ಮಂಗಳನ ಅಂಗಳದಲ್ಲಿ ನಿವೇಶನ ಖರೀದಿಗೆ 10,000 ಅರ್ಜಿದಾರರು
ಲಂಡನ್-ನಂಬಿದರೆ ನಂಬಿ ಬಿಟ್ಟರೆ ಬಿಡಿ, ಮಂಗಳ ಗ್ರಹದಲ್ಲಿ  ಕಾಯಂ ವಸಾಹತಿಗಾಗಿ ನಿವೇಶನ ಹೊಂದಲು ಆರೋಗ್ಯದ ಅಪಾಯಗಳನ್ನು ಲೆಕ್ಕಿಸದೇ 10,000 ಅರ್ಜಿಗಳನ್ನು ಜನರು ಸಲ್ಲಿಸಿದ್ದಾರೆ. ಮಂಗಳಗ್ರಹದಲ್ಲಿ ಕಾಯಂ  ವಸಾಹತಿಗಾಗಿ ನೆದರ್ಲೆಂಡ್ ಕಂಪೆನಿಯೊಂದು ಅರ್ಜಿಗಳನ್ನು ಆಹ್ವಾನಿಸಿದಾಗ ಮಂಗಳ ಗ್ರಹದ ವಾಸ ಕಾರ್ಯಸಾಧ್ಯವೇ ಇಲ್ಲವೇ ಎನ್ನುವುದನ್ನು ಲೆಕ್ಕಿಸದೇ 10 ,000 ಅರ್ಜಿಗಳು ಬಂದಿರುವುದು ಆಶ್ಚರ್ಯ ಮೂಡಿಸಿದೆ. ನೆದರ್ಲೆಂಡ್‌ನ ಕಂಪೆನಿ ಮಂಗಳ ಗ್ರಹದಲ್ಲಿ ಮಾನವ ವಸಾಹತು ನಿರ್ಮಾಣ ಮಾಡುವುದಕ್ಕಾಗಿ ನಾಲ್ಕು ಗಗನಯಾನಿಗಳ ಯಾತ್ರೆಯನ್ನು ಕಳಿಸಿಲಿದೆ.ಈ ಯೋಜನೆ ಕುರಿತು ಮಾರ್ಸ್ ಒನ್ ಕಂಪೆನಿ ಆಶಾವಾದಿಯಾಗಿದ್ದರೂ, ಗಂಭೀರ ಲೋಪದೋಷಗಳಿಂದ ಕೂಡಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
 
ಮೊದಲಿಗೆ ಮಂಗಳ ಗ್ರಹ ವಾಸಿಗಳ ದೇಹಗಳು ಭೂಮಿಯ ಗುರುತ್ವದ ಶೇ. 38ರಷ್ಟು ಮೇಲ್ಮೈ ಗುರುತ್ವಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದರಿಂದ ಅವರ ಮೂಳೆಯ ಸಾಂದ್ರತೆ, ಸ್ನಾಯು ಬಲ ಮತ್ತು ರಕ್ತಪರಿಚಲನೆಯಲ್ಲಿ ಸಂಪೂರ್ಣ  ಶಾರೀರಿಕ ಬದಲಾವಣೆ ಉಂಟುಮಾಡುತ್ತದೆ. ಭೂಮಿಯಲ್ಲಿ ಇಂತಹ ಪರಿಸ್ಥಿತಿಯಿದ್ದರೆ ಅವರು ಬದುಕುಳಿಯುವುದು ಕಷ್ಟ. ಎರಡನೆಯದಾಗಿ ಮಂಗಳಗ್ರಹಕ್ಕೆ ಯಾತ್ರೆ ಹೋದವರು ತಮ್ಮ ಕುಟುಂಬ ಮತ್ತು ಸ್ನೇಹಿತರಾಗಿ ಕಾಯಂ ಗುಡ್‌ಬೈ ಹೇಳಬೇಕಾಗುತ್ತದೆ.
 
ಏಕೆಂದರೆ ಮಂಗಳಗ್ರಹ ಯಾತ್ರೆಯ ಒಪ್ಪಂದದಲ್ಲಿ ಹಿಂತಿರುಗುವ ಟಿಕೆಟ್ ನೀಡುವ ಪ್ರಸ್ತಾಪವಿಲ್ಲ.ಒಂದೊಮ್ಮೆ ಮಂಗಳಗ್ರಹವನ್ನು ತಲುಪಿದರೆಂದರೆ ಹಿಂತಿರುಗುವ ಆಸೆಯನ್ನು ಇಟ್ಟುಕೊಳ್ಳುವ ಹಾಗಿಲ್ಲ.  ಏಕೆಂದರೆ ಹಿಂತಿರುಗುವುದಕ್ಕೆ ಪೂರ್ಣವಾಗಿ ಜೋಡಿಸಿದ, ಇಂಧನ ತುಂಬಿದ ರಾಕೆಟ್ ಮಂಗಳನ ಗುರುತ್ವ ಬಲದಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ ಮತ್ತು ಸುಮಾರು 7 ತಿಂಗಳ ಯಾತ್ರೆಗೆ ಅಗತ್ಯವಾದ ಜೀವರಕ್ಷಕ ವ್ಯವಸ್ಥೆ ಹೊಂದಿರಬೇಕು ಮತ್ತು ಭೂಮಿಯನ್ನು ಪರಿಭ್ರಮಿಸುವ ಅಂತರಿಕ್ಷ ನಿಲ್ದಾಣದೊಂದಿಗೆ ಜೋಡಣೆಯಾಗುವ ಸಾಮರ್ಥ್ಯ ಅಥವಾ ಸುರಕ್ಷಿತ ಮರುಪ್ರವೇಶ ಮತ್ತು ಲ್ಯಾಂಡಿಂಗ್ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಒಮ್ಮೆ ಮಂಗಳ ಗ್ರಹ ತಲುಪಿದರೆಂದರೆ ಸಾಯುವವರೆಗೆ ಮಂಗಳನ ಅಂಗಳವೇ ಕಾಯಂ ನಿವಾಸವಾಗಲಿದೆ.
 
2010ರಲ್ಲಿ ಮಾರ್ಸ್ ಒನ್ ಕಂಪೆನಿಯನ್ನು ಎಂಜಿನಿಯರ್ ಬಾಸ್ ಲ್ಯಾನ್ಸ್‌ಡಾರ್ಪ್ ಹುಟ್ಟುಹಾಕಿದರು.ಪ್ರಸ್ತುತ ತಂತ್ರಜ್ಞಾನಗಳನ್ನು ಆಧರಿಸಿ ಯೋಜನೆಯ ವಾಸ್ತವ ನೀಲ ನಕ್ಷೆ ಮತ್ತು ಹಣಕಾಸು ಯೋಜನೆ ರೂಪಿಸಿರುವುದಾಗಿ ಮಾರ್ಸ್ ಒನ್ ತಿಳಿಸಿದ್ದು, ಯೋಜನೆ ಸಂಪೂರ್ಣ ಕಾರ್ಯಸಾಧ್ಯ ಎಂದೂ ಭರವಸೆ ನೀಡಿದೆ. ಜೀವಿಸುವುದಕ್ಕೆ ಅಗತ್ಯವಾದ ಮೂಲಭೂತ ಧಾತುಗಳು ಗ್ರಹದಲ್ಲಿ ಈಗಾಗಲೇ ಲಭ್ಯವಿವೆ.
 
ಉದಾಹರಣೆಗೆ, ನೀರನ್ನು ಮಣ್ಣಿನಲ್ಲಿರುವ ಮಂಜಿನಿಂದ ತೆಗೆಯಬಹುದು ಮತ್ತು ನಾವು ಉಸಿರಾಡುವ ಗಾಳಿಯಲ್ಲಿರುವ ಮುಖ್ಯ ಧಾತು ಸಾರಜನಕದ ಮೂಲಗಳನ್ನು ಮಂಗಳ ಹೊಂದಿದೆ. ವಸಾಹತನ್ನು ವಿಶೇಷವಾಗಿ ಅಳವಡಿಸಿದ ಸೌರ ಪ್ಯಾನೆಲ್‌ಗಳಿಂದ ವಿದ್ಯುತ್ ಒದಗಿಸಲಾಗುತ್ತದೆ ಎಂದು ವೆಬ್‌ಸೈಟ್ ತಿಳಿಸಿದೆ.
ಒಟ್ಟಿನಲ್ಲಿ ಮಂಗಳನ ಅಂಗಳಕ್ಕೆ ಮಾನವನನ್ನು ಇದುವರೆಗೆ ಯಾವ ರಾಷ್ಟ್ರವೂ ಇನ್ನೂ ಕಳಿಸಿಲ್ಲ.  ಹೀಗಿರುವಾಗ  2023ರಲ್ಲಿ ಮಂಗಳನ ಮೇಲೆ ಇಳಿದು ವಸಾಹತು ನಿರ್ಮಾಣ ಮಾಡುವುದಾಗಿ ಮಾರ್ಸ್ ಒನ್ ಕಂಪೆನಿ ಹೇಳುತ್ತಿರುವುದು ಬುರುಡೆಪುರಾಣವೇ ಅಥವಾ ನಿಜವೇ ಎನ್ನುವುದನ್ನು ಕಾದುನೋಡಬೇಕು.


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery