ಹಿಂಬದಿ ಸವಾರರು ಹೆಲ್ಮೆಟ್ ಖರೀದಿಸಬೇಕಾ?(ವಿಕ್ರಮಾದಿತ್ಯ-ಬೇತಾಳ)

ಎಲ್ಲೈ ವಿಕ್ರಮಾದಿತ್ಯ ರಾಜ್ಯ ಸರ್ಕಾರದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುವ ಹಿಂಬದಿ ಸವಾರರು ಶಿರಸ್ತ್ರಾಣ ಧರಿಸಬೇಕೆಂದು ಕಡ್ಡಾಯ ಮಾಡಿರುವುದು ಸರಿಯಲ್ಲವೇ, ಹೌದು ಬೇತಾಳ ಅದಕ್ಕೆ ಹೆಲ್ಮೆಟ್ ಎಂದು ನಮ್ಮಲ್ಲಿ ಕರೆಯುತ್ತಾರೆ.

ಸರಿ ಹೆಲ್ಮೆಟ್ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲು ನಾನು ಉತ್ಸುಕನಾಗಿದ್ದೇನೆ ವಿಕ್ರಮ,  ರಾಜ್ಯಸರ್ಕಾರ ಮುಂಬದಿ ಸವಾರರಿಗೆ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದೆ. ಈ ನಿಯಮ ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬ ಸಂದೇಹಗಳು ನನ್ನ ತಲೆಯನ್ನು ಕೊರೆಯುತ್ತಿವೆ ಈ ಪ್ರಶ್ನೆಗಳಿಗೆ ಉತ್ತರಿಸುವಂತವನಾಗು,

ಹಿಂಬದಿ ಸವಾರರಿಗೆ ಹೆಚ್ಚುವರಿ ಹೆಲ್ಮೆಟ್ ಯಾರು ಖರೀದಿಸಬೇಕು? ಹಿಂಬದಿ ಸವಾರರೇ ಖರೀದಿಸಬೇಕೋ ಅಥವಾ ದ್ವಿಚಕ್ರವಾಹನ ಸವಾರರು ಅವರಿಗಾಗಿ ಖರೀದಿಸಬೇಕಾ? ಹಿಂಬದಿ ಸವಾರರು ಸ್ವಂತ ವಾಹನ ಇಲ್ಲದಿದ್ದರೂ ಹೆಲ್ಮೆಟ್ ಖರೀದಿಸುತ್ತಾರೇನು?  ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಬೆಂಗಳೂರಿನ ಹಳ್ಳ, ಕೊಳ್ಳಗಳಿಂದ ಕೂಡಿದ ರಸ್ತೆಗಳು ಅಪಘಾತವನ್ನು ಆಹ್ವಾನಿಸುವುದಿಲ್ಲವೇ, ಕೆಲವರು ಉದಾಹರಣೆಗೆ ವಾಟಾಳ್ ನಾಗರಾಜ್ ಹಿಂಬದಿ ಸವಾರರಿಗೆ ಹೆಲ್ಮೆಟ್ ವಿರೋಧಿಸುತ್ತಿರುವುದೇಕೆ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಲಿಲ್ಲವಾದರೆ ನಿನ್ನ ತಲೆ ಒಡೆದು ನೂರು ಹೋಳಾದೀತು ಎಂದು ಬೇತಾಳ ಎಚ್ಚರಿಸಿದಾಗ,

ವಿಕ್ರಮಾದಿತ್ಯ-ಎಲೈ ಬೇತಾಳವೇ, ಸಮಾಧಾನಚಿತ್ತದಿಂದ ಕೇಳುವಂತವನಾಗು, ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವ ಸಂಕಟಕ್ಕೆ ಸಿಕ್ಕಿಬಿದ್ದಿದೆ. ಅತ್ತ ಧರಿ ಇತ್ತ ಹುಲಿಯಂತಾಗಿದೆ ಅದರ ಪಾಡು, ಇನ್ನು ಹಿಂಬದಿ ಸವಾರರು ದ್ವಿಚಕ್ರವಾಹನದಲ್ಲಿ ಸವಾರಿ ಮಾಡುವ ಆಸೆಯಿದ್ದರೆ  ಸ್ವಂತ ಖರ್ಚಿನಿಂದ ಹೆಲ್ಮೆಟ್ ಖರೀದಿಸಬೇಕಾಗುತ್ತದೆ.

ಇನ್ನು ರಸ್ತೆಯ ಅಸುರಕ್ಷತೆಯ ಬಗ್ಗೆ ನಾವು ಏನೂ ಹೇಳಲಾಗುವುದಿಲ್ಲ. ಎಲ್ಲವೂ ಸವಾರರ ಚಾಲನಾ ಕೌಶಲ್ಯವನ್ನು ಅವಲಂಬಿಸಿದೆ. ಕಿಲ್ಲರ್ ಬಿಎಂಟಿಸಿ ಚಕ್ರದಡಿ ಸಿಕ್ಕಿಕೊಳ್ಳದಿದ್ದರೆ ಮಾತ್ರ ಸಾಕು, ಕೆಳಕ್ಕೆ ಬಿದ್ದು ಕೈಕಾಲು ಮುರಿದರೂ ಜೀವಕ್ಕೇನೂ  ತೊಂದರೆಯಿಲ್ಲ, ಹೆಲ್ಮೆಟ್ ಧರಿಸಿದ್ದರಿಂದ ತಲೆಯಂತೂ ಕ್ಷೇಮವಾಗಿರುತ್ತದೆ. ಇನ್ನು ವಾಟಾಳ್ ಸದಾ ಟೋಪಿ ಧರಿಸುವುದರಿಂದ ಹಿಂಬದಿ ಸವಾರಿಗೆ ಹೆಲ್ಮೆಟ್ ವಿರೋಧಿಸುತ್ತಿರಬಹುದು ಎಂದು ಉತ್ತರಿಸಿದ ಕೂಡಲೇ ಬೇತಾಳ ಸೊಯ್ಯನೇ ಅವನ ಹೆಗಲಿನಿಂದ ಆಕಾಶಕ್ಕೇರಿ ವೃಕ್ಷದಲ್ಲಿ ನೇತುಹಾಕಿಕೊಂಡಿತು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery