ಉತ್ತರ ಪ್ರದೇಶ, ಉತ್ತರಾಕಾಂಡದಲ್ಲಿ ಬಿಜೆಪಿ ಭರ್ಜರಿ ಗೆಲುವು

ಲಕ್ನೋ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ 325 ಸ್ಥಾನಗಳಿಂದ ಭರ್ಜರಿ ಜಯಗಳಿಸಿದೆ. ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ 56 ಸ್ಥಾನಗಳನ್ನು ಮತ್ತು ಬಿಎಸ್‌ಪಿ 19 ಮತ್ತು ಇತರೆ 3 ಸ್ಥಾನಗಳನ್ನು ಗೆದ್ದಿವೆ.  ಸಮಾಜವಾದಿ ಪಕ್ಷ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಹೋಗಿದ್ದು, ಮೋದಿಯ ಹವಾ ಇಡೀ ಉತ್ತರಪ್ರದೇಶದಲ್ಲಿ ಬೀಸಿದೆ.

ಉತ್ತರಾಖಂಡದಲ್ಲಿ ಕೂಡ ಬಿಜೆಪಿ ಜಯಭೇರಿ ಬಾರಿಸಿದ್ದು, 57 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 11, ಬಿಎಸ್‌ಪಿ 0 ಮತ್ತು ಇತರೆ 2 ಸ್ಥಾನಗಳಲ್ಲಿ ಜಯಗಳಿಸಿವೆ. ಪಂಜಾಬ್‌ನಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ಮತ್ತೆ ನೆಲೆಯೂರಿದ್ದು, 77 ಸ್ಥಾನಗಳಲ್ಲಿ ಜಯಗಳಿಸಿದೆ. ಅಧಿಕಾರದ ಗದ್ದುಗೆಗೆ ಏರುವ ಕನಸು ಕಂಡಿದ್ದ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟಿದ್ದು, ಅಕಾಲಿ ದಳ 18 ಸ್ಥಾನಗಳನ್ನು ಗಳಿಸಿದೆ.

ಗೋವಾದಲ್ಲಿ ಕಾಂಗ್ರೆಸ್ 18, ಬಿಜೆಪಿ 14 ಮತ್ತು ಇತರೆ 8 ಸ್ಥಾನಗಳನ್ನು ಗಳಿಸಿದ್ದು, ಅತಂತ್ರ ವಿಧಾನಸಭೆ ಏರ್ಪಟ್ಟಿದೆ. ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿದ್ದು, ಯಾವ ಪಕ್ಷ ವೂ ಬಹುಮತ ಸಾಧಿಸದೇ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಮಣಿಪುರದಲ್ಲಿ ಕಾಂಗ್ರೆಸ್ 28, ಬಿಜೆಪಿ 21,  ಮತ್ತು ಇತರೆ ಪಕ್ಷಗಳು 10 ಸ್ಥಾನಗಳಲ್ಲಿ ಜಯಗಳಿಸಿದೆ.

 



Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery