ಹೊಡೆಸಿಕೊಂಡವರು ಸುಮ್ಮನಿದ್ದ ಮೇಲೆ ನಮಗೇನು ಕೆಲಸ?

ಬಳ್ಳಾರಿಯಲ್ಲಿ ವಾಲ್ಮೀಕಿ ಭವನ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಸಿಎಂ ಅವರನ್ನು ಸ್ವಾಗತಿಸಲು ವಿಪರೀತ ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಅಷ್ಟರಲ್ಲಿ ಸಿಎಂ ಅವರನ್ನು ಸ್ವಾಗತಿಸಲು ಬಳ್ಳಾರಿ ಪಾಲಿಕೆ ಆಯುಕ್ತ ರಮೇಶ್ ಮುಂದಾಗಿ ಆಕಸ್ಮಿಕವಾಗಿ ಸಿಎಂ ಮೇಲೆ ಬಿದ್ದಿದ್ದರಿಂದ ಸಿಎಂ ಸಿಟ್ಟಾಗಿ  ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೊ ದೃಶ್ಯದಲ್ಲಿ ಸೆರೆಯಾಗಿದೆ.

  ಆದರೆ ರಮೇಶ್ ಕೊನೆಗೆ  ಸಿಎಂ ನನಗ್ಯಾಕೆ ಕಪಾಳಮೋಕ್ಷ ಮಾಡ್ತಾರೆ. ಅವರೇನು ಮಾಡಿಲ್ಲವೆಂದು ಹೇಳಿದರು. ಸಿಎಂ ಕೂಡ ತಾವು ಯಾರಿಗೂ ಕಪಾಳ ಮೋಕ್ಷ ಮಾಡಿಲ್ಲವೆಂದು ವಾದಿಸಿದರು. ತಮಗೆ ಅಧಿಕಾರಿಗೆ ಹೊಡೆಯಬಾರದೆಂಬ ಪರಿಜ್ಞಾನವೂ ಇಲ್ಲವೇ ಎಂದು ಸಿಎಂ ಪ್ರಶ್ನಿಸಿದರು.

ಹಾಗಾದರೇ ವಿಡಿಯೊದಲ್ಲಿ ಸಿಎಂ ಕೈಬೀಸಿದ್ದು ಯಾರಿಗೆ, ಸಿಎಂ ಹೊಡೆದಿದ್ದರೂ ಹೊಡೆದಿಲ್ಲವೆಂದು ರಮೇಶ್ ಹೇಳುವುದಕ್ಕೆ ಕಾರಣವೇನು, ರಮೇಶ್‌ರತ್ತ ಕೈಬೀಸಿದ್ದರೂ ಕಪಾಳಮೋಕ್ಷ ಮಾಡಿಲ್ಲವೆಂದು ಸಿಎಂ ಹೇಳುತ್ತಿರುವುದೇಕೆ? ಸಿಎಂಗೆ ರಮೇಶ್ ಹೊಡೆದಿಲ್ಲವೆಂದಾದರೆ ಬೇರಾರಿಗೆ ಹೊಡೆದರು? ಈ ಪ್ರಶ್ನೆಗಳಿಗೆ ಉತ್ತರ ಹೇಳದಿದ್ದರೆ ನಿನ್ನ ತಲೆ ಒಡೆದು ನೂರು ಹೋಳಾದೀತು ಎಂದು ವಿಕ್ರಮಾದಿತ್ಯನ ಬೆನ್ನೇರಿದ್ದ ಬೇತಾಳ  ಎಚ್ಚರಿಸಿತು.

  ವಿಕ್ರಮ ತನ್ನ ಮೌನ ಮುರಿದು ಎಲೇ ಬೇತಾಳವೇ, ನನ್ನ ತಲೆ ನೂರು ಹೋಳಾಗುತ್ತದೆಂಬ ಭಯದಿಂದ ಉತ್ತರಿಸುತ್ತಿಲ್ಲ.  ಇದೊಂದು ಸರಳ ಪ್ರಶ್ನೆಯಾಗಿದೆ.  ಸಿಎಂ ಹೊಡೆದಿರುವುದು ನಿಜವಾಗಿರಬಹುದು, ರಮೇಶ್ ಹೊಡೆಸಿಕೊಂಡಿರುವುದು ನಿಜವಿರಬಹುದು, ಆದರೆ ಸಿಎಂ ಮೇಲೆ ಆಕಸ್ಮಿಕವಾಗಿ ರಮೇಶ್ ಬಿದ್ದಾಗ ಅವರ ಕೈ ತಾನೇ ತಾನಾಗಿ ಅಧಿಕಾರಿಯ ಕೆನ್ನೆಯನ್ನು ಸವರಿರಬಹುದು. ಆದರೆ ಸಿಎಂ ನಿಜವಾಗಿ ಹೊಡೆದಿದ್ದೇನೆ ಎಂದು ಹೇಳಿದರೆ ಎಡವಟ್ಟಾಗುತ್ತದೆ. ಏಕೆಂದರೆ ಅಧಿಕಾರಿಯ ಮೇಲೆ ಕೈಮಾಡಿದ ಆರೋಪ ಅವರನ್ನು ಸುತ್ತಿಕೊಳ್ಳುತ್ತದೆ. ರಮೇಶ್ ಕೂಡ ಸಿಎಂ ತನಗೆ ಕಪಾಳಮೋಕ್ಷ ಮಾಡಿದರೆಂದರೆ ಎಡವಟ್ಟಾಗುತ್ತದೆ. ಸಿಎಂ ಮೇಲೆ ರಮೇಶ್ ಬಿದ್ದಿದ್ದರಿಂದ ಅವರ ಅಧಿಕಾರಕ್ಕೇ ಕುತ್ತು ಬರುವ ಸಾಧ್ಯತೆಯಿರುತ್ತದೆ. ರಾಜಾಶ್ರಯದಲ್ಲಿ ರಾಜನ ಕೃಪಾಕಟಾಕ್ಷದಲ್ಲಿ ಅವರ ಅಧೀನ ಅಧಿಕಾರಿಗಳು ಇರುತ್ತಾರೆ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಸಿಎಂ ಮರ್ಜಿಯಲ್ಲಿ ಅಧಿಕಾರಿ ಇರಬೇಕಾಗುತ್ತದೆ. ಹೀಗಿದ್ದಮೇಲೆ ಹೊಡೆದವರು , ಹೊಡೆಸಿಕೊಂಡವರು ಇಬ್ಬರೂ ಅಲ್ಲಗಳೆದ ಮೇಲೆ ಮಧ್ಯದಲ್ಲಿ ನಾವೇಕೆ ಮೂಗುತೂರಿಸಬೇಕು, ಬಿಡು ಬೇತಾಳ ಎಂದ ಕೂಡಲೇ ಬೇತಾಳ ಸೊಯ್ಯನೇ ಅವನ ಹೆಗಲಿನಿಂದ ಆಕಾಶಕ್ಕೇರಿ ವೃಕ್ಷದಲ್ಲಿ ನೇತುಹಾಕಿಕೊಂಡಿತು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery