ಕರ್ನಾಟಕದ ಜನರು ಮಾನವೀಯತೆ ಮರೆತಿದ್ದಾರೆಯೇ?

ಬೆಂಗಳೂರು: ಚಿತ್ರದುರ್ಗದ ಮೊಳಕಾಲ್ಮೂರುವಿನಲ್ಲಿ ಇತ್ತೀಚೆಗೆ ಒಂದು ಅಪಘಾತ ನಡೆಯಿತು. ಲಾರಿಯೊಂದು ಆಟೊಗೆ ಡಿಕ್ಕಿಹೊಡೆದಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಬ್ಬನ ಎರಡೂ ಕಾಲುಗಳ ಮೇಲೆ ಲಾರಿಯ ಚಕ್ರ ಹರಿದಿದ್ದರಿಂದ ಅವನ ಕಾಲುಗಳು ತುಂಡಾಗಿ ನೋವಿನಿಂದ ನರಳುತ್ತಿದ್ದ. ಯಾರಾದ್ರೂ ಕಾಪಾಡಿ, ಅಯ್ಯೋ ಅಮ್ಮಾ ಎಂಬ ಅವನ ಆರ್ತನಾದಕ್ಕೆ ಅಲ್ಲಿ ಸೇರಿದ್ದ ಜನರ ಮನಸ್ಸು ಕರಗಲಿಲ್ಲ. 

ರಕ್ತದ ಮಡುವಿನಲ್ಲಿ ರಮೇಶ್ ಎಂಬ ಯುವಕ ಬಿದ್ದಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಯಾರೊಬ್ಬರೂ ಸಮೀಪದ ಆಸ್ಪತ್ರೆಗೆ ಒಯ್ಡು ನೆರವಾಗುವುದಕ್ಕೆ ಮುಂದೆ ಬರಲಿಲ್ಲ.

ಜನರು ಮಾನವೀಯತೆ ಮರೆತಂತೆ, ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರೇ ವಿನಾ ನಮಗೇಕೆ ಸುಮ್ಮನೇ ಪೊಲೀಸು, ಕೇಸು ಅಂತಾ ಉಸಾಬರಿ ಎಂದು ಭಾವಿಸಿದವರೇ ಹೆಚ್ಚು.  ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ನೆರವಾದವರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಭರವಸೆ ನೀಡಿದ್ದರೂ ಜನರ ಮನಸ್ಥಿತಿ ಮಾತ್ರ ಇನ್ನೂ ಬದಲಾಗಿಲ್ಲ.

ಲಮಂಗಲ, ಕೊಪ್ಪಳದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಈಗ ಮೊಳಕಾಲ್ಮೂರುವಿನಲ್ಲಿ ಕೂಡ ಯಾರೂ ನೆರವು ನೀಡುವ ಹೃದಯವಂತಿಕೆ ತೋರದೇ ಗಾಯಾಳು ರಮೇಶ್ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದ. ಅಷ್ಟರಲ್ಲಿ ರಕ್ತವು ಸಾಕಷ್ಟು ಹರಿದುಹೋಗಿದ್ದರಿಂದ ಆಂಬ್ಯುಲೆನ್ಸ್ ಒಂದರಲ್ಲಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆ ವ್ಯಕ್ತಿ ಮೃತಪಟ್ಟಿದ್ದ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery