ಲೇಬಲ್‌ಗಳಲ್ಲಿ ಆಹಾರದ ಎಲ್ಲಾ ಅಂಶಗಳನ್ನೂ ತಿಳಿಸಬೇಕು
ಮುಂಬೈ: ಮ್ಯಾಗಿಯ ಮಾದರಿಗಳ ಪರೀಕ್ಷೆಯಲ್ಲಿ ಸೀಸ ಮತ್ತು ಎಂಎಸ್‌ಜಿ ಪತ್ತೆಯಾದ ಬಳಿಕ, ದೇಶದ ಆಹಾರ ಪ್ಯಾಕೇಜಿಂಗ್ ನಿಯಮಗಳನ್ನು ಬಲಪಡಿಸಿ ಗ್ರಾಹಕ ಹಿತಾಸಕ್ತಿಗಾಗಿ ಇನ್ನಷ್ಟು ಬಹಿರಂಗಗಳನ್ನು ಸೇರಿಸಬೇಕೆಂಬ ಬಗ್ಗೆ ಬೆಳಕುಚೆಲ್ಲಿದೆ.
 
ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ಯಾಕೇಜಿಂಗ್ ಬಹಿರಂಗದಲ್ಲಿ ಆಹಾರದ ಎಲ್ಲ ಪದಾರ್ಥಗಳು ಮತ್ತು ಪೌಷ್ಠಿಕಗಳ ಪ್ರಮಾಣವನ್ನು ನೀಡಲಾಗುತ್ತದೆ. ಈ ಉತ್ಪನ್ನ ಕಾರ್ಖಾನೆಯಲ್ಲಿ ಉತ್ಪಾದನೆಯಾಗಿದೆಯೇ  ಎಂಬ ಸತ್ಯಾಂಶವನ್ನು ಒಳಗೊಂಡಿರುತ್ತವೆ. ಏಕೆಂದರೆ ಕೆಲವು ಗ್ರಾಹಕರಿಗೆ ಅವು ಅಲರ್ಜಿಯಾಗುವ ಸಾಧ್ಯತೆಯಿದೆ.
 
ಆಹಾರದಲ್ಲಿರುವ ಪದಾರ್ಥಗಳ ಬಗ್ಗೆ ಮತ್ತು ಆರೋಗ್ಯದ ಮೇಲೆ ಅವುಗಳ ಪರಿಣಾಮ ಮತ್ತು ಅಲರ್ಜಿಗಳ ಬಗ್ಗೆ ಅರಿವು ಹೆಚ್ಚುತ್ತಿರುವ ನಡುವೆ ಭಾರತದಲ್ಲಿ ಲೇಬಲಿಂಗ್(ಆಹಾರದಲ್ಲಿರುವ ಅಂಶಗಳ ಪಟ್ಟಿ) ನಿಯಮ ಬದಲಾಗಬೇಕು ಎಂದು ಕೈಗಾರಿಕೆ ತಜ್ಞರು ಭಾವಿಸಿದ್ದಾರೆ. 
 
 ಈ ನಿಯಮಗಳನ್ನು ಬದಲಾವಣೆ ಮಾಡಿದಾಗ, ಆಹಾರ ಕಂಪನಿಗಳು ಅದಕ್ಕೆ ಹುರುಪು ತೋರುತ್ತವೆ. ಬಳಿಕ ಸಣ್ಣ ಕಂಪನಿಗಳು ಕೂಡ ತಾವೇತಾವಾಗಿ ಅದನ್ನು ಅನುಸರಿಸುತ್ತವೆ ಎಂದು ಎಫ್‌ಐಸಿಸಿಐ ಉಪ ಪ್ರಧಾನ ಕಾರ್ಯದರ್ಶಿ ವಿನಯ್ ಶಂಕರ್ ಮಾಥುರ್ ಹೇಳಿದ್ದಾರೆ. 


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery