ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್, ಡೀಸೆಲ್

ನವದೆಹಲಿ: ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ಮಿಲ್ಕ್ ಮ್ಯಾನ್ ಅಥವಾ ಸುದ್ದಿಪತ್ರಿಕೆ ಹಾಕುವ ಹುಡುಗನ ರೀತಿಯಲ್ಲಿ ಪೆಟ್ರೋಲ್ ವಾಲಾ ಅಥವಾ ಡೀಸೆಲ್ ವಾಲಾ  ಆಗಮಿಸಿ ಇಂಧನವನ್ನು ಸರಬರಾಜು ಮಾಡುವ ಕಾಲ ಸನ್ನಿಹಿತವಾಗಿದೆ.

ನಾವು ಇ-ವಾಣಿಜ್ಯ ಪೋರ್ಟಲ್‌ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತರುತ್ತೇವೆ. ಬಹುಶಃ ನೀವು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗುತ್ತೀರಿ. ಪೋರ್ಟಲ್‌ನಲ್ಲಿ ನೀವು ಪೆಟ್ರೋಲ್ ಬುಕ್ ಮಾಡಿ ಆನ್ ಲೈನ್ ಪೇಮೆಂಟ್ ಮಾಡಿದರೆ,  ಮಾರನೇ ದಿನ 8 ಗಂಟೆಯೊಳಗೆ ಪೆಟ್ರೋಲ್ ಪೂರೈಸಬೇಕೆಂದು ತಿಳಿಸಿದ್ದರೆ, ಮಾರನೇ ದಿನ ಬೆಳಿಗ್ಗೆ ಕಚೇರಿಗೆ ಹೊರಡುವಷ್ಟರಲ್ಲಿ ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್ ಸರಬರಾಜು ಆಗಿರುತ್ತದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರದಾನ್ ತಿಳಿಸಿದ್ದಾರೆ.

 ಜನರಿಗೆ ಅನುಕೂಲದ ಮಟ್ಟವನ್ನು ಹೆಚ್ಚಿಸಲು ಚಕ್ರಗಳ ಮೇಲೆ ಮಿನಿ ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪ್ರಧಾನ್ ನುಡಿದರು.

ಎಸ್‌ಯುವಿಗಳಲ್ಲಿ 70-80 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವಿರುತ್ತದೆ. ಇಂತಹ 4-5 ಎಸ್‌ಯುವಿಗಳಿಗೆ ಇಂಧನ ತುಂಬಿಸುವ ಸಣ್ಣ ಟ್ಯಾಂಕರ್ ನಿಮ್ಮ ಮನೆ ಬಾಗಿಲಿಗೆ ಬರುವುದನ್ನು ಊಹಿಸಿಕೊಳ್ಳಿ. ಇದೊಂದು ಮಹತ್ತರವಾದ ಮನೆ ಬಾಗಿಲಿಗೆ ಸರಬರಾಜು ಮಾಡುವ ಅನುಕೂಲ ಎಂದು ನುಡಿದರು.
Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery