ಬ್ಲೂವೇಲ್ ಚಟ: ಕಟ್ಟಡದಿಂದ ಹಾರಿ ಬಾಲಕ ಆತ್ಮಹತ್ಯೆ ಯತ್ನ

ಮಂಗಳೂರು: 9ನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಮಂಗಳೂರಿನ ಅಡು ಮರೋಳಿಯಲ್ಲಿ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ವಿದ್ಯಾರ್ಥಿ ಪ್ರಥಮ್ ಸ್ಥಿತಿ ಗಂಭೀರವಾಗಿದೆ. ಆದಾಯ ತೆರಿಗೆ ಕಚೇರಿಯ ನೌಕರ ಪದ್ಮನಾಭ ಮತ್ತು ದೂರಸಂಪರ್ಕ ಕಚೇರಿಯ ನೌಕರೆ ವಿಶಾಲಾ ಅವರ ಪುತ್ರನಾದ ಪ್ರಥಮ್ ತಮ್ಮ ನೆರೆಮನೆಯ ಕಟ್ಟಡದ 3ನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ.


ಕಟ್ಟಡದಿಂದ ಹಾರುವುದಕ್ಕೆ ಮುಂಚಿತವಾಗಿ ಅವನು ಟಿಪ್ಪಣಿಯೊಂದನ್ನು ಬರೆದಿದ್ದು, ತಾನು ಓದಿನಲ್ಲಿ ಹಿಂದೆಉಳಿದಿದ್ದರಿಂದ ಈ ಕೃತ್ಯವೆಸಗಿದ್ದಾಗಿ ಬರೆದಿದ್ದಾನೆ. ಆದರೆ ಅವನು ಟಿಪ್ಪಣಿ ಬರೆದಿರುವ ರೀತಿಯನ್ನು ಗಮನಿಸಿದಾಗ ಅವನು ಮಾರಣಾಂತಿಕ ಬ್ಲೂವೇಲ್ ಗೇಮ್‌ನಿಂದ ಈ ಕೃತ್ಯವೆಸಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ತನಗೆ ಯಾವುದರಲ್ಲೂ ಆಸಕ್ತಿಯಿಲ್ಲ ಮತ್ತು ಬ್ಲೂ ವೇಲ್ ಪ್ರಭಾವಕ್ಕೆ ಒಳಗಾಗಿದ್ದು, ತನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ಎಂದು ನೋಟ್ ಬರೆದಿಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

ಕಟ್ಟಡದ ಟೆರೇಸ್‌ನಲ್ಲಿ ಬಿಳಿಯ ಹಾಳೆಯೊಂದರಲ್ಲಿ ಕೆಲವು ಸಂದೇಶಗಳನ್ನು ಗೀಚಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಅವನ ಮೊಬೈಲ್ ಫೋನ್ ಪರೀಕ್ಷೆ ನಡೆಸಿ ಅವನ ಆತ್ಮಹತ್ಯೆ ಪ್ರಯತ್ನಕ್ಕೆ ಬ್ಲೂ ವೇಲ್ ಸವಾಲಿನ ಕೋನವಿದಯೇ ಎಂದು ಪರಿಶೀಲನೆ ನಡೆಸಿದ್ದಾರೆ.
 ಕಳೆದ ಒಂದು ವಾರದಿಂದ ಕಟ್ಟಡದ ಮೇಲೆ ನಡೆಯುತ್ತಿರುವುದನ್ನು ಅವನು ತಂದೆ,ತಾಯಿಗಳು ಮತ್ತು ನೆರೆಮನೆಯವರು ಕಂಡಿದ್ದರೂ ಯಾವುದೇ ಶಂಕೆ ವ್ಯಕ್ತವಾಗಿರಲಿಲ್ಲ. ಕಂಕನಾಡಿ ಪೊಲೀಸರು ಕೇಸು ದಾಖಲುಮಾಡಿಕೊಂಡಿದ್ದು, ತನಿಖೆ ನಡೆಸಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery