ಪರಪುರುಷನ ಪತ್ನಿಯ ಜತೆ ಅನೈತಿಕ ಸಂಬಂಧಕ್ಕೆ 5 ವರ್ಷ ಜೈಲು

ನವದೆಹಲಿ: ವೈವಾಹಿಕ ಜೀವನದ ಗಡಿಯನ್ನು ಮೀರಿದವರು ಕ್ರಿಮಿನಲ್ ಕ್ರಮಕ್ಕೆ ಗುರಿಯಾಗುತ್ತಾರೆಯೇ? ಭಾರತದ ಕಾನೂನು ಅದನ್ನು ದೃಢೀಕರಿಸುತ್ತದೆ. ಇನ್ನೊಬ್ಬ ವ್ಯಕ್ತಿಯ ಆಸ್ತಿಯನ್ನು ಅಂದರೆ ಅವರ ಪತ್ನಿಯನ್ನು ಅತಿಕ್ರಮ ಪ್ರವೇಶ ಮಾಡಿದರೆ ಅದು ಪುರುಷ ಸಂಗಾತಿಗೆ ಶಿಕ್ಷೆ ವಿಧಿಸುತ್ತದೆ. ಆದರೆ ಅನೈತಿಕ ಸಂಬಂಧದಲ್ಲಿ ಭಾಗಿಯಾದ ಪತ್ನಿಗೆ ಮಾತ್ರ ಯಾವ ಶಿಕ್ಷೆಯೂ ಇಲ್ಲ. 

ಹೈದರಾಬಾದ್ ಶಿವಾಜಿನಗರದ ನಿವಾಸಿಯಾದ ಸಿ. ಚನ್ನಯ್ಯ ಕಳೆದವಾರ ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಯ ತೆಕ್ಕೆಯಲ್ಲಿ ಹಾಸಿಗೆಯಲ್ಲಿರುವುದನ್ನು ಕಂಡು ವ್ಯಭಿಚಾರದ ಆರೋಪಗಳನ್ನು ಮಾಡಿದ್ದರು. ಚೆನ್ನಯ್ಯ ತಮ್ಮ ಪತ್ನಿ ಮತ್ತು ಪೇದೆ ಮದುಸೂದನ್ ರೆಡ್ಡಿಯನ್ನು ಮಲಗುವ ಕೋಣೆಯಲ್ಲಿ ಕೂಡಿಹಾಕಿ ಬಳಿಕ ಕೂಗೆಬ್ಬಿಸಿದ್ದರು.

ಈ ಅನೈತಿಕ ಸಂಬಂಧ ಅನೇಕ ತಿಂಗಳವರೆಗೆ ನಡೆದಿತ್ತೆಂದು ಅವರು ಆರೋಪಿಸಿದರು. ರೆಡ್ಡಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅಡಿಯಲ್ಲಿ ಬಂಧಿಸಲಾಯಿತು. ಕೋರ್ಟ್ ಆರೋಪಗಳನ್ನು ದೃಢೀಕರಿಸಿದರೆ ರೆಡ್ಡಿಗೆ 5 ವರ್ಷಗಳ ಜೈಲುಶಿಕ್ಷೆ ಖಂಡಿತ.

ಆದರೆ ವ್ಯಭಿಚಾರಿಣಿ ಮಹಿಳೆಗೆ ಈ ಕಾನೂನು ಅನ್ವಯಿಸುವುದಿಲ್ಲ. ಮಹಿಳೆ ಇಂತಹ ಶಿಕ್ಷೆಯಿಂದ ಹೊರಗುಳಿಯುತ್ತಾಳೆ. ಆದರೆ ಮಹಿಳೆಯ ವಿರುದ್ಧ ಅನೈತಿಕ ಸಂಬಂಧದ ಆರೋಪ ಸಾಬೀತಾದರೆ ಪತಿ ಅವಳಿಗೆ ವಿಚ್ಛೇದನ ಕೊಡುವ ಹಕ್ಕನ್ನು ಕೋರ್ಟ್ ಕೊಡುತ್ತದೆ ಮತ್ತು ಅವಳಿಗೆ ಯಾವುದೇ ರೀತಿಯ ಜೀವನಾಂಶ ಸಿಗುವುದಿಲ್ಲ.

ಸೆಕ್ಷನ್ 497ರ ಪ್ರಕಾರ ವ್ಯಭಿಚಾರವು ಅಪರಾಧವೆಂದು ಪರಿಗಣಿಸಿದೆ. ಅತ್ಯಂತ ನಿಖರವಾಗಿ, ಇದು ಪುರುಷನ ಪತ್ನಿಯನ್ನು ಕಳವು ಮಾಡಿದ ಹಾಗಾಗುತ್ತದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery