ಮೈಗೆ ಅಂಟುವ ಬಿಗಿಯಾದ ಜೀನ್ಸ್‌ಗಳಿಂದ ನರಗಳಿಗೆ ಹಾನಿ

ಲಂಡನ್: ಮೈಗಂಟಿಕೊಳ್ಳುವ ಬಿಗಿಯಾದ ಜೀನ್ಸ್ ಧರಿಸಬೇಡಿ, ಅದು ಹೆಚ್ಚು ಕಾಲ ಧರಿಸುವುದು ಇನ್ನೂ ಅಪಾಯಕಾರಿ. ಹೀಗೆಂದು ಆಸ್ಟ್ರೇಲಿಯಾದ ವೈದ್ಯರು ಹೇಳುತ್ತಾರೆ. 35 ವರ್ಷದ ಮಹಿಳೆಯೊಬ್ಬರು ಟೈಟ್ ಫಿಟ್ಟಿಂಗ್ ಜೀನ್ಸ್ ಧರಿಸಿದ ಬಳಿಕ ಸ್ನಾಯು ಹಾನಿ, ಊದುವಿಕೆ, ಕಾಲಿನ ನರಗಳ ಬ್ಲಾಕೇಜ್ ಉಂಟಾಗಿ ನಡೆಯಲೂ ಆಗದ ಸ್ಥಿತಿ ಉಂಟಾಗಿ ನಾಲ್ಕು ದಿನಗಳ ಕಾಲ ಆಸ್ಪತ್ರೆಗೆ ಸೇರಿದ ಸಂಗತಿ ವರದಿಯಾಗಿದೆ. 
 
ರೋಗಿಯ ನರಗಳು ಮತ್ತು ಸ್ನಾಯುಗಳಿಗೆ ತೀವ್ರ ಹಾನಿಯಾಗಿದ್ದು ಕಂಡು ಅಚ್ಚರಿಯಾಯಿತು ಎಂದು ಆಸ್ಟ್ರೇಲಿಯಾದ ರಾಯಲ್ ಅಡೆಲೇಡ್ ಆಸ್ಪತ್ರೆಯ ಡಾ. ಥಾಮಸ್ ಕಿಂಬರ್ ಹೇಳಿದ್ದಾರೆ.  ನರಗಳಿಗೆ ಹಾನಿಯಾದ ಮಹಿಳೆ ಹಿಂದಿನ ದಿನ  ಕಪ್‌ಬೋರ್ಡ್ ಖಾಲಿ ಮಾಡುವಾಗ ಮಂಡಿಗಳ ಮೇಲೆ ದೀರ್ಘಾವಧಿ ಕುಳಿತುಕೊಂಡಿದ್ದರು. ಬಿಗಿಯಾದ ಜೀನ್ಸ್ ಧರಿಸಿದ್ದ ಮಹಿಳೆ ಮನೆಗೆ ತೆರಳುವಾಗ ಕಾಲು ಜೋಮು ಹಿಡಿದಂತಾಗಿ ಕೆಳಕ್ಕೆ ಬೀಳುವಂತಾಯಿತು. ಆಸ್ಪತ್ರೆಗೆ ಹೋಗುವುದಕ್ಕೆ ಮುನ್ನ ಅನೇಕ ಗಂಟೆಗಳ ಕಾಲ ನಿಲ್ಲಬೇಕಾಯಿತು.
 
ಕಂಬರ್ ಮತ್ತು ಸಹೋದ್ಯೋಗಿಗಳು ಈ ಪ್ರಕರಣದ ಬಗ್ಗೆ ಆನ್ಲೈನ್‌ನಲ್ಲಿ ವರದಿಯೊಂದನ್ನು ಪ್ರಕಟಿಸಿದರು. ಇದಕ್ಕೆ ಮುಂಚೆ ಬಿಗಿಯಾದ ಜೀನ್ಸ್ ತೊಡೆಸಂದುಗಳಲ್ಲಿ ನರಗಳಿಗೆ ಹಾನಿಯಾಗಿದ್ದು ವರದಿಯಾಗಿತ್ತು.ಆದರೆ ಕೆಳಕಾಲಿನಲ್ಲಿ ನರಗಳ ಸಮಸ್ಯೆ ಮತ್ತು ತೀವ್ರ ಸ್ನಾಯು ಹಾನಿಯನ್ನು ಹಿಂದೆಂದೂ ಕಂಡಿರಲಿಲ್ಲ. ಮಂಡಿಯೂರಿ ಕುಳಿತುಕೊಂಡಿದ್ದರಿಂದ ಕೆಳ ಕಾಲಿನ ನರಗಳನ್ನು ಕುಗ್ಗಿಸಿ, ಮೀನಖಂಡದ ಸ್ನಾಯುಗಳಿಗೆ ರಕ್ತದ ಹರಿವನ್ನು ನಿಲ್ಲಿಸಿತ್ತು. ಮೈಗಂಟುವ ಜೀನ್ಸ್ ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿತು.
 
 ಮಹಿಳೆಯ ಜೀನ್ಸ್ ಕತ್ತರಿಸಿ ತೆಗೆದು ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಅವಳ ಕಾಲುಗಳು ದುರ್ಬಲವಾಗಿದ್ದರೂ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪೂರ್ಣ ಚೇತರಿಸಿಕೊಂಡಿದ್ದಾರೆ.


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery