ಬೋಸ್ ವಿಮಾನ ಅಪಘಾತದಲ್ಲಿ ಸತ್ತಿಲ್ಲ : ರಹಸ್ಯ ವರದಿಯಲ್ಲಿ ದೃಢ

 ಚೆನ್ನೈ: ಸುಭಾಶ್ ಚಂದ್ರ ಬೋಸ್ ಮೃತಪಟ್ಟಿದ್ದು ಹೇಗೆ ಎಂಬ ಪ್ರಶ್ನೆ ಜನಮಾನಸದಲ್ಲಿ ಬಹಳ ಕಾಲದಿಂದ ಕಾಡಿದೆ. ಇದಕ್ಕೆ ಉತ್ತರ ಹುಡುಕಲು ಭಾರತ ಸರ್ಕಾರ ಮೂರು ಆಯೋಗಗಳನ್ನು ನೇಮಿಸಿತು. ಶಾಹ್ ನವಾಜ್ ಸಮಿತಿ( 1956) ಮತ್ತು ಖೋಸ್ಲಾ ಆಯೋಗ( 1970) ಬೋಸ್ 1945ರ ಆಗಸ್ಟ್ 18ರಂದು ಜಪಾನಿ ಆಕ್ರಮಿತ ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸತ್ತಿದ್ದಾರೆಂದು ಸ್ಪಷ್ಟಪಡಿಸಿತು. ಆದರೆ ಮುಖರ್ಜಿ ಆಯೋಗ ಮಾತ್ರ ಅವರು ವಿಮಾನ ಅಪಘಾಕದಲ್ಲಿ ಸತ್ತಿಲ್ಲವೆಂದು ವರದಿ ಮಾಡಿತು.

ಸರ್ಕಾರ ಮುಖರ್ಜಿ ಆಯೋಗದ ವರದಿಯನ್ನು ತಿರಸ್ಕರಿಸಿದರೂ ಕೂಡ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿದ್ದಾರಾ ಇಲ್ಲವಾ ಎಂಬ ಸಂಶಯ ಅನೇಕ ಮಂದಿಯ ಮನಸ್ಸಿನಲ್ಲಿ ಆಳವಾಗಿ ಕೊರೆಯುತ್ತಿದೆ. ಪ್ಯಾರಿಸ್ ಮೂಲದ ಇತಿಹಾಸಜ್ಞ ಜೆಬಿಪಿ ಮೋರ್ ಅವರಿಗೆ ಫ್ರಾನ್ಸ್‌ನ ರಾಷ್ಟ್ರೀಯ ಸಂಗ್ರಹದಲ್ಲಿದ್ದ ಫ್ರೆಂಚ್ ರಹಸ್ಯ ಸೇವಾ ವರದಿಯೊಂದು ಸಿಕ್ಕಿತು.

ಈ ವರದಿಯನ್ನು ಆಧರಿಸಿ ಬೋಸ್ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂದೂ 1947ರಲ್ಲಿ ಇನ್ನೂ ಜೀವಂತವಿದ್ದಾರೆಂದು ತಿಳಿಸಿದರು. ತೈವಾನ್‌ನ ವಿಮಾನಅಪಘಾತದಲ್ಲಿ ಬೋಸ್ ಸತ್ತಿದ್ದಾರೆಂದು ದಾಖಲೆಯಲ್ಲಿ ಹೇಳಿಲ್ಲ. ಬದಲಿಗೆ ಬೋಸ್ ಅವರ ಸುಳಿವು 1947ರ ಡಿಸೆಂಬರ್‌ವರೆಗೆ ಪತ್ತೆಯಾಗಿರಲಿಲ್ಲ ಎಂದು ವರದಿಯಾಗಿತ್ತು.


 ಇದರಿಂದ ಬೋಸ್ ವಿಮಾನ ಅಪಘಾತದಲ್ಲಿ ಸತ್ತಿದ್ದಾರೆಂಬ ಸಿದ್ದಾಂತವನ್ನು ಫ್ರೆಂಚ್ ಸರ್ಕಾರ ಒಪ್ಪಿಲ್ಲ ಎಂದು ಪ್ಯಾರಿಸ್‌ನಲ್ಲಿ ಉಪನ್ಯಾಸಕರಾಗಿರುವ ಮೋರ್ ಹೇಳಿದರು.


  ಕಿಂಗ್‌ಶುಕ್ ನಾಗ್ ಮುಂತಾದ ವಿದ್ವಾಂಸಕರು ವರದಿಯ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಾರೆ. ಮುಖರ್ಜಿ ಆಯೋಗವು ಬೋಸ್ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂದು ತಿಳಿಸಿದೆ. ಆದರೆ ಸರ್ಕಾರ ಅದಕ್ಕೆ ಮಾನ್ಯತೆ ನೀಡಲಿಲ್ಲ. ಬೋಸ್ ಕುರಿತ ರಹಸ್ಯ ಕಡತಗಳನ್ನು ಬಹಿರಂಗ ಮಾಡುವ ಕೇಂದ್ರದ ಉದ್ದೇಶದಿಂದ ಏನೂ ಸಾಧನೆಯಾಗುವುದಿಲ್ಲ. ಬದಲಿಗೆ ಇಂತಹ ವರದಿಗಳು ಮಹತ್ವ ಪಡೆದಿರುತ್ತವೆ ಎಂದು ಹೆಸರಾಂತ ಪತ್ರಕರ್ತ ಮತ್ತು ನೇತಾಜಿ, ಲೀವಿಂಗ್ ಡೇಂಜರಸ್ಲಿ ಪುಸ್ತಕದ ಲೇಖಕ ನಾಗ್ ಪ್ರತಿಕ್ರಿಯಿಸಿದರು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery