂಕ್ಷ್ಮ ಮತ್ತು 230 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿ.ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಚುನಾವಣಾ ನೀತಿ ಸಂಹಿತೆಯು ದಿನಾಂಕ: ಜನವರಿ 18 ರಿಂದ ಫೆ. 24ರವರೆಗೆ  ಜಾರಿಯಲ್ಲಿರುತ್ತದೆ. ಬಿತ್ತಿಪತ್ರ, ಕಟೌಟ್, ಬೋರ್ಡ್ ಇತ್ಯಾದಿಗಳನ್ನು ತೆರವುಗೊಳಿಸಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಭೆ ಸಮಾರಂಭಗಳನ್ನು ನಡೆಸಲು ಚುನಾವಣಾಧಿಕಾರಿ ಅಥವಾ ಪೊಲೀಸ್, ಸಾರಿಗೆ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದು ಅವರು ತಿಳಿಸಿದರು.

ಚುನಾವಣೆಯು ಶಾಂತಿ ಮತ್ತು ಸುವ್ಯವಸ್ಥತೆಯಿಂದ ನಡೆಯಲು ಚುನಾವಣಾ ವೀಕ್ಷಕರಾಗಿ  ಮನೋಜ್‍ಕುಮಾರ್ ಇವರನ್ನು ನೇಮಕ ಮಾಡಲಾಗಿದೆ. ಮತದಾರರು ನಿರ್ಭೀತಿ ಮತ್ತು ನಿರ್ಭೀಡೆಯಿಂದ ತಮ್ಮ ಅಮೂಲ್ಯ ಮತಗಳನ್ನು ತಪ್ಪದೇ ಚಲಾಯಿಸಬೇಕು.

ಇದಕ್ಕಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ವ್ಯಾಪಕ ಪ್ರಚಾರ ಮಾಡಿ ಮತ ಚಲಾಯಿಸಲು ಜಾಗೃತಿ ಮೂಡಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣಾ ತರಬೇತಿಗೆ ಗೈರುಹಾಜರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಮುಂದೆ ನಡೆಯುವ ಚುನಾವಣಾ ತರಬೇತಿಗೆ ತಪ್ಪದೇ ಹಾಜರಾಗಲು ಚುನಾವಣಾ ಸಿಬ್ಬಂದಿಗೆ ಗೈರುಹಾಜರಾಗದಂತೆ ಸೂಚನೆ ನೀಡಿದರು. ರಾಜ್ಯ ಚುನಾವಣಾ ಆಯೋಗದಂತೆ ಪಾನ ನಿಷೇದವನ್ನು ದಿನಾಂಕ: ಫೆ.12 ರಂದು ಬೆಳಿಗ್ಗೆ 7.00 ಗಂಟೆಯಿಂದ ದಿನಾಂಕಫೆ. 13ರ ಮದ್ಯರಾತ್ರಿ 12.00 ಗಂಟೆವರೆಗೆ ಫೆ.22 ರ ರಾತ್ರಿ 10.00 ಗಂಟೆಯಿಂದ, ದಿನಾಂಕ: ಫೆ.23ರ ಮಧ್ಯ ರಾತ್ರಿ 12.00 ಗಂಟೆವರೆಗೆ ಮದ್ಯಮಾರಾಟ, ಸರಬರಾಜು, ಅಕ್ರಮ ಮದ್ಯ ಸರಬರಾಜು ಮತ್ತು ಅಕ್ರಮ ಸಾಗಾಣಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಉತ್ತರ ಮತ್ತು (ಅಪರ) ತಾಲ್ಲೂಕಿನ ಮತಗಳನ್ನು ಸರ್ಕಾರಿ ಪ್ರೌಢಶಾಲೆ, ಕಾಳಹಸ್ತಿನಗರ, ಟಿ.ದಾಸರಹಳ್ಳಿ, ಬೆಂಗಳೂರು, ಉತ್ತರ ಮತ್ತು (ಅಪರ) ತಾಲ್ಲೂಕಿನ ಮತಗಳನ್ನು ಸರ್ಕಾರಿ ಪ್ರೌಢಶಾಲೆ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಮತ ಎಣಿಕೆಯನ್ನು ನ್ಯಾಷನಲ್ ಕಾಲೇಜು, ಜಯನಗರ, 7ನೇ ಹಂತ, ಬೆಂಗಳೂರು ಪೂರ್ವ ತಾಲ್ಲೂಕಿನ ಮತ ಎಣಿಕೆಯನ್ನು ಐಟಿಐ, ವಿದ್ಯಾಮಂದಿರ ಪ್ರೌಢಶಾಲೆ, ದೂರವಾಣಿ ನಗರ, ಕೆ.ಆರ್.ಪುರಂ ಮತ್ತು ಆನೇಕಲ್ ತಾಲ್ಲೂಕಿನ ಮತ ಎಣಿಕೆಯನ್ನು ಸರ್ಕಾರಿ ಎ.ಎಸ್.ಬಿ. ಪದವಿ ಪೂರ್ವ ಕಾಲೇಜು, ಅತ್ತಿಬೆಲೆ ರಸ್ತೆ, ಆನೇಕಲ್‍ನ ಟೌನ್ ಇಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ರಮೇಶ್, ಉಪವಿಭಾಗಾಧಿಕಾರಿ  ಎಲ್.ಸಿ.ನಾಗರಾಜು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery