ಸ್ಟೀವ್ ಓ ಕೀಫ್ ಮಾಂತ್ರಿಕ ಸ್ಪಿನ್: ಆಸೀಸ್‌ಗೆ 333 ರನ್ ಜಯ

ಸ್ಟೀವ್ ಓ ಕೀಫ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಮಾರಕ ಸ್ಪಿನ್ ಬೌಲಿಂಗ್ ಪ್ರದರ್ಶನ ನೀಡಿ ಆಸ್ಟೇಲಿಯಾಕ್ಕೆ ಪುಣೆಯಲ್ಲಿ ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಗಳಿಸಿಕೊಟ್ಟಿದ್ದಾರೆ. ಇದರಿಂದ ಟೆಸ್ಟ್ ಪಂದ್ಯಗಳಲ್ಲಿ ಅಜೇಯ 19 ಪಂದ್ಯಗಳ ಗೆಲುವಿಗೆ ಆಸೀಸ್ ಕಡಿವಾಣ ಹಾಕಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 107 ರನ್‌ಗಳಿಗೆ ಆಲೌಟ್ ಆಗಿದ್ದು, ಎಡಗೈ ಸ್ಪಿನ್ನರ್ ಕೀಫ್ 35 ರನ್ನಿಗೆ 6 ವಿಕೆಟ್ ಕಬಳಿಸಿದರು ಮತ್ತು ನಾಥನ್ ಲಯನ್ ಉಳಿದ ವಿಕೆಟ್ ಕಬಳಿಸಿದರು. ಲಯನ್ 53 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯವನ್ನು 333 ರನ್‌ಗಳಿಂದ ಗೆದ್ದು 1-0 ಮುನ್ನಡೆಯನ್ನು ಸಾಧಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 441 ರನ್ ಗುರಿಯೊಂದಿಗೆ ಆಟ ಆರಂಭಿಸಿದ ಭಾರತ ಲಂಚ್ ಬಳಿಕ ಇಬ್ಬರೂ ಓಪನರ್‌ಗಳನ್ನು ಕಳೆದುಕೊಂಡಿತು. ನೀರಸ ಆರಂಭದ ಬಳಿಕ ವಿರಾಟ್ ಕೊಹ್ಲಿ ಕೂಡ 13 ರನ್ ಗಳಿಸಿದ್ದಾಗ ಓ ಕೀಫ್ ಚೆಂಡನ್ನು ತಪ್ಪು ಲೆಕ್ಕಾಚಾರ ಮಾಡಿದ್ದರಿಂದ ಅವರ ಆಪ್ ಸ್ಟಂಪ್ ಉರುಳಿತು.

ಓ ಕೀಫ್ ಅಶ್ವಿನ್ ಮತ್ತು ಸಾಹಾ ಅವರನ್ನು ಔಟ್ ಮಾಡಿದರೆ ಲಯನ್ ಜಡೇಜಾ ಅವರನ್ನು ಔಟ್ ಮಾಡಿದರು. ಲಯನ್ ಅವರು ಉಮೇಶ್ ಯಾದವ್ ಮತ್ತು ಇಶಾಂತ್ ಅವರನ್ನು ಕೂಡ ಔಟ್ ಮಾಡುವ ಮೂಲಕ ಭಾರತ 89ಕ್ಕೆ 5 ವಿಕೆಟ್ ಕಳೆದುಕೊಂಡಿದ್ದು 107ಕ್ಕೆ ಆಲೌಟ್ ಆಗಿ ಸೋಲನುಭವಿಸಿತು. 2004ರ ಸರಣಿ ಬಳಿಕ ಇದು ಆಸ್ಟ್ರೇಲಿಯಾದ ಮೊದಲ ಟೆಸ್ಟ್ ಜಯವಾಗಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಕಾರ್ಯತಂತ್ರಗಳನ್ನು ಬದಲಿಸಿಕೊಳ್ಳಬೇಕಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery