ಧೂಮಕೇತುಗಳ ಅಪ್ಪಳಿಸುವಿಕೆಯಿಂದ ಭೂಮಿಯಲ್ಲಿ ಸಾಗರ?

ಪ್ಯಾರಿಸ್-ಭೂಮಿಯ ಬಹುತೇಕ ಸಾಗರಗಳು ಧೂಮಕೇತುಗಳಿಂದ ಉಂಟಾಗಿರಬಹುದು ಎಂದು ಜರ್ನಲ್ ನೇಚರ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ತಿಳಿಸಿದೆ. ಬಿಲಿಯಾಂತರ ವರ್ಷಗಳ ಹಿಂದೆ ಈ ಧೂಮಕೇತುಗಳು ಶೈಶವಾವಸ್ಥೆಯಲ್ಲಿದ್ದ ಭೂಮಿಗೆ ಅಪ್ಪಳಿಸಿ, ನೀರ್ಗಲ್ಲಿನ ಗುಡ್ಡೆಯನ್ನು ರಾಶಿ ಹಾಕಿದವು ಎಂದು ಅದರಲ್ಲಿ ತಿಳಿಸಲಾಗಿದೆ.
 ನೀರಿನಲ್ಲಿ ಅತ್ಯಧಿಕ ಜಲಜನಕದ ಅನುಪಾತ ಇರುವುದು ಅದಕ್ಕೆ ಸಾಕ್ಷ್ಯವೊದಗಿಸಿದೆ. ಯುರೋಪ್‌ನ ಹರ್ಸ್‌ಚಲ್ ಬಾಹ್ಯಾಕಾಶ ದೂರದರ್ಶಕದಲ್ಲಿ ಅವರೋಹಿತ
ಉಪಕರಣವು 103ಪಿ/ಹಾರ್ಟ್ಲಿ 2 ಎಂಬ ಧೂಮಕೇತುವಿನಲ್ಲಿರುವ ಹಿಮದ ವಿಶ್ಲೇಷಣೆ ನಡೆಸಿದಾಗ, ಭೂಮಿಯ ನೀರಿನಲ್ಲಿರುವಷ್ಟು ಸಮಾನ ಡ್ಯುಟೀರಿಯಂ ಅನುಪಾತವನ್ನು ಅದರಲ್ಲಿ ಹೊಂದಿರುವುದು ಪತ್ತೆಯಾಗಿದೆ.
 ಡರ್ಟಿ ಸ್ನೋಬಾಲ್ಸ್ ಎಂದು ಕರೆಯುವ ಧೂಮಕೇತುಗಳು ಹಿಮ ಮತ್ತು ಧೂಳಿನ ಮಿಶ್ರಣವಾಗಿರುವ ಹಿನ್ನೆಲೆಯಲ್ಲಿ ಭೂಮಿಯಲ್ಲಿ ನೀರಿನ ದೊಡ್ಡ ಮೂಲಕ್ಕೆ ಕ್ಷುದ್ರಗ್ರಹಗಳತ್ತ ಬೆಟ್ಟು ಮಾಡಲಾಗಿತ್ತು.
ಪ್ರಸಕ್ತ ಸಿದ್ಧಾಂತಗಳಿಂದ ಭೂಮಿಯಲ್ಲಿ ಶೇಕಡ 10ಕ್ಕಿಂತ ಕಡಿಮೆ ನೀರು ಧೂಮಕೇತುಗಳಿಂದ ಜನ್ಯವಾಗಿದೆ ಎನ್ನುವುದನ್ನು ರುಜವಾತುಪಡಿಸಿವೆ ಎಂದು ಈ ಕುರಿತು ಅಧ್ಯಯನ ನಡೆಸಿದ  ಸೌರ ವ್ಯೂಹದ ಮ್ಯಾಕ್ಸ್ ಫ್ಲಾಂಕ್ ಸಂಸ್ಥೆಯ ಪಾಲ್ ಹಾರ್ಟಾಗ್ ತಿಳಿಸಿದ್ದಾರೆ.
 ಭೂಮಿಗೆ ನೀರ್ಗಲ್ಲಿನ ಅಪ್ಪಳಿಸುವಿಕೆಯು ಭೂಮಿ ರಚನೆಗೊಂಡ ನಂತರ 8 ದಶಲಕ್ಷ ವರ್ಷಗಳಲ್ಲಿ ಸಂಭವಿಸಿರಬಹುದು.

 

 

 Comments
AajlRHSGXrbmdFSJISh
Most help articles on the web are inaccurate or inchreoent. Not this!
Posted by George

Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery