ಜೊಕೋವಿಕ್ ಜತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಚೊಚ್ಚಲ ಹಾಲಿವುಡ್ ಸಿನಿಮಾ xxx ನ ಚಿತ್ರೀಕರಣದ ಸಂದರ್ಭದಲ್ಲಿ ಖ್ಯಾತ ಟೆನ್ನಿಸ್ ಆಟಗಾರ ನೊವಾಕ್ ಜೋಕೋವಿಕ್ ಜತೆ ಕಾಣಿಸಿಕೊಂಡು ಸುದ್ದಿಗೆ ಗ್ರಾಸ ಒದಗಿಸಿದ್ದಾರೆ. ದೀಪಿಕಾ ಮತ್ತು ಜೋಕೋವಿಕ್ ಲಾಸ್ ಏಂಜಲಿಸ್ ಬಾರ್‌ನಿಂದ ನಿರ್ಗಮಿಸುತ್ತಿರುವುದನ್ನು ಡೇಲಿ ಮೇಲ್ ವರದಿ ಮಾಡಿದೆ.

ಆದರೆ ಈ ಸುದ್ದಿಯನ್ನು ಬಹಿರಂಗ ಮಾಡಿದ ಡೇಲಿ ಮೇಲ್ ವರದಿಗಾರನಿಗೆ ದೀಪಿಕಾರನ್ನು ಮಾತ್ರ ಗುರುತಿಸಲಾಗಲಿಲ್ಲ. ದೀಪಿಕಾ ನಟಿಯಾಗಿ ಬಾಲಿವುಡ್ ಜಗತ್ತಿನಲ್ಲಿ ಖ್ಯಾತಿ ಪಡೆದಿರುವುದು ಬಹುಶಃ ವರದಿಗಾರನಿಗೆ ಗೊತ್ತಿಲ್ಲವೆಂದು ಕಾಣುತ್ತದೆ. ದೀಪಿಕಾಳನ್ನು ಲೆಗ್ಗೀ ಬ್ರುನೆಟ್ ಎಂದಷ್ಟೇ ಕರೆದಿದ್ದಾರೆ.

ನೊವಾಕ್  2016ರ ಪುರುಷರ ಟೆನ್ನಿಸ್ ಎಟಿಪಿ ಶ್ರೇಯಾಂಕದಲ್ಲಿ ನಂ. 1 ಸ್ಥಾನಪಡೆದಿದ್ದರೆ, ದೀಪಿಕಾ ಬಾಲಿವುಡ್ ಎ-ಲಿಸ್ಟ್ ನಟಿ ಮತ್ತು ಹಾಲಿವುಡ್‌ಗೆ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ.

ದೀಪಿಕಾ ಬಾಜಿರಾವ್ ಮಸ್ತಾನಿ ನಟ ರಣವೀರ್ ಸಿಂಗ್ ಜತೆ ಡೇಟಿಂಗ್ ಮಾಡುತ್ತಿದ್ದಾರೆಂದು ವದಂತಿಯಿದ್ದು, xxx ಚಿತ್ರೀಕರಣಕ್ಕಾಗಿ ಕೆಲವು ದಿನಗಳಿಂದ ಲಾಸ್ ಏಂಜಲ್ಸ್‌ನಲ್ಲಿದ್ದಾರೆ.  ವಿನ್ ಡೀಸಲ್ ದೀಪಿಕಾರನ್ನು ಫರಿಯಸ್ 7 ಚಿತ್ರದಲ್ಲಿ ನಟಿಸಲು ಬಯಸಿದ್ದರು. ಆದರೆ ಸಮಯಾಭಾವದಿಂದ ಮತ್ತು ಅವಳ ಡೇಟ್ಸ್ ಕೊರತೆಯಿಂದ ಈ ಆಫರ್ ತೆಗೆದುಕೊಳ್ಳಲು ದೀಪಿಕಾಗೆ ಸಾಧ್ಯವಾಗಿಲ್ಲ. ದೀಪಿಕಾಳ ಚೊಚ್ಚಲ ಹಾಲಿವುಡ್ ಚಿತ್ರ ಜನವರಿ 20ರಂದು ಬಿಡುಗಡೆಯಾಗುತ್ತದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery