ಭಾರತ ದೇಶ ಸಾಧಿಸಿದ್ದೇನು?

ಎಲೈ ವಿಕ್ರಮಾದಿತ್ಯ, ಭಾರತ ದೇಶ ಸ್ವಾತಂತ್ರ್ಯ ಪಡೆದಿದ್ದು 1947ರಂದು.  ಬರುವ ವರ್ಷ 2017ಕ್ಕೆ 70 ವರ್ಷಗಳನ್ನು ಪೂರೈಸುತ್ತದೆ. ಇಷ್ಟು ವರ್ಷಗಳಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಸಾಧಿಸಿದ್ದೇನು? ಚೀನಾ, ಜಪಾನ್ ಮುಂತಾದ ಏಷ್ಯಾ ಖಂಡದ ರಾಷ್ಟ್ರಗಳು ಆರ್ಥಿಕ ಮುನ್ನಡೆ ಸಾಧಿಸಿ ದಾಪುಗಾಲಿಡುತ್ತಿದ್ದರೆ ನಮ್ಮ ದೇಶ ಆಮೆಯ ನಡಿಗೆಯಂತೆ ನಿಧಾನಗತಿಯಾಲ್ಲಿ ಚಲಿಸುತ್ತಿರುವುದೇಕೆ?

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಗಳ ಬಡವರ ಸಂಖ್ಯೆ ಹೆಚ್ಚಾಗಿರುವುದೇಕೆ. ನಮ್ಮ ದೇಶ ಯಾವ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. 

ಭಾರತ ಮತ್ತು ಪಾಕಿಸ್ತಾನ ಸಂಬಂಧ 10 ವರ್ಷಗಳಲ್ಲಿ ಏನಾಗಬಹುದು? ಇವೆಲ್ಲಾ ಪ್ರಶ್ನೆಗಳಿಗೆ ನೀನು ಉತ್ತರಿಸದಿದ್ದರೆ ನಿನ್ನ ತಲೆ ಐಎಸ್ ಸಿಡಿಸುತ್ತಿರುವ ‌ಬಾಂಬ್‌ಗೆ ಹೋಳಾದಂತೆ 100 ಹೋಳಾಗುತ್ತದೆ ಎಚ್ಚರ.
ಎಲೈ ಬೇತಾಳ, ನೀನು ನನ್ನನ್ನು ಆರ್ಥಿಕತಜ್ಞನೆಂದು ಭಾವಿಸಿ ಪ್ರಶ್ನೆ ಕೇಳುತ್ತಿರುವಿಯಾ, ಅಥವಾ ಕಠಿಣವಾದ ಪ್ರಶ್ನೆಗಳನ್ನು ಕೇಳಿ ಸಿಕ್ಕಿಹಾಕಿಸಲು ಪ್ರಯತ್ನಿಸುತ್ತೀಯಾ ಒಂದೂ ತಿಳಿಯದು. ಆದರೂ  ಕೇಳುವಂತವನಾಗು, ಆಮೆ ಮತ್ತು ಮೊಲದ ಓಟದ ಸ್ಪರ್ಧೆ ನಿನಗೆ ಗೊತ್ತಿಲ್ಲವೇ, ಮೊಲ ವೇಗವಾಗಿ ಓಡಿ ಸುಸ್ತಾಗಿ ಮದ್ಯದಾರಿಯಲ್ಲೇ ನಿದ್ರೆಗೆ ಜಾರಿದಾಗ ಆಮೆ ಗುರಿಮುಟ್ಟಿತು.

ಇದೇ ರೀತಿ ಚೀನಾ, ಜಪಾನ್ ನಾಗಾಲೋಟದಲ್ಲಿ ಓಡಿ ಸುಸ್ತಾಗಿ ಮಲಗಲಿದ್ದು, ಭಾರತ ನಿಧಾನವಾಗಿ ಗುರಿ ಮುಟ್ಟುತ್ತದೆ. ಇನ್ನು ಬಡವರ ಸಂಖ್ಯೆ ಯಾಕೆ ಹೆಚ್ಚಾಗಿದೆ ಎಂದು ಕೇಳಿದ್ದೀಯಾ, ಬಡವರಿಗೆ ಕಳ್ಳತನದ ಭಯವಿಲ್ಲ, ನಾಳೆಯ ಚಿಂತೆಯಿಲ್ಲ, ನೆಮ್ಮದಿಯಾಗಿ ರಾತ್ರಿ ನಿದ್ರೆಗೆ ಜಾರುತ್ತಾರೆ, ಆದರೆ ಶ್ರೀಮಂತರಿಗೆ ಕಳ್ಳರ ಕಾಟ, ಹಣವನ್ನು ರಕ್ಷಿಸಿಡುವುದು ಹೇಗೆಂಬ ಆತಂಕ, ನಾನಾ ರೀತಿಯ ತಲೆಬಿಸಿಗಳು, ರೋಗ, ರುಜಿನಗಳು, ರಾತ್ರಿ ನಿದ್ರೆಯೂ ಬಾರದೆ ನೆಮ್ಮದಿಗೆ ಭಂಗ, ಬಡವರಾಗಿದ್ದರೇ ಒಳ್ಳೆಯದಲ್ಲವೇ,

ಹೀಗಾಗಿ ನಮ್ಮ ದೇಶವನ್ನು ಆಳುವ ಪ್ರಭುಗಳು ಬಡವರು ನೆಮ್ಮದಿ ಕಳೆದುಕೊಳ್ಳಬಾರದೆಂದು ನಾನಾ ಯೋಜನೆಗಳ ಮುಖಾಂತರ ಅವರನ್ನು ಬಡವರಾಗಿಯೇ ಇರಿಸಿ ಓಟ್ ಬ್ಯಾಂಕ್ ರೀತಿ  ಮಾಡಿದ್ದಾರೆ. ನಮ್ಮ ದೇಶ ಜನಸಂಖ್ಯಾ ಸ್ಫೋಟದಲ್ಲಿ ಪ್ರಗತಿ ಸಾಧಿಸಿಲ್ಲವೇ, ಅದೇನು ಕಡಿಮೆ ಪ್ರಗತಿಯೇ, ಇನ್ನು 10 ವರ್ಷಗಳಲ್ಲಿ
ಭಾರತ- ಪಾಕ್ ಸಂಬಂಧ ಏನಾಗಬಹುದು. ಇದೊಂದು ಸರಳ ಪ್ರಶ್ನೆಯಾಗಿದೆ. ಪಾಕ್‌ನ ತರಲೆ ಪ್ರವ್ರತ್ತಿಯಿಂದಾಗಿ 10 ವರ್ಷಗಳ ನಂತರವೂ ಭಾರತ-ಪಾಕ್  ನಡುವೆ  ಮಾತುಕತೆ ಪೋಸ್ಟ್‌ಪೋನ್ ಆಗುತ್ತಲೇ ಇರುತ್ತದೆ. ವಿಕ್ರಮಾದಿತ್ಯ ಹೀಗೆಂದು ಹೇಳುತ್ತಲೇ ನಿರುತ್ತರವಾದ ಬೇತಾಳ ರೊಯ್ಯನೇ ಹೆಗಲಿನಿಂದ ಮೇಲಕ್ಕೆ ಹಾರಿ ವೃಕ್ಷದಲ್ಲಿ ನೇತುಹಾಕಿಕೊಂಡಿತು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery