ಮಲ್ಯ ಆಸ್ತಿ ವಿವರಗಳನ್ನು ಬ್ಯಾಂಕ್ ಒಕ್ಕೂಟಕ್ಕೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಸುಪ್ರೀಂಕೋರ್ಟ್ ಮಂಗಳವಾರ ಉದ್ಯಮಿ ವಿಜಯ್ ಮಲ್ಯ, ಅವರ ಮೂವರು ಮಕ್ಕಳು ಮತ್ತು ಪರಿತ್ಯಕ್ತ ಪತ್ನಿ ಹೊಂದಿರುವ ಆಸ್ತಿಯ ವಿವರಗಳನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ನೀಡಿದೆ.

ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರ ಮನವಿ ಮೇಲೆ  ಸುಪ್ರೀಂಕೋರ್ಟ್ ಈ ವಿವರಗಳನ್ನು ನೀಡಿದೆ. ಈ ವಿವರಗಳ ಆಧಾರದ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ  2 ತಿಂಗಳಲ್ಲಿ ಮಾಹಿತಿ ನೀಡುವಂತೆ ಉನ್ನತ ನ್ಯಾಯಾಲಯ ಕೇಳಿದೆ.

ಸುಪ್ರೀಂಕೋರ್ಟ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ಇಡುವಂತೆ,  ಭಾರತಕ್ಕೆ ಹಿಂತಿರುಗುವ ಸಂಭವನೀಯ ದಿನಾಂಕವನ್ನು ಬಹಿರಂಗ ಮಾಡುವಂತೆ ನೀಡಿದ ಆದೇಶಕ್ಕೆ ಗೌರವ ನೀಡದ ಬಗ್ಗೆ ಸುಪ್ರೀಂಕೋರ್ಟ್ ಮಲ್ಯರನ್ನು ತರಾಟೆಗೆ ತೆಗೆದುಕೊಂಡಿತು. ಜಾಮೀನುರಹಿತ ಬಂಧನದ ಆದೇಶ ಎದುರಿಸುತ್ತಿರುವ ಮಲ್ಯ ಮುಂಚಿನ 4,400 ಕೋಟಿ ರೂ. ಜತೆಗೆ ಹೆಚ್ಚುವರಿ 2468 ರೂ. ಠೇವಣಿ ಇಡಲು ಸಿದ್ಧವಿರುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. 

ಈಗ ಮಲ್ಯ ಲಂಡನ್‌ನಲ್ಲಿ ವಾಸ್ತವ್ಯ ಹೂಡಿರುವುದರಿಂದ ಅವರ ವಿರುದ್ಧ ಬಂಧನದ ಆದೇಶ ಎಷ್ಟರಮಟ್ಟಿಗೆ ಜಾರಿಗೆ ಬರುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮಲ್ಯ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಲಂಡನ್‌ಗೆ ಹಾರಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery