ನಮ್ಮ ಪೊಲೀಸರಿಗೆ ಹೆಲ್ಮೆಟ್, ಗುಂಡು ನಿರೋಧಕ ಕವಚ ಬೇಡವೇ?
ಕಳೆದ ಸೋಮವಾರ ದಿಟ್ಟ ಪಂಜಾಬ್ ಪೊಲೀಸ್ ಅಧಿಕಾರಿ ಬಲ್ಜಿತ್ ಸಿಂಗ್ ಗುರುದಾಸ್‌ಪುರದ ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿದ ಮೂವರು ಭಯೋತ್ಪಾದಕರಿಗೆ ಧೈರ್ಯವಿದ್ದರೆ ಹೊರಬಂದು ಮುಖಾಮುಖಿ ಕಾಳಗ ಮಾಡುವಂತೆ ಕರೆ ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ಬಲ್ಜಿತ್ ಸಿಂಗ್ ಹೆಣವಾಗಿ ಬಿದ್ದಿದ್ದರು. ಅವರು ಹೆಲ್ಮೆಟ್ ಆಗಲೀ ಅಥವಾ  ಗುಂಡುನಿರೋಧಕ ಪಾಟ್ಕಾ ಧರಿಸಿರಲಿಲ್ಲ. ಪಾಟ್ಕಾ ಭಾರತದ ಸೇನೆಯ ಶೋಧವಾಗಿದ್ದು, ಗುಂಡಿನದಾಳಿಯಿಂದ ಯೋಧರಿಗೆ ಸ್ವಲ್ಪ ಮಟ್ಟಿಗೆ ರಕ್ಷಣೆ ನೀಡುತ್ತದೆ.
 

ಸಿಂಗ್ ಧೈರ್ಯಶಾಲಿ ನಿಜ, ಆದರೆ ಧೈರ್ಯವೊಂದರಿಂದಲೇ ನುರಿತ ತರಬೇತಿ ಪಡೆದ ಭಯೋತ್ಪಾದಕರನ್ನು ಸೋಲಿಸಲು ಸಾಧ್ಯವಿಲ್ಲ.

ಕೆಲವು ಪಂಜಾಬ್ ಪೊಲೀಸರು ಹೆಲ್ಮೆಟ್ ಅಥವಾ ಗುಂಡುನಿರೋಧಕ ಕವಚ ಧರಿಸದೇ ಸ್ವಯಂ ಗುಂಡು ತುಂಬುವ ಬಂದೂಕುಗಳಿಂದ ಎರದುರಿಸುತ್ತಿದ್ದರು. ಆದರೆ ಶತ್ರುವಿನ ಎಕೆ 45 ಬಂದೂಕುಗಳಿಗೆ ಇವು ಸರಿಸಾಟಿಯಾಗಿರಲಿಲ್ಲ.  ಸ್ವಲ್ಪ ದೂರದಲ್ಲಿ ಪೊಲೀಸರು ಭಯೋತ್ಪಾದಕರ ಕಡೆ ಗ್ರೆನೇಡ್‌ಗಳನ್ನು ಎಸೆದು ಗ್ರೆನೇಡ್ಸ್ ಸ್ಫೋಟಗೊಳ್ಳುವುದಕ್ಕೆ ಮುಂಚೆ ಓಡುತ್ತಿದ್ದರು.
 
ಪಂಜಾಬ್ ಸ್ವಾಟ್ ತಂಡ ಆಗಮಿಸಿದ ಮೇಲೆ ಅವರು ಕೂಡ ಮಂಡಿ ಪ್ಯಾಡ್ ಧರಿಸಿ ಪೊಸಿಷನ್ ತೆಗೆದುಕೊಂಡರು. ಅವರಿಗೂ ಕೂಡ ಹೆಲ್ಮೆಟ್ ಅಥವಾ ಗುಂಡು ನಿರೋಧಕ ಕವಚ ಇರಲಿಲ್ಲ.
 

2001ರಲ್ಲಿ ಸಂಸತ್ತಿನ ಮೇಲೆ ದಾಳಿ ಸಂಭವಿಸಿ 14 ವರ್ಷಗಳು ಸಂದಿವೆ. ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಕೆಲವು ಪೊಲೀಸರು ಪಿಸ್ತೂಲುಗಳಿಂದ ಎದುರಿಸಿದ್ದರು. ಮುಂಬೈ ಭಯೋತ್ಪಾದನೆ ದಾಳಿಯ ಸಂದರ್ಭದಲ್ಲಿ ಕೆಲವು ಧೈರ್ಯಶಾಲಿ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಕಸಬ್‌ನನ್ನು ಎದುರಿಸಲು ಯತ್ನಿಸಿದ್ದರು. ಕೆಲವರು .303 ರೈಫಲ್ ಹಿಡಿದಿದ್ದರು. ಕೆಲವೇ ಮಂದಿ ಬುಲೆಟ್ ಪ್ರೂಫ್ ಜ್ಯಾಕೆಟ್ ಧರಿಸಿದ್ದರು ಮತ್ತು ಯಾರಿಗೂ ಹೆಲ್ಮೆಟ್ ಇರಲಿಲ್ಲ.
 
ಅವರು ಧರಿಸಿದ್ದು ಕ್ರಿಕೆಟ್ ಹೆಲ್ಮೆಟ್. ಕ್ರಿಕೆಟ್ ಬಾಲ್ ತಡೆಯುವುದಕ್ಕೆ ವಿನ್ಯಾಸಮಾಡಲಾದ ಹೆಲ್ಮೆಟ್ ಎಕೆ-47 ಗುಂಡಿನ ವೇಗವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಯಾವುದೇ ರಾಕೆಟ್ ವಿಜ್ಞಾನ ಬೇಕಿಲ್ಲ.2015ರಲ್ಲಿ ಪೊಲೀಸರು ವಿಶ್ವಮೊದಲ ಮಹಾಯುದ್ಧದಲ್ಲಿ ಪಡೆಯುತ್ತಿದ್ದ ರಕ್ಷಣೆಯಷ್ಟೂ ರಕ್ಷಣೆ ಪಡೆಯುತ್ತಿಲ್ಲ, ಇದಕ್ಕೆ ಪರಿಹಾರಗಳಂತೂ ಮನೆಯಂಗಳದಲ್ಲೇ ಇವೆ.
ಭಾರತ ರಕ್ಷಾಕವಚ ತಂತ್ರಜ್ಞಾನದಲ್ಲಿ ನಂಬರ್ ಒನ್ ಎನ್ನುವುದು ನಿಮಗೆ ಗೊತ್ತಿದೆಯೇ? ಗುಂಡು ನಿರೋಧಕ ರಕ್ಷಣಾ ಕವಚಗಳನ್ನು ಮತ್ತು ಹೆಲ್ಮೆಟ್‌ಗಳನ್ನು ವೈಯಕ್ತಿಕ ರಕ್ಷಣೆಯ ಅತ್ಯಧಿಕ ನಿಖರತೆಯಲ್ಲಿ ಭಾರತದಲ್ಲಿ ನಿರ್ಮಿಸಲಾಗುತ್ತಿದೆ ಮಾತ್ರವಲ್ಲ, 100 ದೇಶಗಳ 230 ಪಡೆಗಳಿಗೆ ರಫ್ತು ಮಾಡಲಾಗುತ್ತಿದೆ ಎಂಬ ವಿಷಯ ಗೊತ್ತಿದೆಯೇ? ಬಳಕೆದಾರರ ಪೈಕಿ ಬ್ರಿಟನ್, ಜರ್ಮನ್, ಸ್ಪೇನ್ ಮತ್ತು ಫ್ರೆಂಚ್  ಸೇನೆಗಳು-ಪೂರ್ವದಲ್ಲಿ ಜಪಾನ್‌ನಿಂದ ಪಶ್ಚಿಮದಲ್ಲಿ ಅಮೆರಿಕವರೆಗೆ ಖರೀದಿಸುತ್ತಿವೆ.
bullet proof jacket
ಕಾನ್ಪುರ ಮೂಲಕ ಎಂಕೆಯುನಲ್ಲಿ ಕವಚಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ದೊಡ್ಡ ಸಮಸ್ಯೆ ಪೊಲೀಸ್ ಪಡೆಗಳ ಮನಸ್ಥಿತಿಯಾಗಿದೆ. ನಮ್ಮ ಬಹುತೇಕ ಪೊಲೀಸ್ ಪಡೆಗಳು ಮತ್ತು ರಿಸರ್ವ್ ಪೊಲೀಸ್ ರಾಜ್ಯಗಳಲ್ಲಿ  ಗಲಭೆ ವಿರೋಧಿ ರಕ್ಷಣೆಗೆ ಸಜ್ಜುಗೊಂಡಿರುತ್ತಾರೆ. ಆದರೆ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗೆ ಸಜ್ಜಾಗಿರುವುದಿಲ್ಲ ಎಂದು ಎಂಕೆಯು ಅಧ್ಯಕ್ಷ  ಮನೋಜ್ ಗುಪ್ತಾ ಹೇಳಿದ್ದಾರೆ. ಕೆಲವು ಅಂದಾಜುಗಳ ಪ್ರಕಾರ, 50,000 ಬುಲೆಟ್ ಪ್ರೂಫ್ ಕಿಟ್‌ಗಳು ಭಾರತದ ಪೊಲೀಸ್ ಪಡೆಗೆ ಅಗತ್ಯವಿದೆ. ಆದರೆ ರಾಜ್ಯಗಳು ತಮ್ಮ ಕಾನೂನು ಸುವ್ಯವಸ್ಥೆಯನ್ನು ತಾವೇ ನಿಭಾಯಿಸುವುದರಿಂದ ತಮ್ಮ ಅಗತ್ಯದ ಬಗ್ಗೆ ಹೇಳುವುದು ಅಪರೂಪ. ಇದಲ್ಲದೇ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬದಿಂದಲೂ ಸಮಸ್ಯೆ ಉಂಟಾಗುತ್ತಿದೆ.


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery