ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಟ ಅಗತ್ಯ

ಲಕ್ಷಾಂತರ ಮೈಲುಗಳು ದೂರದಲ್ಲಿರುವ ಗ್ರಹಗಳು, ಸೂರ್ಯ,ಚಂದ್ರ ಮನುಷ್ಯರ ಮೇಲೆ ಪರಿಣಾಮ ಬೀರುವುದನ್ನು ವೈಜ್ಞಾನಿಕನವಾಗಿ ನಂಬುವುದಕ್ಕೆ ಸಾಧ್ಯವೇ, ಇಂತಹ ಮೌಢ್ಯಗಳನ್ನು ಜನರಲ್ಲಿ ಮೂಡಿಸಿ ಜ್ಯೋತಿಷಿಗಳು  ಹೊಟ್ಟೆ ಹೊರೆದುಕೊಳ್ಳುತ್ತಾರೆ.   ದೋಷ ಪರಿಹಾರಕ್ಕೆ ಹೋಮ, ಹವನ ಎಂದು ಒಂದಷ್ಟು ಧನವ್ಯಯ ಮಾಡಿಸುತ್ತಾರೆ.

ಆದರೆ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಎನ್ನುವುದನ್ನು ಅರಿಯಬೇಕಾಗಿದೆ. ಜ್ಯೋತಿಷಿಗಳು ಯಾವುದೋ ಜ್ಯೋತಿಷ್ಯದ ಶಾಸ್ತ್ರಗಳನ್ನು ಹೇಳಿ ಅದರಿಂದಲೇ ನಿಮಗೆ ಕೇಡು ಉಂಟಾಗಿದೆ. ನಿಮ್ಮ ಗ್ರಹ,ಗತಿ ಸರಿಯಾಗಿಲ್ಲ. ಅದಕ್ಕಾಗಿ ಇಷ್ಟೆಲ್ಲಾ ಕಷ್ಟನಷ್ಟಗಳನ್ನು ಎದುರಿಸುತ್ತಿದ್ದೀರಿ ಎಂದೆಲ್ಲಾ ಹೇಳುತ್ತಾರೆ.

ನಮ್ಮ ಕರ್ಮಫಲವನ್ನು ನಾವೀಗ ಅನುಭವಿಸುತ್ತಿದ್ದೇವೆಯೇ ಹೊರತು ಬೇರಾವುದೋ ಲೋಕದ ಗ್ರಹಗಳ ಚಲನೆಯ ಫಲವಲ್ಲ.   ಜ್ಯೋತಿಷ್ಯದಂತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಜನರಲ್ಲಿ ಮೌಢ್ಯ ಕಂದಾಚಾರಗಳನ್ನು ಟಿವಿ ವಾಹಿನಿಗಳು ಬಿತ್ತುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ.

ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸುವ ಬಗ್ಗೆ ಚಿಂತನೆ ಮಾಡುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಕ್ಕೆ ಹ್ಯಾಟ್ಸ್ ಆಫ್ ಎನ್ನಲೇಬೇಕು. ಆದರೆ ಜ್ಯೋತಿಷ್ಯದ ಟಿವಿ ಕಾರ್ಯಕ್ರಮಗಳನ್ನು ರದ್ದುಮಾಡಿದರೂ ಶತಮಾನಗಳಿಂದ ಬೇರೂರಿರುವ ಮೌಢ್ಯ, ಕಂದಾಚಾರಗಳ ವಿರುದ್ದ ಬಸವಣ್ಣನವರ ರೀತಿ ಹೋರಾಟ ಮಾಡುವ, ಮೌಢ್ಯ ಕಂದಾಚಾರಗಳನ್ನು ಬದಿಗೊತ್ತಿ ವೈಜ್ಞಾನಿಕ ಮನೋಭಾವವನ್ನು ಜನರಲ್ಲಿ ಹುಟ್ಟಿಸುವ ವ್ಯಕ್ತಿ ಈ ಜಗತ್ತಿನಲ್ಲಿ ಅವತಾರವೆತ್ತಬೇಕಾಗಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery