ಆಂಧ್ರದ ಮಹಿಳಾ ಟೆಕ್ಕಿ ಮತ್ತು ಪುತ್ರ ಅಮೆರಿಕದಲ್ಲಿ ಹತ್ಯೆ

ವಿಜಯವಾಡಾ: ವಿಜಯವಾಡಾದ 38 ವರ್ಷ ವಯಸ್ಸಿನ ಮಹಿಳೆ ಟೆಕ್ಕಿ ಮತ್ತು ಅವರ 7 ವರ್ಷದ ಪುತ್ರನನ್ನು ಅಮೆರಿಕಾದ ನ್ಯೂಜೆರ್ಸಿಯ ಮೇಪಲ್ ಶೇಡ್ ಟೌನ್‌ಶಿಪ್ ಫ್ಲಾಟ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನಾರಾ ಶಶಕಿಲಾ ಮತ್ತು ಪುತ್ರ ಅನಿಷ್ ಸಾಯ್ ಅವರ ಗಂಟಲನ್ನು ಸೀಳಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದು ಪತ್ತೆಯಾಗಿದೆ. ಈ ಮಧ್ಯೆ, ನ್ಯೂ ಜೆರ್ಸಿಯಲ್ಲಿರುವ ಕಾನೂನು ಜಾರಿ ಅಧಿಕಾರಿಗಳು ಈ ಹತ್ಯೆಯನ್ನು ಜನಾಂಗೀಯ ಹತ್ಯೆ ಎಂಬುದನ್ನು ಅಲ್ಲಗಳೆದರು. ನ್ಯೂ ಜೆರ್ಸಿ ಪೊಲೀಸರು ಎಲ್ಲಾ ಆಯಾಮಗಳಿಂದ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಸಂಭವನೀಯ ದರೋಡೆ ಪ್ರಯತ್ನವನ್ನು ಕೂಡ ತನಿಖೆ ನಡೆಸಿದ್ದಾರೆ.

ಆದರೆ ಸಂತ್ರಸ್ತೆಯ ಪೋಷಕರು ಶಶಿಕಲಾ ಪತಿಯ ಮೇಲೆ ತಮಗೆ ಬಲವಾದ ಶಂಕೆಯಿರುವುದಾಗಿ ತಿಳಿಸಿದ್ದಾರೆ.
ಶಶಿಕಲಾ ಪತಿ ಹನುಮಂತರಾವ್ ಕಚೇರಿಯಿಂದ ನಿವಾಸಕ್ಕೆ ಬಂದಾಗ ಪತ್ನಿ ಮಗುವಿನ ಮೃತದೇಹಗಳನ್ನು ಕಂಡಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹನುಮಂತರಾವ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರ ಸೆಲ್‌ಫೋನ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರಂಭಿಕ ತನಿಖೆಯಲ್ಲಿ ಅನೇಕ ಬಾರಿ ದುರ್ದೈವಿಗಳಿಗೆ ಚೂರಿಯಿಂದ ಇರಿದಿರುವುದು ಪತ್ತೆಯಾಗಿದೆ ಎಂದು ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆ ತಿಳಿಸಿದೆ.
ಮೃತ ಮಹಿಳೆಯ ತಂದೆ ವೆಂಕಟೇಶ್ವರ ರಾವ್ ಮಾತ್ರ ತಮ್ಮ ಅಳಿಯನೇ ಈ ದುಷ್ಕೃತ್ಯವೆಸಗಿದ್ದಾನೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ನನ್ನ ಅಳಿಯ ಬೇರೊಬ್ಬ ಮಹಿಳೆ ಜತೆ ಕೆಲವು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದು ಶಶಿಕಲಾ ಮತ್ತು ಅನೀಶನನ್ನು ಕೊಂದಿದ್ದಾನೆಂದು ಅವರು ಆರೋಪಿಸಿದರು.
 Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery