ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು ನಿವಾಸಿಗಳು

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಪ್ರಚಂಡ ಮಳೆ ಸುರಿದಿದ್ದು, ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ನಿವಾಸಿಗಳು ಮನೆಯೊಳಗೆ ನುಗ್ಗಿದ ಕೆಸರು ನೀರನ್ನು ಈಚೆ ಹಾಕಲು ಹೆಣಗಾಡುತ್ತಿದ್ದು, ತಮ್ಮ ಕರೆಗಳಿಗೆ  ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ನಿವಾಸಿಗಳು ಬೆಳಿಗ್ಗೆ ಎದ್ದಾಗ ರಸ್ತೆಗಳು ನೀರಿನಿಂದ ತುಂಬಿದ, ವಿದ್ಯುತ್ ಸ್ಥಗಿತಗೊಂಡ ಅನುಭವವಾಯಿತು.

ಕೋರಮಂಗಲದ ಎಸ್‌ಟಿ ಬೆಡ್ ಪ್ರದೇಶದಲ್ಲಿ 4 ಅಡಿಗಳವರೆಗೆ ಅನೇಕ ರಸ್ತೆಗಳು ಮುಳುಗಿದ್ದು, ಅಗ್ನಿಶಾಮಕ ದಳ ರಕ್ಷಣಾ ದೋಣಿಗಳನ್ನು ಕಾರ್ಯಾಚರಣೆಗಿಳಿಸಿದೆ. ವಿಲ್ಸನ್ ಗಾರ್ಡನ್ ಜಲಕಂಠೇಶ್ವರ ನಗರದಲ್ಲಿ ಮಳೆ ನೀರು ಸುಮಾರು 50 ಹೆಚ್ಚು ಮನೆಗಳಿಗೆ ನುಗ್ಗಿದೆ.

ಮಳೆಯ ಪ್ರಕೋಪದಿಂದಾಗಿ ಸ್ವಾತಂತ್ರ್ಯದಿನಾಚರಣೆಗೆ ಅನೇಕ ಭಾಗಗಳಲ್ಲಿ ಅಡ್ಡಿಯಾಗಿದೆ. ಅಲಸೂರಿನ ತುಂಬಿದ ಚರಂಡಿಯ ಕೆಸರು ನೀರು ಮುಖ್ಯರಸ್ತೆಗೆ ನುಗ್ಗಿದ್ದರಿಂದ ವಾಹನಸವಾರರು ಕಠಿಣ ಪರಿಸ್ಥಿತಿ ಎದುರಿಸಿದರು. ಆಡುಗೋಡಿಯಲ್ಲಿ ಮಳೆಯ ನೀರು ಗೋಲ್ಡನ್ ನೆಸ್ಟ್ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಪ್ರದೇಶಕ್ಕೆ ನುಗ್ಗಿತು. ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್ ಕಾಂಪೌಂಡ್ ರಾತ್ರಿಯಿಡಿ ಸುರಿದ ಮಳೆಯಿಂದ ಕುಸಿದುಬಿದ್ದಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery