ಅತೀ ವೇಗದಲ್ಲಿ 250 ವಿಕೆಟ್ ಗಡಿ ಮುಟ್ಟಿದ ಅಶ್ವಿನ್ ಟೆಸ್ಟ್ ದಾಖಲೆ

ನವದೆಹಲಿ: ಭಾರತದ ಪ್ರಮುಖ ಸ್ಪಿನ್ ಬೌಲರ್ ಆರ್. ಅಶ್ವಿನ್ ಆಟದ ಇತಿಹಾಸದಲ್ಲಿ ಅತೀ ವೇಗದಲ್ಲಿ 250 ವಿಕೆಟ್ ಗಡಿಯನ್ನು ಮುಟ್ಟುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇನ್ನೊಂದು ಮೈಲಿಗಲ್ಲು ಕ್ರಮಿಸಿದ್ದಾರೆ.

ಹೈದರಾಬಾದಿನಲ್ಲಿ ನಡೆದ ಟೆಸ್ಟ್‌ನ ನಾಲ್ಕನೇ ದಿನದಂದು ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ ರಹೀಮ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ತಮ್ಮ 45ನೇ ಟೆಸ್ಟ್‌ನಲ್ಲಿ 250 ವಿಕೆಟ್ ಗಡಿಯನ್ನು ಮುಟ್ಟಿದರು. ಆಸ್ಟ್ರೇಲಿಯಾದ ಲಿಜೆಂಡ್ ಆಟಗಾರ ಡೆನ್ನಿಸ್ ಲಿಲ್ಲಿ 1981ರ ಫೆಬ್ರವರಿಯಲ್ಲಿ 250 ವಿಕೆಟ್ ಗಡಿ ಮುಟ್ಟಲು ಅಗತ್ಯವಾಗಿದ್ದಕ್ಕಿಂತ ನಾಲ್ಕು ಕಡಿಮೆ ಟೆಸ್ಟ್‌ಗಳಲ್ಲೇ ಅಶ್ವಿನ್ ಈ ವಿಕ್ರಮ ಸಾಧಿಸಿದ್ದಾರೆ.

ಅಗ್ರ ಕ್ರಮಾಂಕದ ಬೌಲರ್ ಮತ್ತು ಆಲ್ ರೌಂಡರ್ ಅಶ್ವಿನ್ ಬಾಂಗ್ಲಾ ವಿರುದ್ಧ ಪ್ರಸಕ್ತ ಪಂದ್ಯದಲ್ಲಿ 248 ಗಡಿಯನ್ನು ಮುಟ್ಟಿದರು ಹಾಗೂ ಮೂರನೇ ದಿನದ 15ನೇ ಓವರಿನಲ್ಲಿ ಶಕೀಬ್ ಅಲ್ ಹಸನ್ ವಿಕೆಟ್ ಕಬಳಿಸಿದರು. ಆದರೆ 250 ಗಡಿ ಮುಟ್ಟಲು ಸ್ವಲ್ಪ ಸಮಯ ತೆಗೆದುಕೊಂಡ ಅವರು ನಾಲ್ಕನೇ ದಿನ ರಹೀಮ್ ಆಡಿದ ಚೆಂಡು ಗ್ಲೌಸ್ ತುದಿಗೆ ತಾಗಿ ವಿಕೆಟ್ ಕೀಪರ್ ಸಹಾ ಕ್ಯಾಚ್ ಹಿಡಿದಿದ್ದರ ಫಲವಾಗಿ ಅಶ್ವಿನ್‌ಗೆ 250ನೇ ವಿಕೆಟ್ ಸಿಕ್ಕಿತು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery