ಭಾರತದ ಕಳಪೆ ಬ್ಯಾಟಿಂಗ್: ಕೀಫ್ ಸ್ಪಿನ್ ದಾಳಿಗೆ ಬಲಿ

ಪುಣೆ: ಸ್ಟೀವ್ ಓ ಕೀಫ್ ಅವರ  ಮಾರಕ ಸ್ಪಿನ್ ದಾಳಿಗೆ ತುತ್ತಾದ ಭಾರತ ಕೇವಲ 105 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 143ಕ್ಕೆ 4 ವಿಕೆಟ್ ಗಳಿಸಿದ್ದು, 298 ರನ್ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ ಅಂತಿಮ ವಿಕೆಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಪ್ರಬಲ ಪ್ರತಿರೋಧ ಒಡ್ಡಿದರು. ಅಂತಿಮವಾಗಿ ಸ್ಟಾರ್ಕ್ 5ನೇ ಎಸೆತಕ್ಕೆ ಔಟ್ ಆಗಿದ್ದರಿಂದ ಪ್ರವಾಸಿ ತಂಡ 260ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಭಾರತ ಕಳಪೆಯಾಗಿ ಬ್ಯಾಟಿಂಗ್ ಆರಂಭಿಸಿ ಮುರಳಿ ವಿಜಯ್ 10 ರನ್ ಮಾಡಿ ಔಟಾದರು. ಚೇತೇಶ್ವರ್ ಪೂಜಾರ್ ಕೂಡ ವಿಜಯ್ ಅವರನ್ನು ಹಿಂಬಾಲಿಸಿದ್ದರಿಂದ ಭಾರತ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು.

ಆದರೆ ವಿರಾಟ್ ಕೊಹ್ಲಿ ಕೂಡ ಎರಡನೇ ಸ್ಲಿಪ್‌ನಲ್ಲಿ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.ರಾಹುಲ್ ಅವರು ರಹಾನೆ ಜತೆ 50 ರನ್ ಸೇರಿಸಿದರು. ಲಂಚ್ ವೇಳೆಗೆ ಭಾರತ 94ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. ರಹಾನೆ ಕೂಡ ಬೇಗನೇ ಔಟಾಗಿದ್ದರಿಂದ 95 ರನ್‌ಗೆ ಅರ್ಧ ತಂಡವನ್ನು ಕಳೆದುಕೊಂಡಿತ್ತು. ಮುಂದಿನ 30 ನಿಮಿಷಗಳಲ್ಲಿ, ಭಾರತ ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್ ವಿಕೆಟ್‌ಗಳನ್ನು ಒಂದರ ಹಿಂದೊಂದು ಕಳೆದುಕೊಂಡಿತು. ಸ್ಟೀವ್ ಓ ಕೀಫ್ ಅವರ ಸ್ಪಿನ್ ಬಲೆಗೆ ಭಾರತದ ಬ್ಯಾಟ್ಸ್ ಮನ್‌ಗಳು ಬೇಗನೇ ಪೆವಿಲಿಯನ್ ಹಾದಿ ಹಿಡಿದರು. ಓ ಕ್ಲೀಫ್ ಅವರು 6 ವಿಕೆಟ್ ಕಬಳಿಸಿ ಶ್ರೇಷ್ಟ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.



Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery