ದೇರಾ ಗುರು ರಾಮ್ ರಹೀಮ್‌ಗೆ ಜೈಲು: ರೊಚ್ಚಿಗೆದ್ದ ಅನುಯಾಯಿಗಳ ಹಿಂಸಾಚಾರಕ್ಕೆ 28 ಬಲಿ

ಚಂದೀಗಢ: ದೇರಾ ಸಚ್ಚಾ ಸೌದಾ ಸಂಘಟನೆಯ ಗುರು ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ತಪ್ಪಿತಸ್ಥ ಎಂದು ತೀರ್ಪು ನೀಡಿ  ಜೈಲು ಶಿಕ್ಷೆ ವಿಧಿಸಿದ್ದರಿಂದ ರೊಚ್ಚಿಗೆದ್ದ ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್ ಅನುಯಾಯಿಗಳು ಮೂರು ರಾಜ್ಯಗಳಲ್ಲಿ ದಾಂಧಲೆ, ಹಿಂಸಾಚಾರಕ್ಕೆ ಇಳಿದರು.

ಗಲಭೆಕೋರರು ಎರಡು ರೈಲ್ವೆ ನಿಲ್ದಾಣಗಳಿಗೆ, ಒಂದು ವಿದ್ಯುತ್ ಗ್ರಿಡ್ ಮತ್ತು ಪೆಟ್ರೋಲ್ ಪಂಪೊಂದಕ್ಕೆ ಹರ್ಯಾಣದಲ್ಲಿ ಬೆಂಕಿ ಹಚ್ಚಿದ್ದಾರೆ. ಹರ್ಯಾಣದ ಪಂಚಕುಲದಲ್ಲಿ ಸ್ಫೋಟಿಸಿದ ಹಿಂಸಾಚಾರಕ್ಕೆ 28 ಜನರು ಸತ್ತಿದ್ದು 250 ಜನರು ಗಾಯಗೊಂಡರು.

ತಕ್ಷಣವೇ ಹಿಂಸಾಚಾರವು ದೆಹಲಿ ಸೇರಿದಂತೆ ಇತರೆ ನಗರಗಳಿಗೆ ವ್ಯಾಪಿಸಿತು. ಸಂಜೆ 5 ಗಂಟೆಗೆ ಚಂದೀಗಢದ ಹೊರವಲಯದಲ್ಲಿರುವ ಪಂಚಕುಲಾದಲ್ಲಿ 600 ಸೈನಿಕರನ್ನು ನಿಯೋಜಿಸಲಾಯಿತು. ಅದಕ್ಕೆ ಮುಂಚೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದರು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದರು.
 ಆನಂದ ವಿಹಾರ್‌ನಲ್ಲಿ ರೈಲೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಎರಡು ಬಸ್‌ಗಳಿಗೆ ಕೂಡ ಅಗ್ನಿ ಸ್ಪರ್ಶ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದಾಗಿ ಸರ್ಕಾರದ ಹೇಳಿಕೆ ಹುಸಿಯಾಗಿದೆ. ವಿವಾದಾತ್ಮಕ ದೇವಮಾನವ ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ  ಪ್ರಕರಣವಿರುವುದರಿಂದ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery