ಮತಯಂತ್ರದ ಯಾವುದೇ ಗುಂಡಿ ಒತ್ತಿದರೂ ಬಿಜೆಪಿಗೆ ಓಟು

ಮ.ಪ್ರ.-  ಉತ್ತರಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಇತರೆ ಎಲ್ಲಾ ಪಕ್ಷಗಳಿಗೆ ಅಚ್ಚರಿಯಾಗಿತ್ತು. ಮತಯಂತ್ರಗಳ ದೋಷದಿಂದ ಫಲಿತಾಂಶ ತಲೆಕೆಳಗಾಗಿರಬಹುದು ಎಂಬ ಅನುಮಾನವನ್ನು ಅವು ವ್ಯಕ್ತಪಡಿಸಿತ್ತು.

ಇದಕ್ಕೆ ಪುಷ್ಠಿ ನೀಡುವಂತಹ ಬೆಳವಣಿಗೆ ಮಧ್ಯಪ್ರದೇಶದ ಉಪಚುನಾವಣೆಯ ಮತಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಎಲ್ಲಾ ಮತಗಳು ಬಿಜೆಪಿಗೆ ಬಿದ್ದಿರುವುದು ಬಯಲಾಗಿದೆ. ಯಾವುದೇ ಗುಂಡಿ ಒತ್ತಿದರೂ ಬಿಜೆಪಿಗೆ ಮತ ಬಿದ್ದಿರುವ ಚೀಟಿಯು ಮತಯಂತ್ರದಲ್ಲಿ ಕಂಡುಬಂತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್, ಆಮ್ ಆದ್ಮಿ ಮತ್ತಿತರ ಪಕ್ಷಗಳು ವಿಸ್ತ್ರತ ತನಿಖೆಗೆ ಒತ್ತಾಯಿಸಿವೆ.

ಮಧ್ಯಪ್ರದೇಶದ ಭಿಂಡ್ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ವಾರ ಉಪಚುನಾವಣೆ ನಡೆಯಲಿದೆ. ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬುದನ್ನು ಮತಯಂತ್ರದಲ್ಲೇ ‘ಚೀಟಿ' ಮೂಲಕ ಗಮನಿಸುವ ವಿವಿಪಿಎಟಿ ವ್ಯವಸ್ಥೆಯುಳ್ಳ ಮತಯಂತ್ರಗಳನ್ನು ಮತಗಟ್ಟೆಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದರ ಪ್ರಾತ್ಯಕ್ಷಿಕೆ ನೀಡುವಾಗ ಬೇರೆ ಯಾವುದೇ ಪಕ್ಷದ ಪರವಾಗಿ ಗುಂಡಿ ಒತ್ತಿದರೂ ಅದು ಬಿಜೆಪಿಗೆ ಬಿದ್ದಿದ್ದು ಚೀಟಿಯಲ್ಲಿ ತೋರಿಸಿದೆ..Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery