ದೆವ್ವಗಳು ನಿರ್ಮಿಸಿದ ಭೂತನ್ ವಾಲಾ ಮಂದಿರ?

ಪ್ರತಿಯೊಂದು ಪ್ರದೇಶದಲ್ಲಿ ಪೂಜಾ ಸ್ಥಳವನ್ನು ನಿರ್ಮಿಸುವ ಜನರನ್ನು ಶಾಂತಿದೂತರು ಮತ್ತು ದೇವರ ಆಶೀರ್ವಾದ ಹೊಂದಿದವರು ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ದೆವ್ವಗಳು ಅಥವಾ ಭೂತಗಳು ದೇವಸ್ಥಾನ ಕಟ್ಟಿಸಿದ್ದನ್ನು ಕಾಣುವುದು ಅಪರೂಪ. ಉತ್ತರಪ್ರದೇಶದ ಹಾಪುರದ ಸಿಂಬಾವೋಲಿಯ ದಾತಿಯಾನ ಗ್ರಾಮದಲ್ಲಿರುವ ಶಿವ ಮಂದಿರ ಇದಕ್ಕೆ ಉದಾಹಣೆಯಾಗಿದೆ.

ಸ್ಥಳೀಯವಾಗಿ ಭೂತನ್‌ವಾಲಾ ಮಂದಿರವೆಂದು ಕರೆಯಲಾಗುವ ಇದನ್ನು ಈ ಮಂದಿರವನ್ನು ರಾತ್ರೋರಾತ್ರಿ ದೆವ್ವಗಳು ಕಟ್ಟಿಸಿದ್ದವೆಂದು ನಗರದ ಜನರು ಹೇಳುತ್ತಾರೆ.

ಕೆಂಪು ಇಟ್ಟಿಗೆಗಳಿಂದ ಕಟ್ಟಲಾದ ಈ ಮಂದಿರ ಇಟ್ಟಿಗೆಗಳನ್ನು ಬಂಧಿಸಲು ಸಿಮೆಂಟ್ ಬಳಸದಿರುವುದು ವಿಚಿತ್ರವೆನಿಸಿದೆ. 1000 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಮಂದಿರ ಮಳೆ, ಗಾಳಿ ಒತ್ತಡಕ್ಕೆ ಧೃತಿಗೆಡದೇ ಬಿರುಕು ಬಿಡದೇ ನಿಶ್ಚಲವಾಗಿ ನಿಂತಿರುವುದು ಆಶ್ಚರ್ಯ ಮೂಡಿಸಿದೆ. ಮಂದಿರದ ಶಿಖರವನ್ನು ಸಿಮೆಂಟ್ ಬಳಸಿ ಗ್ರಾಮಸ್ಥರು ನಿರ್ಮಿಸಿದ್ದರಿಂದ ಆ ಭಾಗಕ್ಕೆ ಮಾತ್ರ ಮಳೆಯಿಂದ ಧಕ್ಕೆಯಾಗಿದೆ.


ಇಡೀ ದೇವಸ್ಥಾನವನ್ನು ಭೂತಗಳು ಕೆಂಪು ಇಟ್ಟಿಗೆಯಿಂದ ಕಟ್ಟಿಸಿದ್ದು, ಶಿಖರವನ್ನು ಕಟ್ಟಿಸುವುದರೊಳಗೆ ಸೂರ್ಯನ ಬೆಳಕು ಮೂಡಿದ್ದರಿಂದ ಮಧ್ಯದಲ್ಲಿಯೇ ನಿರ್ಮಾಣ ಕಾರ್ಯ ನಿಲ್ಲಿಸಿ ದೆವ್ವಗಳು ತೆರಳಿದ್ದವು. ಬಳಿಕ ಗ್ರಾಮಸ್ಥರು ಶಿಖರದ ನಿರ್ಮಾಣವನ್ನು ಮುಗಿಸಿದ್ದರು. 1980ರಲ್ಲಿ ಶಿಖರದಲ್ಲಿ ಬಿರುಕು ಉಂಟಾಗಿ ಮರುನಿರ್ಮಾಣ ಮಾಡಲಾಗಿದ್ದರೂ ಇಡೀ ಮಂದಿರ ಮಾತ್ರ ಗಾಳಿ, ಮಳೆಗೆ ಅಂಜದೇ ಅಳುಕದೇ ನಿಂತಿದೆ ಎಂದು ಮಂದಿರದ ನಾಲ್ಕನೇ ತಲೆಮಾರಿನ ಅರ್ಚಕ ರಾಕೇಶ್ ಕುಮಾರ್ ಗೋಸ್ವಾಮಿ ತಿಳಿಸಿದರು.

ಭೂತನ್ವಾಲಾ ಮಂದಿರದಿಂದ ಗ್ರಾಮಕ್ಕೆ ಕೆಡುಕುಂಟಾಗಿದೆಯೇ ಎಂದು ಕೇಳಿದಾಗ ಇಲ್ಲವೆಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಕ್ಕೆ ದುಃಸ್ವಪ್ವವಾಗಿ ಕಾಡುವ  ಬದಲಿಗೆ ಬರಗಾಲ, ಪ್ರವಾಹ, ಚಂಡಮಾರುತ ಅಥವಾ ಯಾವುದೇ ಪ್ರಕೃತಿ ವಿಕೋಪ ಉಂಟಾಗದಂತೆ ಗ್ರಾಮವನ್ನು ರಕ್ಷಿಸುತ್ತಿದೆ ಎಂದು ಕುಲಭೂಷಣ್ ತ್ಯಾಗಿ ಎಂಬ ಗ್ರಾಮಸ್ಥ ಹೇಳಿದ. ಉತ್ತರಭಾರತದಲ್ಲಿ ರೈತರು ಆಲಿಕಲ್ಲು ಮತ್ತು ಭಾರೀ ಮಳೆಯಿಂದ ತೀವ್ರ ನಷ್ಟ ಅನುಭವಿಸಿದರೂ ನಮ್ಮ ಜಮೀನುಗಳಿಗೆ ಯಾವುದೇ ಹಾನಿಯಾಗಿಲ್ಲ.

ಸಮೀಪದ ಗ್ರಾಮಗಳ ಕೆಲವು ರೈತರು ಬೆಳೆನಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ನಮ್ಮ ಬೆಳೆಗಳಿಗೆ ಪ್ರಕೃತಿವಿಕೋಪದಿಂದ ಯಾವುದೇ ಹಾನಿಯಾಗಿಲ್ಲ. ಗ್ರಾಮದ ಮಂದಿರ ನಮ್ಮನ್ನು ಸದಾ ಕಾಲ ರಕ್ಷಿಸುತ್ತಿದೆ ಎಂದು ಗ್ರಾಮಸ್ಥ ಹೇಳುತ್ತಾನೆ.


  Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery