ಮೊದಲ ದಿನವೇ ಪತ್ರಕರ್ತರ ವಿರುದ್ಧ ಹರಿಹಾಯ್ದ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್ : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ದಿನವೇ ಪತ್ರಕರ್ತರನ್ನು ಅತ್ಯಂತ ಅಪ್ರಾಮಾಣಿಕ ಮಾನವ ಜೀವಿಗಳು ಎಂದು ಹೀಗಳೆಯುವ ಮೂಲಕ ಮತ್ತೆ ವಿವಾದಕ್ಕೆ ಆಸ್ಪದ ಕಲ್ಪಿಸಿದ್ದಾರೆ. ತಮ್ಮ ಉದ್ಘಾಟನಾ ಭಾಷಣದಲ್ಲಿ ಸೇರಿದ್ದ ಗುಂಪಿನ ಗಾತ್ರದ ಬಗ್ಗೆ ಮಾಧ್ಯಮ ಸುಳ್ಳು ಸುಳ್ಳೇ ವರದಿ ಮಾಡಿದೆ ಎಂದು ಅವರು ದೂರಿದರು.

ಇದಕ್ಕೆ ಮುಂಚೆ ಸಿಎನ್ಎನ್ ಸುದ್ದಿಸಂಸ್ಥೆಯನ್ನು ನಕಲಿ ನ್ಯೂಸ್ ಎಂದು ಪತ್ರಿಕಾಗೋಷ್ಠಿಯಲ್ಲಿ ಜರಿದಿದ್ದರು.
ತಮ್ಮ ಅಧಿಕಾರದ ಮೊದಲ ದಿನವೇ ಪತ್ರಕರ್ತರನ್ನು ವಾಚಾಮಗೋಚರವಾಗಿ ಬೈಯುವುದಕ್ಕೆ ಬಳಸಿಕೊಂಡರು ಟ್ರಂಪ್.  ಸಮಾರಂಭದಲ್ಲಿ ಮಿಲಿಯಗಟ್ಟಲೆ ಜನರು ಹಾಜರಿದ್ದರೂ ಖಾಲಿ ಸ್ಥಳವನ್ನು ಚಿತ್ರಿಸಿ ಸಮಾರಂಭದಲ್ಲಿ ಕೆಲವೇ ಮಂದಿ ಭಾಗವಹಿಸಿದ್ದರು ಎಂದು ಹೇಳಿದ ಪತ್ರಕರ್ತರು ಸತ್ಯವನ್ನು ತಿರುಚಿದ್ದಾರೆ ಎಂದು ಟ್ರಂಪ್ ಆರೋಪಿಸಿದರು.

 ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಜನರ ಗುಂಪು ಮಾಲ್‌ನಿಂದ ವಾಷಿಂಗ್ಟನ್ ಸ್ಮಾರಕದವರೆಗೆ ಇತ್ತೆಂದು ವಾದಿಸಿದ ಟ್ರಂಪ್, ಟೆಲಿವಿಷನ್ ಜಾಲದಲ್ಲಿ ಖಾಲಿ ಮೈದಾನವನ್ನು ತೋರಿಸಿತ್ತೆಂದು ಟ್ರಂಪ್ ಖಂಡಿಸಿದರು.

 Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery