ಭಾರತದ ರಸ್ತೆ ಅಪಘಾತಗಳಲ್ಲಿ ದಿನನಿತ್ಯ 410 ಜನರ ಬಲಿ

ನವದೆಹಲಿ: ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ ಕಳೆದ ವರ್ಷ ಅಸುನೀಗಿದವರ ಸಂಖ್ಯೆ ಪ್ರತಿ ದಿನ 410 ಜನರು. 2015ರಲ್ಲಿ ಈ ಸಂಖ್ಯೆ 400ರಷ್ಟಿತ್ತು. 2016ರಲ್ಲಿ ರಸ್ತೆ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಅದರ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿತ್ತು.

2015ರಲ್ಲಿ 1.46 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಅಸುನೀಗಿದ್ದರೆ, ಕಳೆದ ವರ್ಷ 1.5 ಲಕ್ಷ ಜನರು ಅಪಘಾತಗಳಲ್ಲಿ ಅಸುನೀಗಿದ್ದಾರೆ. ಭಾರತ ರಸ್ತೆ ಅಪಘಾತಗಳಲ್ಲಿ ಗರಿಷ್ಠ ಸಾವುಗಳನ್ನು ದಾಖಲಿಸಿದೆ. ಮಿಜೋರಾಮ್ ಮತ್ತು ಚಂದೀಗಢ, ಡಾಮನ್ ಮತ್ತು ಡಿಯು, ದಾದ್ರಾ, ನಗರ ಹವೇಲಿ ಮುಂತಾದ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲಾ ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ಅಪಘಾತ ಕುರಿತಂತೆ ಕೇಂದ್ರ ಮತ್ತು ಸುಪ್ರೀಂಕೋರ್ಟ್ ಜತೆ ಅಂಕಿಅಂಶಗಳನ್ನು ಹಂಚಿಕೊಂಡಿದೆ.


ಈ ಅಂಕಿಅಂಶವು ಕಳವಳಕಾರಿಯಾಗದ್ದು, ಮೃತರು ಮತ್ತು ಗಾಯಾಳುಗಳ ಸಂಖ್ಯೆಯನ್ನು ಕ್ರಮೇಣ ಕಡಿಮೆಮಾಡಲು ನಾವು ಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಭಾರತದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ನೋಡಿದರೆ ಜನರ ಜೀವಕ್ಕೆ ಬೆಲೆಯೇ ಇಲ್ಲವೆನಿಸುತ್ತದೆ. ಚಿಕ್ಕವಯಸ್ಸಿನಲ್ಲೇ ತಮ್ಮ ಅಮೂಲ್ಯ ಜೀವನವನ್ನು ರಸ್ತೆ ಅಪಘಾತಗಳಿಂದ ಕಳೆದುಕೊಂಡವರು ಎಷ್ಟೋ ಮಂದಿ.

ರಸ್ತೆ ಅಪಘಾತಗಳಿಗೆ ವೇಗವಾದ ವಾಹನ ಚಾಲನೆ ಮತ್ತು ಕುಡಿದು ವಾಹನ ಓಡಿಸುವುದು ಮುಂತಾದ ಕಾರಣಗಳನ್ನು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಹಳ್ಳ, ತಗ್ಗುಗಳಿಂದ ಕೂಡಿದ ಅಸಮರ್ಪಕ ರಸ್ತೆಗಳು, ಅವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ರಸ್ತೆಗಳಲ್ಲಿ ಸೂಕ್ತ ಸಂಚಾರ ನಿಯಂತ್ರಣದ ಕೊರತೆ ಕೂಡ ಕಾರಣವೆಂದು ಹೇಳಿದರೆ ತಪ್ಪಾಗಲಾರದು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery