ನೋಟು ಅಮಾನ್ಯೀಕರಣದ ವಿರುದ್ಧ ಕಾಂಗ್ರೆಸ್ ಕರಾಳ ದಿನ

ಮಂಗಳೂರು/ ಉಡುಪಿ: ಕೇಂದ್ರ ಸರ್ಕಾರ 2016ರ ನವೆಂಬರ್ 8ಕ್ಕೆ 1000 ಮತ್ತು 500 ರೂ. ನೋಟುಗಳನ್ನು ರದ್ದು ಮಾಡಿದ ಒಂದನೇ ವಾರ್ಷಿಕದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ತನ್ನ ಪಕ್ಷದ ಕಚೇರಿಯಲ್ಲಿ ನವೆಂಬರ್ 8ರಂದು ಕರಾಳ ದಿನವನ್ನು ಆಚರಿಸಿತು. ನೋಟು ರದ್ಧತಿ ಕ್ರಮ ಅತೀ ದೊಡ್ಡ ಹಗರಣವಾಗಿ ಶ್ರೀಮಂತರಿಗೆ ಅನುಕೂಲ ಕಲ್ಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತು.

500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಿ ಜನರನ್ನು ದಯನೀಯ ಸ್ಥಿತಿಗೆ ದೂಡಿದ ಕೇಂದ್ರ ಸರ್ಕಾರದ ವಿರುದ್ದ ನಾವು ರಾಷ್ಟ್ರಾದ್ಯಂತ ಕರಾಳ ದಿನ ಆಚರಿಸುತ್ತಿದ್ದೇವೆ ಎಂದು ಪ್ರತಿಭಟನೆಕಾರರನ್ನು ಉದ್ದೇಶಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್ಥಿಕ ಬೆಳವಣಿಗೆ ಸುಸ್ಥಿತಿಯಲ್ಲಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗಿನಿಂದ ಆರ್ಥಿಕ ಬೆಳವಣಿಗೆ ಗಂಭೀರ ಹಂತಕ್ಕೆ ಜಾರಿಗೆ ಎಂದು ಅವರು ಟೀಕಿಸಿದರು.

 ನೋಟು ರದ್ಧತಿ ಕ್ರಮವನ್ನು ಪ್ರಕಟಿಸಿದಾಗ ಅನೇಕ ಕಾಂಗ್ರೆಸ್ ಮುಖಂಡರು ಇದು ಭಾರತದ ಆರ್ಥಿಕತೆಯ ದುರಂತ ಎಂದು ಹೇಳಿದ್ದರು. ಆದರೆ ಯಾರೂ ಆಗ ಅವರ ಮಾತನ್ನು ಕೇಳಲಿಲ್ಲ. ಬಿಜೆಪಿ ದೇಶದ ಅರ್ಥವ್ಯವಸ್ಥೆ ಕುರಿತು ಶ್ವೇತಪತ್ರವನ್ನು ಬಹಿರಂಗ ಮಾಡಬೇಕು. ಬಿಜೆಪಿಯ ತಪ್ಪು ನೀತಿಯಿಂದ ಅಪಾರ ಜನರು ಕಷ್ಟಪಡುವಂತಾಗಿದೆ ಎಂದು ಅವರು ದೂರಿದರು.

ವಿಧಾನಪರಿಷತ್ತಿನ ಮುಖ್ಯ ಸಚೇತಕ ಐವಾನ್ ಡಿಸೋಜಾ ಮಾತನಾಡುತ್ತಾ, ಒಂದು ವರ್ಷದ ಹಿಂದೆ, ನೋಟು ರದ್ಧತಿ ಕ್ರಮವನ್ನು ಸರ್ಜಿಕಲ್ ದಾಳಿ ಎಂದು ಬಣ್ಣಿಸಲಾಗಿತ್ತು. ಆದರೆ ಇದು ಭಾರತದ ಅರ್ಥವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಂದು ಅನೇಕ ತಜ್ಞರು ತಿಳಿಸಿದ್ದರು.

ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು 90 ದಿನಗಳ ಕಾಲಾವಕಾಶ ಕೇಳಿ, ಅದಾದ ಬಳಿಕ ಜನರು ಈ ಕ್ರಮವನ್ನು ಸ್ವಾಗತಿಸುತ್ತಾರೆಂದು ಭರವಸೆ ನೀಡಿದ್ದರು.


ಆದರೆ ಈಗ ಒಂದು ವರ್ಷವಾಗಿದೆ. ಈಗಲೂ ನೋಟುಗಳ ಮೇಲೆ ಸರ್ಜಿಕಲ್ ದಾಳಿಯಿಂದ ಜನರಿನ್ನೂ ಚೇತರಿಸಿಕೊಂಡಿಲ್ಲ. ಜನರು ದಿಕ್ಕಾಪಾಲಾಗಿದ್ದಾರೆ. ಅನೇಕ ಜನರು ನೋಟು ಅಮಾನ್ಯೀಕರಣದಿಂದ ಜೀವನವನ್ನು ಕಳೆದುಕೊಂಡಿದ್ದಾರೆ.

ನೋಟು ರದ್ಧತಿಯನ್ನು ಕಪ್ಪು ಹಣ ಹೊರತೆಗೆಯಲು ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆಗೆ ಕಡಿವಾಣ ಹಾಕುವ ಮುಖ್ಯ ಉದ್ದೇಶದಿಂದ ಮಾಡಲಾಯಿತು. ಆದರೆ ಇಂದಿಗೂ ಕೂಡ ಇದ್ಯಾವುದೂ ಫಲಿಸಲಿಲ್ಲ. ಬದಲಾಗಿ ಅನೇಕ ಬಡಜನರ ಜೀವವನ್ನು ಬಲಿತೆಗೆದುಕೊಂಡಿತು. ಆದರೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರವರಿಗೆ ಯಾವುದೇ ಪರಿಹಾರ ನೀಡಲಿಲ್ಲ. ಇದು ಭಾರತದ ಅತೀ ದೊಡ್ಡ ಹಗರಣವಾಗಿ ಪರಿವರ್ತನೆಯಾಗಿ, ಶ್ರೀಮಂತ ಜನರಿಗೆ ತಮ್ಮಲ್ಲಿದ್ದ ಕಪ್ಪು ಹಣವನ್ನು ಬಿಳಿಯ ಹಣವಾಗಿ ಪರಿವರ್ತಿಸಲು ಅವಕಾಶ ನೀಡಿತು ಎಂದು ಅವರು ಟೀಕಿಸಿದರು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery