ಅನ್ ಫ್ರೀಡಂ ಚಿತ್ರಕ್ಕೆ ನಿಷೇಧ: ನಿರ್ದೇಶಕರಿಂದ ಪ್ರತಿಭಟನೆ
ಅನ್‌ಫ್ರೀಡಂ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಕ್ಕೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ  ಅದರ ನಿರ್ದೇಶಕ ರಾಜ್ ಅಮಿತ್ ಕುಮಾರ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಪೌರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಕ್ಕಾಗಿ ಪ್ರಧಾನಮಂತ್ರಿಗೆ ಬರೆದ ಅರ್ಜಿಗೆ ಪ್ರತಿಯೊಬ್ಬರೂ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. 
 
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ಸೆನ್ಸಾರ್ ಮಂಡಳಿಯ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.  ಸಲಿಂಗಕಾಮವನ್ನು ಕುರಿತಾದ ಅನ್ ಫ್ರೀಡಂ ಚಿತ್ರದ ನಿಷೇಧವನ್ನು ವಿರೋಧಿಸಿರುವ ಅವರು ಸೆನ್ಸಾರ್ ಮಂಡಳಿಯು ನಿಷೇಧ ವಿಧಿಸುವ ಮತ್ತು ಚಿತ್ರಕ್ಕೆ ಕತ್ತರಿಪ್ರಯೋಗ ಮಾಡುವ ಬದಲಿಗೆ  ಚಿತ್ರವನ್ನು ಪ್ರಮಾಣೀಕರಿಸಬೇಕು ಅಥವಾ ರೇಟಿಂಗ್ ಮಾಡಬೇಕು. ನಿಜವಾದ ಬದಲಾವಣೆ ಆಗುವ ತನಕ ತಾವು ಪ್ರಧಾನಿಗೆ ಸಹಿಹಾಕಿದ ಅರ್ಜಿಗಳನ್ನು ಕಳಿಸುತ್ತಲೇ ಇರುವುದಾಗಿ ಹೇಳಿದರು. 

ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ಎಲ್ಲರೂ ಬೆಂಬಲಿಸಬೇಕೆಂದು ಕುಮಾರ್ ಕೋರಿದ್ದಾರೆ. ಅವರ ಚಿತ್ರ ಅನ್ ಫ್ರೀಡಂ ಧಾರ್ಮಿಕ ಮೂಲಭೂತವಾದ ಮತ್ತು ಅಸಹಿಷ್ಣುತೆಯ ಎರಡು ಸಮಕಾಲೀನ ಕಥೆಗಳನ್ನು ಬಿಂಬಿಸುತ್ತದೆ.

ಒಂದು ಕಥೆಯಲ್ಲಿ ಮುಸ್ಲಿಂ ಭಯೋತ್ಪಾದಕ ಮುಸ್ಲಿಂ ವಿದ್ವಾಂಸನ  ಬಾಯಿ ಮುಚ್ಚಿಸುವುದಕ್ಕಾಗಿ ಅವನನ್ನು ಅಪಹರಿಸುತ್ತಾನೆ. ಇನ್ನೊಂದು ಕಥೆಯಲ್ಲಿ ಯುವತಿಯೊಬ್ಬಳನ್ನು ಅವಳ ತಂದೆ ತಾನು ಸೂಚಿಸಿದ ಯುವಕನನ್ನು ವಿವಾಹವಾಗುವಂತೆ ಬಲವಂತ ಮಾಡುತ್ತಾನೆ. ಆದರೆ ಯುವತಿ ಸಲಿಂಗ ಕಾಮಿಯಾಗಿದ್ದು ಗೋಪ್ಯವಾಗಿ ಇನ್ನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುತ್ತಾಳೆ. 
ನಾಲ್ಕು ಪಾತ್ರಗಳು ಮುಖಾಮುಖಿಯಾಗಿ ಲೈಂಗಿಕತೆ, ಧರ್ಮ, ಪ್ರೇಮ ಮತ್ತು ಕುಟುಂಬದ ಹೋರಾಟಗಳಲ್ಲಿ ಹಿಂಸಾಚಾರದ ಭೀಕರತೆಗೆ ಸಾಕ್ಷಿಯಾಗುತ್ತವೆ.


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery