ಅಂತರ ಧರ್ಮೀಯ ವಿವಾಹ ವಿರೋಧಿಸಿ ಗುರುದ್ವಾರಕ್ಕೆ ಸಿಖ್ಖರ ಮುತ್ತಿಗೆ
ಲಂಡನ್; ಮಿಡ್‌ಲ್ಯಾಂಡ್ಸ್ ಪ್ರದೇಶದ ಸಿಖ್ ಗುರುದ್ವಾರದಲ್ಲಿ ಸಿಖ್ ಮತ್ತು ಸಿಖ್ಖೇತರರ ನಡುವೆ ಅಂತರಧರ್ಮ ವಿವಾಹವನ್ನು ವಿರೋಧಿಸಿದ 20-30 ಜನರಿದ್ದ ಸಿಖ್ಖರು ಹರಿತವಾದ ಆಯುಧಗಳನ್ನು ಹಿಡಿದು ಸಿಖ್ ಮಂದಿರಕ್ಕೆ ಮುತ್ತಿಗೆ ಹಾಕಿದಾಗ ಸಶಸ್ತ್ರ ಪೊಲೀಸರು ಪಶ್ಚಿಮ ಮಿಡಲ್ಯಾಂಡ್ ಗುರುದ್ವಾರವನ್ನು ಸುತ್ತುವರೆದರು.
 
ವಿಶೇಷವಾಗಿ ತರಬೇತಾದ ಅಧಿಕಾರಿಗಳು ಗುರುದ್ವಾರ ಸಾಹಿಬ್ ಒಳಗಿದ್ದು, ಅಲ್ಲಿ ಮುತ್ತಿಗೆ ಹಾಕಿದ ಸಿಖ್ಖರ ಜತೆ ಸಂಧಾನ ನಡೆಸಿದರು.
ಈ ಘಟನೆಯನ್ನು ಭಯೋತ್ಪಾದನೆ ಕ್ರತ್ಯವಾಗಿ ನಾವು ಪರಿಗಣಿಸುವುದಿಲ್ಲ ಎಂದು ವಾರ್ವಿಕ್ ಶೈರ್ ಪೊಲೀಸ್ ವಕ್ತಾರ ತಿಳಿಸಿದರು. ಮಂದಿರದಲ್ಲಿ ಧಾರ್ಮಿಕ ನಾಯಕರು ಶಾಂತಿಯುತ ಇತ್ಯರ್ಥಕ್ಕೆ ಅಧಿಕಾರಿಗಳ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಕ್ತಾರ ಹೇಳಿದರು.


Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery